• ಡೀಸೆಲ್ ಟ್ಯಾಂಕರ್ ಅಗ್ನಿಗಾಹುತಿ; ಓರ್ವ ಜೀವಂತ ದಹನ?

  BREAKING NEWS, News, Regional, Top News

  ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ ಹೊಸಂಗಡಿಗೆ ತೆರಳುತ್ತಿದ್ದ ಡೀಸೆಲ್‌ ಟ್ಯಾಂಕರ್ ಗಿರಿಯಾಪುರ ಗ್ರಾಮದಲ್ಲಿ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ಓರ್ವ ವ್ಯಕ್ತಿ ಸಜೀವ ದಹನ ಹೊಂದಿದ್ದಾನೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು, ಟ್ಯಾಂಕರ್ ಜೊತೆ 5 ಮನೆಗಳೂ‌ ಬೆಂಕಿಗಾಹುತಿಯಾಗಿವೆ. ಟ್ಯಾಂಕರ್ ಬೆಂಕಿ ನಂದಿಸಲು ಸ್ಥಳೀಯರು ಸತತ ಪ್ರಯತ್ನ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕ್ಲೀನರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

 • ಉಜಿರೆ ಕಾಲೇಜಿಗೆ ಉತ್ಕಷ್ಟತ ಮಾನ್ಯತೆಯಿಂದ ಜವಾಬ್ದಾರಿ ಹೆಚ್ಚಿದೆ : ಡಾ| ಬಿ.ಯಶೋವರ್ಮ

  News, Regional

  ಮಂಗಳೂರು: ಇಂಡಿಯಾ ಟುಡೆ ನಿಯತಕಾಲಿಕೆಯು ದೇಶದ ಅತ್ಯುತ್ತಮ ಕಾಲೇಜಿಗಳ ಆಯ್ಕೆಯಲ್ಲಿ ಈಗ ಗ್ರಾಮೀಣ ಕಾಲೇಜುಗಳನ್ನು ಪರಿಗಣ ಸುತ್ತಿರುವುದು ಸ್ವಾಗತಾರ್ಹ ಬೆಳವಣ ಗೆ, ಪತ್ರಿಕೆಯ ಅತ್ಯತ್ತಮ ಕಾಲೇಜು ರ್ಯಾಕಿಂಗ್‍ನಲ್ಲಿ ಉಜಿರೆಯ ಕಾಲೇಜಿಗೆ ನೂರರ ಒಳಗೆ ಹಲವು ವಿಭಾಗದಲ್ಲಿ ಉತ್ಕ್ರಷ್ಟ ಸ್ಥಾನ ದೊರಕಿರುವುದು, ಗುಣಮಟ್ಟ ಕಾಯ್ದುಕೊಂಡು ಮುನ್ನಡೆಯಲು ನೈತಿಕ ಬೆಂಬಲ ಸಿಕ್ಕಂತಾಗಿದೆ ಎಂದು ಉಜಿರೆಯ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೆಯ ಬೆಸ್ಟ್ ಕಾಲೇಜು ಸಮೀಕ್ಷೆಯಲ್ಲಿ ಉಜಿರೆ ಕಾಲೇಜಿಗೆ ಅತ್ಯುತ್ತಮ […]

 • ಮುಂದುವರಿದ ಮಳೆ; ಹಲವೆಡೆ ರಸ್ತೆ ಸಂಪರ್ಕ ಕಡಿತ

  BREAKING NEWS, News, Regional, Top News

  ಮಂಗಳೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗುರುವಾರ ರಾತ್ರಿಯಿಂದ ತೀವ್ರಗೊಂಡಿದೆ. ದಿಢೀರನೆ ರಭಸಗೊಂಡ ಮಳೆಯ ಪರಿಣಾಮವಾಗಿ ರಾಜ್ಯದ ಹಲವು ಪ್ರಮುಖ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಪ್ರಸಿದ್ಧ ತೀರ್ಥ ಕ್ಷೇತ್ರ ಶೃಂಗೇರಿಯಲ್ಲಿ ತುಂಗಾ ನದಿ ಅಪಾಯದ ಮಟ್ಟವನ್ನು ಮೀರಿ‌ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಕ್ತರು ಹಾಗೂ ಪ್ರವಾಸಿಗರು ಮಳೆಯಿಂದ ಪರಿತಪಿಸುವಂತಾಗಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿರಾಜಪೇಟೆ ಹಾಗೂ ಕೇರಳದ ರಸ್ತೆ ಸಂಪರ್ಕ ಕಡಿದು ಹೋಗಿದೆ. ನದಿ ತುಂಬಿ ಹರಿಯುತ್ತಿರುವ ಪರಿಣಾಮ ಸೇತುವೆ ಮುಳುಗಿ […]

 • ಕಾಂಗ್ರೆಸ್ ತೆಕ್ಕೆಗೆ ಜಯನಗರ

  BREAKING NEWS, News, Regional, Top News

  ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯನಗರವನ್ನು ತನ್ನ ತೆಕ್ಕೆಗೆ ತಗೆದುಕೊಂಡಿದೆ. 2008ರ ಕೇತ್ರದ ವಿಭಜನೆ ಬಳಿಕ ಬಿಜೆಪಿಯ ಭದ್ರಕೋಟೆ ಆಗಿದ್ದ ಜಯನಗರ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 54,457 ಮತಪಡೆದು ಬಿಜೆಪಿಯ ಬಿ.ಎನ್ ಪ್ರಹ್ಲಾದ ವಿರುದ್ಧ 2,889 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರಹ್ಲಾದ 51,568 ಮತಗಳಿಸಿದ್ದಾರೆ. ಮೊದಲ ಐದು ಸುತ್ತುಗಳ ಎಣಿಕೆ ಮುಗಿಯುವ ವರೆಗೆ ಸೌಮ್ಯಾ ರೆಡ್ಡಿ ಮತಗಳ […]

 • ಮಳೆಗೆ ನಲುಗಿದ ಚಾರ್ಮಾಡಿ ಘಾಟಿ; ಭೂಕುಸಿತ

  BREAKING NEWS, News, Regional, Top News

  ಮಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದ ಪರಿಣಾಮವಾಗಿ ರಸ್ತೆಯಲ್ಲಿ ಮಣ್ಣು, ಮರಗಳು ರಾಶಿ ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇಲಾಖೆಯ ಅಧಿಕಾರಿಗಳು ರಸ್ತೆ ಸಂಚಾರ ಪುನರಾರಂಭಕ್ಕೆ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆ ವೀಕ್ಷಿಸಿದರು. ರಸ್ತೆ ದುರಸ್ತಿಗಾಗಿ ಜೂನ್ […]

 • ಹಂಚಿಕೆಯಾಯ್ತು ಸಂಪುಟ ಖಾತೆಗಳು

  News, Regional, Top News

  ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದೆ. ಜೂನ್ ಮೊದಲ ವಾರದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ ಪರಮೇಶ್ವರ ಅವರ ಜತೆಗೆ ಇನ್ನು 20 ಮಂದಿ ಸಂಪುಟ ಸೇರಲಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ 12, ಜೆಡಿಎಸ್ 8 ಮಂದಿ ಶಾಸಕರಿಗೆ ಸಚಿವರ ಸ್ಥಾನದ ಭಾಗ್ಯ ಸಿಗಲಿದೆ.ಮಿಕ್ಕ ನಾಲ್ಕು ಖಾತೆಗಳಿಗೆ ನಂತರದ ದಿನಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ. ಸದ್ಯಕ್ಕೆ ಪಕ್ಷವಾರು ಖಾತೆ ಹಂಚಿಕೆ ಹೀಗಿದೆ: ಜೆಡಿಎಸ್​ : ಇಂಧನ, ಹಣಕಾಸು, ಲೋಕೋಪಯೋಗಿ, ಸಹಕಾರ, […]

 • ನಾಳೆ ರೈತ ಮುಖಂಡರು ಪ್ರತಿಪಕ್ಷ ನಾಯಕರ ಜತೆ ಸಿಎಂ ಸಭೆ

  News, Regional, Top News

   ಬೆಂಗಳೂರು : ಕೃಷಿ ಸಾಲ ಮನ್ನಾ,  ರೈತರ ಆತ್ಮಹತ್ಯೆ ಹಾಗೂ ಕೃಷಿಕರ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮೇ 30 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ಕೃಷಿಕರ ಸಭೆ ಕರೆದಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು,ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಹ ಈ ಸಭೆಗೆ ಆಹ್ವಾನಿಸಲಾಗಿದೆ. ಅಲ್ಲದೆ, ಪ್ರತಿ ಜಿಲ್ಲೆಯಿಂದ […]

 • ಎಫ್ ಬಿಯಲ್ಲಿ ಸ್ಟೇಟಸ್ ಹಾಕಿ ಮಹಿಳೆ ಆತ್ಮಹತ್ಯೆ

  Crime, News, Regional

  ಕೋಲಾರ: ಮಹಿಳೆಯೊಬ್ಬರು ಸಾಯುತ್ತೇನೆಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವ್ಯಾ (23) ಮೃತ ಮಹಿಳೆ. ಸೋಮವಾರವಷ್ಟೇ ಸಾಯುತ್ತೇನೆಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಮಹಿಳೆ ಇಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ತನ್ನ ಚಿಕ್ಕಮ್ಮನ ಜೊತೆ ಚಿನ್ನದ ಒಡವೆ ವಿಚಾರಕ್ಕೆ ದಿವ್ಯಾ ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿ ಮಾಡಿ ರಾಮಚಂದ್ರ ಎಂಬುವರೊಂದಿಗೆ […]

 • ವಿಶ್ವಾಸ ಮತ ಗೆದ್ದ ಎಚ್ ಡಿಕೆ

  News, Regional, Top News

  ಬೆಂಗಳೂರು : ಬಿಜೆಪಿ ನಾಯಕರ ಭಾರಿ ಹೈಡ್ರಾಮದ ನಡುವೆ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. 12:30 ಕ್ಕೆ ಶುರುವಾದ ವಿಧಾನಸಭಾ ಕಲಾಪದಲ್ಲಿ ಮೊದಲಿಗೆ ಸ್ಪೀಕರ್ ಆಯ್ಕೆ ನಡೆಯಿತು. ನಂತರ ಸಿಎಂ ಎಚ್ ಡಿಕೆ ವಿಶ್ವಾಸಮತ ಬೇಡಿಕೆ ಇಟ್ಟರು. ವಿಶ್ವಾಸಮತ ಸಾಬೀತು ಪಡಿಸುವಾಗ ಬಹು ಸುದೀರ್ಘವಾದ ಭಾಷಣ ಮಾಡಿದ ಹೆಚ್ ಡಿಕೆ ತಮ್ಮ ಹಿಂದಿನ ಸರ್ಕಾರದ ಅವಧಿಯ ಸಾಧನೆಗಳನ್ನು ನೆನಪು ಮಾಡಿಕೊಂಡರು. ಇನ್ನೂ ಹೆಚ್ ಡಿಕೆ ಬಹುಮತ ಸಾಬೀತಿಗೂ ಮುನ್ನವೇ ಪ್ರತಿಪಕ್ಷ ಬಿಜೆಪಿ ಸದನದಿಂದ […]

 • ವಿಧಾನಸಭಾ ಸಭಾಪತಿಯಾಗಿ ರಮೇಶ್ ಕುಮಾರ್ ಅಯ್ಕೆ

  News, Regional, Top News

  ಬೆಂಗಳೂರು : ವಿಧಾನಸಭೆಯ ಸ್ಪೀಕರ್ ಆಗಿ ಕೆ.ಆರ್ ರಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುರೇಶ್ ಕುಮಾರ್ ಕೊನೆಕ್ಷಣದಲ್ಲಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡನೇ ಬಾರಿ ರಮೇಶ್ ಕುಮಾರ್ ಸ್ಪೀಕರ್ ಆಗಿ ಅಯ್ಕೆಯಾಗಿದ್ದು ಈ ಹಿಂದೆ 1996ರಿಂದ 2004ರ ಅವಧಿಯಲ್ಲಿ ಸ್ಫೀಕರ್ ಆಗಿ ಕಾರ್ಯನಿರ್ವಹಿಸಿದ್ರು.

Back to Top

© 2015 - 2017. All Rights Reserved.