• ಉಪೇಂದ್ರ ರಾಜಕೀಯ ಪಕ್ಷಕ್ಕೆ ಚಾಲನೆ

  Entertainment

  ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರಗೆ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲೇ ಉಪ್ಪಿ ಹೊಸ ಪಕ್ಷ ಲಾಂಚ್ ಮಾಡಿದ್ದಾರೆ. ಹೌದು. ನಟ ಉಪೇಂದ್ರ ಅವರು ಇಂದು `ಉತ್ತಮ ಪ್ರಜಾಕೀಯ ಪಕ್ಷ’ ಎಂಬ ಹೊಸ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿನೂತನವಾಗಿ ಪಕ್ಷವನ್ನು ಲಾಂಚ್ ಮಾಡಿದ ಅವರು, ಇನ್ಮುಂದೆ ನನ್ಮ ಬರ್ತ್ ಡೇ ಯುಪಿಪಿ ಬರ್ತ್ ಡೇ ಆಗಲಿದೆ ಅಂತ ಹೇಳಿದ್ರು. ವೇದಿಕೆ ಮೇಲೆ ಯುಪಿಪಿಐ ಎಂಬ ಪದಗಳನ್ನಿಟ್ಟು ಅದರಲ್ಲಿ ಐ ಎಂಬ ಪದಕ್ಕೆ ಬೆಂಕಿ ಹಚ್ಚಿ […]

 • ಕಲ್ಯಾಣ ಮಂಟಪ ಅಲಂಕಾರದ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು

  Crime, News

  ಚಿಕ್ಕಬಳ್ಳಾಪುರ: ಬುಧವಾರ ನಡೆಯಲಿದ್ದ ಮದುವೆಗಾಗಿ ಕಲ್ಯಾಣ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ. ರೆಡ್ಡಿಗೊಲ್ಲವಾರಹಳ್ಳಿ ನಿವಾಸಿ ಗೋಪಿನಾಥ್ (50) ಮೃತ ದುರ್ದೈವಿ. ಪೇರೇಸಂದ್ರ ಗ್ರಾಮದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಆರತಕ್ಷತೆ ನಿಗದಿಯಾಗಿತ್ತು. ಹೀಗಾಗಿ ಗೋಪಿನಾಥ್ ಕಲ್ಯಾಣ ಮಂಟಪದಲ್ಲಿದ್ದ ನೇಮ್ ಬೋರ್ಡ್ ಗೆ ಹೂವಿನಿಂದ ಅಲಂಕಾರ ಮಾಡುತ್ತಿದ್ದರು. ಬೋರ್ಡ್ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗೋಪಿನಾಥ್ ಅವರು ಸ್ಪರ್ಶಿಸಿದ್ದು, ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. […]

 • ನಂಜನಗೂಡಿನಲ್ಲಿ ಬರ್ಬರ ಕೊಲೆ

  Crime, News

  ಮೈಸೂರು: ನಂಜನಗೂಡು ಪಟ್ಟಣದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಯುವಕರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ.   ಹಲ್ಲರೆ ಗ್ರಾಮದ ಶಿವಣ್ಣ(28) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಸಾರ್ವಜನಿಕರ ಮುಂದೆ ಯುವಕರ ಗುಂಪು ಈ ಅಟ್ಟಹಾಸ ಮೆರೆದಿದೆ ಎನ್ನಲಾಗಿದೆ. ಈ ಭೀಕರ ಕೊಲೆ ನಂಜನಗೂಡು ಪಟ್ಟಣದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ನಡೆದಿದೆ. ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ವ್ಯಕ್ತಿಯ ಜೇಬಿನಲ್ಲಿ ಹರಿತವಾದ ಚಾಕು ಪತ್ತೆಯಾಗಿದೆ. ನಂಜನಗೂಡು ವೃತ್ತ ನಿರೀಕ್ಷಕ ಶಿವಮೂರ್ತಿ, ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಆನಂದ್ […]

 • ವಿಷ್ಣು ಸಮಾಧಿ ವಿವಾದ; ಮಂಡ್ಯ ರಮೇಶ್ ಬೇಸರ

  Entertainment

  ಮೈಸೂರು: ಡಾ. ವಿಷ್ಣುವರ್ಧನ್ ಅವರ ಸಮಾಧಿ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿರುವುದು ವಿಪರ್ಯಾಸದ ಸಂಗತಿ. ಅವರು ಇದ್ದಾಗ ಅವರ ಬಗ್ಗೆ ಹೇಗೆ ವಿವಾದ ಮಾಡಿದರೋ ಅದೇ ರೀತಿ ಅವರು ಹೋದ ಮೇಲೂ ವಿವಾದ ಮಾಡುತ್ತಿದ್ದಾರೆ ಎಂದು ನಟ ಮಂಡ್ಯ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ವಿಷ್ಣುವರ್ಧನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಷ್ಣುವರ್ಧನ್ ಒಬ್ಬರು ಉತ್ತಮ ಕಲಾವಿದರು. ಅಂತವರಿಗೆ ಇಲ್ಲಿ ನಿರಂತರವಾಗಿ ನೋವು, ಅಪಮಾನ ಆಗುತ್ತಾ ಬಂದಿದೆ. ಆದರೂ ಜನರ ಮನಸ್ಸಿನಲ್ಲಿ ಅವರು […]

 • ಕೋಮು ಸೌಹಾರ್ದತೆ ಹಿಂದುತ್ವದ ಗುರುತು: ಮೋಹನ್ ಭಾಗವತ್

  Featured, National, News

  ನವದೆಹಲಿ: ಮುಸ್ಲಿಂರೊಂದಿಗೆ ಸಹಬಾಳ್ವೆಯಿಂದ ಬದುಕಲು ಬಿಡದಿದ್ದಲ್ಲಿ ಅದು ಹಿಂದುತ್ವವಾಗಲು ಸಾಧ್ಯವಿಲ್ಲ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಮೂರು ದಿನಗಳ ಆರ್​ಎಸ್​ಎಸ್ ಸಮಾವೇಶದಲ್ಲಿ ಮೋಹನ್ ಭಾಗ್ವತ್ ಮಾತನಾಡುತ್ತಾ, ಮುಸ್ಲಿಂರಿಗೆ ಸಮಾನ ಹಕ್ಕು ನೀಡದಿದ್ದಲ್ಲಿ ಹಿಂದುತ್ವದ ಮೌಲ್ಯ ಕುಸಿಯುತ್ತದೆ ಹಾಗೂ ಅದನ್ನು ಹಿಂದುತ್ವ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ. ನಮ್ಮ ಸಂಘಟನೆ ಯಾವುದೇ ರಾಜಕೀಯ ಪಕ್ಷಕ್ಕಾಗಿ ದುಡಿಯುತ್ತಿಲ್ಲ. ದೇಶದ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಮಾಡಲು ಸಲಹೆ ನೀಡುತ್ತೇವೆ ಎಂದಿದ್ದಾರೆ.

 • ಮತ್ತೆ ಪ್ರತಾಪ್ ಸಿಂಹ ಕಾಲೆಳೆದ ಪ್ರಕಾಶ್ ರೈ

  News, Regional, Top News

  ಮೈಸೂರು: ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ. ಹೀಗೂ ಉಂಟೇ ಎಂದು ಸಂಸದ ಪ್ರತಾಪ್ ಸಿಂಹರಿಗೆ ಟ್ವಿಟ್ಟರ್ ಮೂಲಕ ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.   ಕೇಂದ್ರ ಪ್ರಕೃತಿ ವಿಕೋಪ ತಂಡ ಕೊಡಗು ಜಿಲ್ಲೆಯ ಹೆಬ್ಬೆಟ್ಟಗೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ಸಂಸದ ಪ್ರತಾಪಸಿಂಹ ಅವರಿಗೆ ಅಲ್ಲಿನ ಮುಖಂಡ ದೇವಯ್ಯ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪ್ರತಾಪಸಿಂಹ ಅವರು ಫೇಸ್​ಬುಕ್ ಲೈವ್​ಗೆ ಬಂದು ದೇವಯ್ಯ ಅವರ ವಯಸ್ಸಿನ ಅಂತರ ನೋಡಿ ಸುಮ್ಮನಾಗಿದ್ದೀನಿ […]

 • ಮರ್ಯಾದಾ ಹತ್ಯೆ; 1 ಕೋಟಿಯ ಸುಪಾರಿ ನೀಡಿದ ಮಾವ

  BREAKING NEWS, National, News, Top News

  ಹೈದರಾಬಾದ್: ಶನಿವಾರ ನಡೆದಿದ್ದ 23 ವರ್ಷದ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಹಂತಕರಿಗೆ 1 ಕೋಟಿ ರೂ.ಗೆ ಸುಪಾರಿ ನೀಡಿದ್ದನು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಣಯ್ ಕೊಲೆಯ ಬಳಿಕ ಹಂತಕ ಸ್ಥಳದಿಂದ ನಾಪತ್ತೆಯಾಗಿದ್ದನು. ಇಂದು ಬಿಹಾರ ಪೊಲೀಸರು ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿದ್ದಾರೆ. ಪ್ರ ಶನಿವಾರ ಪ್ರಣಯ್‍ನನ್ನು ಆತನ ಗರ್ಭಿಣಿ ಪತ್ನಿ ಅಮೃತಾ ಎದುರೇ ಕೊಲೆ ಮಾಡಲಾಗಿತ್ತು. ಪ್ರಣಯ್ ಕುಮಾರ್ 8 ತಿಂಗಳ ಹಿಂದೆ ಪ್ರೀತಿಸಿದ್ದ 21 ವರ್ಷದ ಅಮೃತ […]

 • ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ: ಯದುವೀರ್

  BREAKING NEWS, News, Regional, Top News

  ಮೈಸೂರು: ಯಾವುದೇ ರಾಜಕೀಯ ಪಕ್ಷಗಳು ನನನ್ನ ಸಂಪರ್ಕಿಸಿಲ್ಲ. ರಾಜಕೀಯಕ್ಕೆ ಬರುವುದರ ಬಗ್ಗೆ ಚರ್ಚೆಗಳು ನಡೆದಿಲ್ಲ. ಯಾರ ಜೊತೆಯೂ ಮಾತುಕತೆ ನಡೆಸಿಲ್ಲ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಆಸಕ್ತಿಯೂ ಇಲ್ಲ. ಮುಂದೇ ಏನಾಗುತ್ತೋ ಗೊತ್ತಿಲ್ಲ ಎಂದು ಯದುವೀರ್ ಹೇಳಿದ್ದಾರೆ.   ಇಂದು ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್, ಅಂಬಾರಿ ವಿಷಯವನ್ನು ನಾನು ಮಾತನಾಡುವುದಿಲ್ಲ. ನನ್ನ ಅಮ್ಮನನ್ನೇ ಕೇಳಬೇಕು. ಅಮ್ಮನಿಗೆ ಅದರ ಮೇಲೆ ಅಧಿಕಾರವಿರುವುದು. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನನಗೆ ಸದ್ಯಕ್ಕೆ ರಾಜಕಾರಣಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲ. […]

 • ಸಾಲಮನ್ನಾ; ರೈತರಿಗೆ ಸಿ ಎಂ ಕುಮಾರಸ್ವಾಮಿ ಪತ್ರ

  BREAKING NEWS, News, Regional, Top News

  ಬೆಂಗಳೂರು: ರೈತರ ಸಂಪೂರ್ಣ ಸಾಲ ಮನ್ನಾ ಭರವಸೆ ನೀಡಿದ್ದ ಸಿಎಂ ಕುಮಾರಸ್ವಾಮಿ ಕೊನೆಗೂ ಭಾಗಶಃ ಭರವಸೆ ಈಡೇರಿಸಿದ್ದಾರೆ. ಇದೀಗ ಈ ಸಾಲ‌ ಮನ್ನಾದ ರಾಜಕೀಯ ಲಾಭ ಪಡೆಯಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.   ರೈತರ ಸಂಪೂರ್ಣ ಸಾಲ ಮನ್ನಾ ವಿಚಾರವಾಗಿ ಹಲವು ಅಡೆತಡೆಗಳ ಮಧ್ಯೆ ಸಂಪೂರ್ಣವಲ್ಲವಾದರೂ ಕೆಲ ಷರತ್ತುಗಳೊಂದಿಗೆ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಬ್ಯಾಂಕ್​ಗಳ ಸಾಲ ಮನ್ನಾ ಘೋಷಣೆಯಾಗಿದ್ದರೂ ಅದರ ಜಾರಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಸಹಕಾರಿ ಬ್ಯಾಂಕ್​ಗಳ ಸಾಲ […]

 • ಅತಿವೃಷ್ಠಿ ಪೀಡಿತ ಕೊಡಗಿನ ಪ್ರದೇಶಗಳಿಗೆ ಆರ್.ವಿ. ದೇಶಪಾಂಡೆ ಭೇಟಿ

  BREAKING NEWS, News, Regional, Top News

  ಮಡಿಕೇರಿ : ಕೊಡಗು ಜಿಲ್ಲೆಯ ಜೋಡುಪಾಲ ದುರಂತ ಪ್ರದೇಶಕ್ಕೆ ಹಾಗೂ ಸಂತ್ರಸ್ತರು ಆಶ್ರಯ ಪಡೆದಿರುವ ಸ್ಥಳಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಭಾನುವಾರ ಭೇಟಿ ನೀಡಿದರು. ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮೊದಲು ಜೋಡುಪಾಲ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಘಟನಾ ಸ್ಥಳವನ್ನು ವೀಕ್ಷಿಸಿದರು. ಬಳಿಕ ಸಂತ್ರಸ್ತರು ಆಶ್ರಯ ಪಡೆದಿರುವ ಸಂಪಾಜೆ ಸರಕಾರಿ ಶಾಲೆ, ಕಲ್ಲುಗುಂಡಿ ಸರಕಾರಿ ಶಾಲೆ ಹಾಗೂ ಅರಂತೋಡು ತೆಕ್ಕಿಲ್ ಹಾಲ್‌ಗೆ ಭೇಟಿ ನೀಡಿದರು. ಸಂತ್ರಸ್ತರು ತಂಗಿರುವ ಎಲ್ಲಾ […]

Back to Top

© 2015 - 2017. All Rights Reserved.