• ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನಕ್ಕೆ ಚಾಲನೆ

  Kannada News, Regional, Top News

  ಧರ್ಮಸ್ಥಳ: ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನವನ್ನು ಇನ್ಫೋಸಿಸ್ ಸೇವಾ ಪ್ರತಿಷ್ಠಾನದ ಸುಧಾಮೂರ್ತಿ ಅವರು ಉದ್ಘಾಟಿಸಿದರು.   ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಆರ್ ಲಕ್ಷ್ಮಣ್ ರಾವ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಖ್ಯಾತ ವಿಮರ್ಶಕ ಎಸ್.ಆರ್ ವಿಜಯಶಂಕರ್, ಸಾಹಿತಿ ರಂಜನ್ ದರ್ಗಾ ಹಾಗೂ ಇನ್ನಿತರರು ಹಾಜರಿದ್ದರು.

 • ಉತ್ತಮ ಯೋಜನೆಗಳು ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತವೆ

  Kannada News, Regional

  ಉಜಿರೆ: ಉತ್ತಮ ಯೋಜನೆಗಳು ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತವೆ ಎಂದು ವೆಲ್ಲೂರ್ ತಿರುಮಲೈಕೊಡಿ ಶ್ರೀ ನಾರಾಯಣೀ ಪೀಠಂನ ಶ್ರೀ ಶಕ್ತಿ ಅಮ್ಮ  ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳವನ್ನು  ಉದ್ಘಾಟಿಸಿ ಮಾತನಾಡಿದರು.    ಅನ್ನದಾನಕ್ಕೆ  ಶ್ರೀ ಕ್ಷೇತ್ರ ಧರ್ಮಸ್ಥಳ  ಹೆಸರುವಾಸಿಯಾಗಿದೆ. ಶ್ರೀ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ  ಅನ್ನಸಂತರ್ಪಣೆ ಮಾಡಲಾಗುತ್ತದೆ. ಶ್ರೀ ಕ್ಷೇತ್ರವು ಇದಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ. ಧರ್ಮ ಭಕ್ತಿಗೆ ತುಂಬಾ ಪ್ರಾಧಾನ್ಯತೆಯನ್ನು ನೀಡುತ್ತದೆ. ಭಕ್ತಿ ಮತ್ತು ಒಳ್ಳೆಯ ಕಾರ್ಯಗಳು ಎಲ್ಲರ […]

 • ‘ಜೈನಧರ್ಮದ ಸದಾಶಯಗಳು ಜನಜನಿತವಾಗಲಿ’: ಪದ್ಮರಾಜ ದಂಡಾವತಿ

  Kannada News, Regional

  ಉಜಿರೆ: ಅಲ್ಪಸಂಖ್ಯಾತ ಎಂದು ಪರಿಗಣಿತವಾಗಿರುವ ಜೈನಧರ್ಮದ ಮೌಲಿಕ ಆಶಯಗಳು ವ್ಯಾಪಕ ಮನ್ನಣೆ ಪಡೆಯಬೇಕಿದೆ ಎಂದು ಪ್ರಜಾವಾಣಿ ಪತ್ರಿಕೆಯ ನಿವೃತ್ತ ಸಹಸಂಪಾದಕ ಪದ್ಮರಾಜ ದಂಡಾವತಿ ಹೇಳಿದರು. ಅವರು ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಗುರುವಾರದಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಜೈನ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಭಾರತ ಎಂಬ ಹೆಸರು ಈ ದೇಶಕ್ಕೆ ಬಂದಿರುವುದು ಜೈನ ಧರ್ಮದ ಪ್ರಥಮ ತೀರ್ಥಾಂಕ ವೃಷಾಭನಾಥರಿಂದ. ದೇಶದ ಧರ್ಮವಾಗಿದ್ದ ಜೈನ ಧರ್ಮವನ್ನು ಇಂದು ಅಲ್ಪಸಂಖ್ಯಾತ ಧರ್ಮ ಎಂದು ಪರಿಗಣಿಸಲಾಗುತ್ತಿದೆ. ಈ ಧರ್ಮ […]

 • ವರಿಷ್ಠರು ಯಾರಿಗೆ ಟಿಕೆಟ್ ನೀಡಿದರು ಪಕ್ಷದ ಸಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ: ಕೆ.ಎಸ್.ರಂಗಪ್ಪ

  Kannada News, Regional, Top News

  ಮೈಸೂರು: ನವೆಂಬರ್ 19 ರಂದು ಭಾನುವಾರ ಸಂಜೆ 4 ಗಂಟೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಗರದ ಗೋಕುಲಂ ಮುಖ್ಯ ರಸ್ತೆಯಲ್ಲಿ ಚಾಮರಾಜ ಕ್ಷೇತ್ರದ ಜೆಡಿಎಸ್ ಕಚೇರಿಯನ್ನ ಉದ್ಘಾಟನೆ ಮಾಡಲಿದ್ದು, ಚಾಮರಾಜ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕರ್ನಾಟಕ ವಿಕಾಸ ವಾಹಿನಿ ಕುಮಾರ್ ಪರ್ವ ಬಸ್ ಸಂಚರಿಸಲಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ ಅವರು ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು […]

 • ವೈದ್ಯರ ಮುಷ್ಕರಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಬಲಿ

  Kannada News, Regional, Top News

  ಮಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರದ ಹಿನ್ನಲೆ ಸೂಕ್ತ ಚಿಕಿತ್ಸೆ ದೊರೆಯದೆ ಪ್ರತಿಭಾವಂತ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದ ಪೂಜಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಳು. ವಾರಕ್ಕೆರೆಡು ಬಾರಿ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಆಕೆಗೆ ಡಯಾಲಿಸಿಸ್ ನಡೆಯುತ್ತಿತ್ತು. ಮಂಗಳವಾರ ಪುತ್ತೂರು ಸಿಟಿ ಆಸ್ಪತ್ರೆಗೆ ಸೇರಿಸಿದಾಗ ರಕ್ತದಲ್ಲಿ ಸಮಸ್ಯೆ ಇದೆ ತಿಳಿಯಿತು. ವೈದ್ಯರು ಡಯಾಲಿಸಿಸ್ ಮಾಡಿಸುವಂತೆ ಸಲಹೆ ನೀಡಿದ್ದರು. ಆದರೆ ಮಂಗಳೂರು ನೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಲಭ್ಯವಿರಲಿಲ್ಲ. ಗುರುವಾರ ರಾತ್ರಿ […]

 • ‘ಧರ್ಮಸ್ಥಳದಿಂದ ಸರ್ವಧರ್ಮಗಳ ಮೌಲಿಕತೆಯ ಪ್ರಸರಣ’

  Kannada News, Regional

  ಎಲ್ಲ ಧರ್ಮಗಳ ಮೌಲಿಕತೆ ಸಾರುತ್ತಿರುವ ಧರ್ಮಸ್ಥಳದ ಶ್ರೀಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬೆಂಗಳೂರಿನ ಸೇಂಟ್ ಪೀಟರ‍್ಸ್ ಪಾಂಟಿಫಿಕಲ್ ಇನ್‌ಸ್ಟಿಟ್ಯೂಟ್‌ನ ಕುಲಸಚಿವರಾದ ಆಂತೋಣಿ ರಾಜ್ ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.  ಎಲ್ಲಾ ಧರ್ಮಗಳು ಬೋಧಿಸುವುದು ಒಂದೇ ಧರ್ಮ, ಅದು ಮಾನವ ಧರ್ಮ. ’ಧರ್ಮಾಂಧರಾಗದಿರಿ. ಬದಲಿಗೆ ಮನುಷ್ಯತ್ವದೊಂದಿಗಿರಿ’ ಎಂಬುದು ಯೇಸುವಿನ ಸಂದೇಶವಾಗಿತ್ತು. ಹಾಗೆಯೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವೂ ಇದೇ […]

 • ‘ಎಲ್ಲೆಡೆಯೂ ಸರ್ವಧರ್ಮ ಸಮ್ಮೇಳನಗಳಾಗಲಿ’

  Kannada News, Regional

  ಉಜಿರೆ: ಭಾರತದ ವಿವಿಧ ಪ್ರದೇಶಗಳ ಪ್ರತಿಯೊಂದು ಓಣಿಯಲ್ಲೂ ಸರ್ವಧರ್ಮ ಸಮ್ಮೇಳನಗಳು ನಡೆದರೆ ಭಾವೈಕ್ಯತೆಯ ಬದುಕು ತಾನಾಗಿಯೇ ಅರಳಿಕೊಳ್ಳುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಕರಾವಳಿ ವಲಯ ಸಂಚಾಲಕ ಉಡುಪಿಯ ಅಕ್ಬರ್ ಅಲಿ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ೮೫ನೇ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು. ರಾಜಕೀಯದ ಕಾರಣಕ್ಕಾಗಿ ಭಾರತದ ಸೌಹಾರ್ದತೆಯ ಬದುಕಿಗೆ ಧಕ್ಕೆಯೊದಗಿದೆ. ಭಾರತದ ಪ್ರತಿಯೊಬ್ಬರೂ ಒಗ್ಗಟ್ಟಿನೊಂದಿಗಿರಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು. ಧರ್ಮ ಯಾವತ್ತೂ ಒಡೆಯುವುದಿಲ್ಲ. […]

 • ಸರ್ವಜನ ಹಿತದೊಂದಿಗಿನ ನಡೆಯೇ ನಿಜಧರ್ಮ

  Kannada News, Regional

  ಉಜಿರೆ: ಸರ್ವಜನರಿಗೂ ಹಿತವಾಗುವ ನಡೆಯೊಂದಿಗೆ ಗುರುತಿಸಿಕೊಳ್ಳುವುದೇ ನಿಜವಾದ ಧರ್ಮದ ಗುಣಲಕ್ಷಣ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳ ಸ್ವಾಮೀಜಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ೮೫ನೇ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.  ಧರ್ಮವು ದುರ್ಬಲ ಮತ್ತು ಪ್ರಬಲ ವರ್ಗದ ಜನರಿಗೆ ಸಮಾನ ಬದುಕನ್ನು ನೀಡಿದೆ. ಪ್ರಜಾ ರಕ್ಷಣೆಯ ಉದ್ದೇಶದೊಂದಿಗೆ ಧರ್ಮ ಅನುಷ್ಠಾನಗೊಂಡಿದೆ. ಧರ್ಮಕ್ಕಿಂತ ರಕ್ಷಣೀಯ ಸಾಧನವಿಲ್ಲ. ದುಷ್ಟ ಸಂಹಾರಕ್ಕಾಗಿ ಮಾತ್ರ […]

 • ನಾಯಿ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ

  Kannada News, Regional, Top News

  ಮಂಡ್ಯ: ನಾಯಿ ಮೇಲೆ ಚಿರತೆ ದಾಳಿ ಮಾಡಿದೆ. ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ದಾಳಿ ನಡೆದಿದ್ದು, ಗ್ರಾಮಕ್ಕೆ ನುಗ್ಗಿದ್ದ ಚಿರತೆ ಸಾಕು ನಾಯಿ ಮೇಲೆ ದಾಳಿ ಮಾಡಿ ಎಳೆದೊಯ್ಯಲು ಯತ್ನಿಸಿದೆ ಎಂದು ಹೇಳಲಾಗುತ್ತಿದೆ. ನಾಯಿ ಚೀರಾಟದಿಂದ ಮಾಲೀಕರು ದೊಣ್ಣೆ ಹಿಡಿದು ಚಿರತೆಯನ್ನು ಓಡಿಸಿದ್ದಾರೆ. ರಂಗಸ್ವಾಮಿ ಎಂಬುವವರು ಸಾಕಿದ್ದ ಪಮೋರಿಯನ್ ನಾಯಿ ಮೇಲೆ ಚಿರತೆ ದಾಳಿ ನಡೆಸಿ ಕತ್ತಿನ ಭಾಗಕ್ಕೆ ಕಚ್ಚಿದೆ. ತೀವ್ರವಾಗಿ ಗಾಯಗೊಂಡಿರುವ ನಾಯಿಗೆ ಚಿಕಿತ್ಸೆ ನೀಡಲಾಗಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿರತೆಯನ್ನು ಸೆರೆ […]

 • ಖಾಸಗಿ ವೈದ್ಯರ ಮುಷ್ಕರಕ್ಕೆ ಚಾಮರಾಜನಗರ ರೈತ ಬಲಿ

  Kannada News, Regional, Top News

  ಚಾಮರಾಜನಗರ: ಖಾಸಗಿ ವೈದ್ಯರು ಮತ್ತು  ಸರ್ಕಾರ ಹಗ್ಗ ಜಗ್ಗಾಟಕ್ಕೆ ಮತ್ತೊಂದು‌ ಜೀವ ಬಲಿಯಾಗಿದೆ. ಹಸು ತಿವಿದು ಗಾಯಗೊಂಡಿದ್ದ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಮಾದೇಗೌಡ(52) ಮೃತ ರೈತ.  ಚಾಮರಾಜನಗರ ಜಿಲ್ಲೆಯ ಯಳದುಂಬ ಗ್ರಾಮ ವಾಸಿಯಾದ ಮಾದೇಗೌಡ ಅವರು ಹಸು ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ತಕ್ಷಣಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  ಅಲ್ಲಿ ಸೂಕ್ತ ಚಿಕಿತ್ಸೆ ಲಭಿಸದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದರು. ಆದರೆ ಅಲ್ಲಿ ಕೂಡ ಸೂಕ್ತ ಚಿಕಿತ್ಸೆ […]

Back to Top

© 2015 - 2017. All Rights Reserved.