• ವಿಜಯೇಂದ್ರಗೆ ಟಿಕೇಟ್ ತಪ್ಪಲು ನಾನೇ ಕಾರಣ – ಅಮಿತ್ ಷಾ

  News, Regional, Top News

  ಬೆಂಗಳೂರು : ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರಗೆ ಟಿಕೇಟ್ ನೀಡದೆ ಒರುವ ನಿರ್ಧಾರ ನನ್ನದೇ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ವರುಣಾದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದು ಸ್ವತಃ ನಾನೇ ಅಲ್ಲಿ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಬಹುಮತ ಬರುವುದು ಸ್ಪಷ್ಟವಾಗಿದ್ದು, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ, ಅದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಾವು ಕೊಟ್ಟ ಮಾತಿಗೆ ಬದ್ದರಾಗಿರುತ್ತೇವೆ ಎಂದು ಅಮಿತ್ ಷಾ ಮಾಧ್ಯಮಿಗೆ ತಿಳಿಸಿದರು.

 • ನೈಸ್ ದೊರೆಗೆ ಸವಾಲಾಕಿದ ಸಹೋದರ

  News, Regional, Top News

  ಬೀದರ್ : ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಈ ಬಾರಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕಣಕ್ಕಿಳಿದಿದ್ದಾರೆ. ಆದ್ರೆ ಈ ಬಾರಿ ಗೆಲುವು ಸಾಧಿಸುವುದು ಮಾತ್ರ ಕಷ್ಟಕರವಾಗಿದೆ.2008ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ವಿರುದ್ದ ಕೇವಲ 1000 ಮತಗಳ ಅಂತರದಲ್ಲಿ ಸೋತಿದ್ದ ಖೇಣಿ ಸಹೋದರ, ಸಂಜಯ್ ಖೇಣಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಸಹೋದರ ಅಶೋಕ್ ಖೇಣಿಗೆ ಕ್ಷೇತ್ರ ತ್ಯಾಗ ಮಾಡಿ, ಹಗಲು ರಾತ್ರಿ ಓಡಾಡಿ ಗೆಲ್ಲಿಸಿದ್ದ ಸಂಜಯ್ ಖೇಣಿ ಈ […]

 • ನಾಳೆ ದ್ವೀತಿಯ ಪಿಯು ಫಲಿತಾಂಶ ಪ್ರಕಟ

  Kannada News, News, Regional, Top News

  ಬೆಂಗಳೂರು :  ಏಪ್ರಿಲ್ 30ರಂದು ದ್ವೀತಿಯ ಪಿಯು ಫಲಿತಾಂಶ ಪ್ರಕಟವಾಗಲಿದೆ‌. 6.90 ಸಾವಿರ ವಿದ್ಯಾರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ನಾಳೆ ಮಧ್ಯಾಹ್ನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲಿ ಫಲಿತಾಂಶ ಬಿಡಯಗಡೆಯಾಗಲಿದೆ. ಮೇ.1ರಂದು ಆಯಾ ಶಾಲಾ ಕಾಲೇಜುಗಳಲ್ಲಿ ಫಲಿತಾಂಶವನ್ನ ಪ್ರಕಟಿಸಲಾಗುವುದು‌ 53 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿದ್ದು, ನಾಳೆ ವಿದ್ಯಾರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ. http://puc.kar.nic.in/ http://puc.karresults.nic.in/ http://pue.kar.nic.in/ ಈ ವೆಬ್ಸೈಟ್ ಗಳಲ್ಲಿ ಪಿಯು ಫಲಿತಾಂಶ ನೋಡಬಹುದಾಗಿದೆ.

 • ನನ್ನ ಹೆಸರಲ್ಲಿ ಗೌಡ ಎಂದಿರುವುದು ತಪ್ಪಾ..? – ಹೆಚ್ ಡಿ ದೇವೇಗೌಡ

  News, Regional, Top News

  ಮೈಸೂರು: ದೇವೇಗೌಡರು ಕೇವಲ ಗೌಡ ಸಮುದಾಯದ ಪರ ಎಂಬ ಟೀಕೆಗೆ ಬೇಸರಗೊಂಡ ಜನತಾದಳ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ‘ನಮ್ಮಪ್ಪ ನನಗೆ ‘ಗೌಡ’ ಎಂದು ಹೆಸರಿಟ್ಟಿದ್ದು ತಪ್ಪಾ? ನಾನು ಯಾರಿಗೆ ಮೋಸ ಮಾಡಿದ್ದೀನಿ? ಎಂದರು. ಮೈಸೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಯಾವ ಪಾಪವನ್ನೂ ಮಾಡಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಿದೆ. ನಮ್ಮಪ್ಪ ನನಗೆ ಗೌಡ ಎಂದು ಹೆಸರಿಟ್ಟರು. ಯಾವ ವರ್ಗಕ್ಕೆ ಮೋಸ ಮಾಡಿದ್ದೇನೆ ಹೇಳಿ’ ಎಂದು ಪ್ರಶ್ನಿಸಿದರು. ನಾನು ಯಾರನ್ನು […]

 • ಕ್ರಿಶ್ಚಿಯನ್ ಸಂಪ್ರದಾಯದಂತೆ ಚಿರು ಲೈಫ್ ನಲ್ಲಿ ಮೂಡಿದ ‘ಮೇಘ’ ಮಾಲೆ

  Entertainment, News, Regional, Top News

  ಬೆಂಗಳೂರು: ಸ್ಯಾಂಡಲ್‍ವುಡ್ ನ ಮೊತ್ತೊಂದು ತಾರಾ ಜೋಡಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆ್ಯಂಥೋನೀಸ್ ಫೈರಿ ಚರ್ಚ್ ನಲ್ಲಿ ಇಂದು ಮಧ್ಯಾಹ್ನ ಮೇಘನಾ ಚಿರಂಜೀವಿ ಸರ್ಜಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಕಪ್ಪು ಬಿಎಂಡಬ್ಲ್ಯೂ ಕಾರಿನಲ್ಲಿ ಮೇಘನಾ ಹಾಗೂ ಬಿಳಿ ಕಾರಿನಲ್ಲಿ ಚಿರಂಜೀವಿ ಸರ್ಜಾ ಚರ್ಚ್ ಗೆ ಆಗಮಿಸಿದ್ದರು. ಮೇಘನಾ ಪ್ಯೂರ್ ವೈಟ್ ಗೌನ್ ತೊಟ್ಟಿದ್ದು, ಚಿರಂಜೀವಿ ಸರ್ಜಾ ಅವರು ಬ್ಲ್ಯಾಕ್ […]

 • ಚುನಾವಣಾ ನೀತಿ ಸಂಹಿತೆ, ಮದ್ಯ ಪ್ರಿಯರ

  News, Regional

  ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮದ್ಯದಂಗಡಿಗಳಲ್ಲಿ ಮದ್ಯದ ಕೊರತೆಯುಂಟಾಗಬಹುದು ಎಂಬ ವದಂತಿಗಳು ಹಬ್ಬಿರುವುದರಿಂದ ಬೆಂಗಳೂರು ನಗರದಲ್ಲಿ ಕೆಲವರು ಅಧಿಕ ಪ್ರಮಾಣದಲ್ಲಿ ಮದ್ಯಗಳನ್ನು ಖರೀದಿಸಿ ಸಂಗ್ರಹಿಸಿಡುತ್ತಿದ್ದಾರೆ. ಇತ್ತೀಚೆಗೆ ಮದ್ಯ ಪೂರೈಕೆ ಕಡಿಮೆಯಾಗಿದ್ದು ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಮದ್ಯದಂಗಡಿ ಮಾಲಿಕರು ಸಹ ಹೇಳುತ್ತಿದ್ದಾರೆ. ಆದರೆ ನಿಯಮಾನುಸಾರ ಮದ್ಯಗಳು ಪೂರೈಕೆಯಾಗುತ್ತಿವೆ ಎನ್ನುತ್ತದೆ ಅಬಕಾರಿ ಇಲಾಖೆ. ಮದ್ಯಗಳ ದುರುಪಯೋಗವಾಗದಂತೆ ಸಂಗ್ರಹವಾಗಿರುವ ಮದ್ಯಗಳನ್ನು ಮದ್ಯದಂಗಡಿಗಳು ಚುನಾವಣೆಗೆ ಮುನ್ನ ಮಾರಾಟ ಮಾಡಲು ಮುಂದಾಗುತ್ತಿವೆ. ನಗರದ ಮಲ್ಲೇಶ್ವರ ಮತ್ತು ರಾಜಾಜಿನಗರಗಳಲ್ಲಿ ಹಲವು […]

 • ಕಂದಾಹರ್ ಮಾದರಿಯಲ್ಲಿ ಬಸ್ ಹೈಜಾಕ್

  National, News, Regional

  ಬೆಂಗಳೂರು: ಕೇರಳಕ್ಕೆ ಹೊರಟಿದ್ದ ಖಾಸಗಿ ಬಸ್ ವೊಂದನ್ನು 7 ಜನರ ದುಷ್ಕರ್ಮಿಗಳ ತಂಡವೊಂದು ಹೈಜಾಕ್ ಮಾಡಿದ್ದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಲಾಸಿ ಪಾಳ್ಯ ಬಸ್ ನಿಲ್ದಾಣದಿಂದ ಹೊರಟಿದ್ದ ಲಾಮಾ ಟ್ರಾವಲ್ಸ್ ನ KA 01 AG 636 ನಂಬರ್​ನ ಬಸ್ ಅನ್ನು ದುಷ್ಕರ್ಮಿಗಳು ಹೈಜಾಕ್ ಮಾಡಲು ಪ್ರಯತ್ನಿಸಿದ್ದು, ಪೊಲೀಸರ ತುರ್ತು ಕಾರ್ಯಾಚರಣೆಯಿಂದಾಗಿ ಅಗಬಹುದಾಗಿದ್ದ ದುರಂತ ತಪ್ಪಿದೆ. ಪೊಲೀಸರ ಮಾಹಿತಿಯಂತೆ ಹೈಜಾಕ್ ಆಗಿದ್ದ ಬಸ್ ನಲ್ಲಿ ಸುಮಾರು 42 ಮಂದಿ ಪ್ರಯಾಣಿಕರಿದ್ದರು. ಬಸ್ ಬೆಂಗಳೂರಿನ […]

 • ವುಹಾನ್ ಶೃಂಗಸಭೆ ಮುಕ್ತಾಯ : ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಚೀನಾ

  International, National, News

  ಬೀಜಿಂಗ್: ವುಹಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಶನಿವಾರ ಮಹತ್ವದ ಒಪ್ಪಂದವೊಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಚೀನಾದೊಂದಿಗೆ ಸೇರಿ ಆಫ್ಘಾನಿಸ್ತಾನದಲ್ಲಿ ಆರ್ಥಿಕ ಯೋಜನೆ ಕೈಗೆತ್ತಿಕೊಳ್ಳುವ ಕುರಿತು ನಿರ್ಧರಿಸಿದ್ದಾರೆ. ಇಂದು ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜಂಟಿ ಯೋಜನೆಗೆ ಅನುಮೋದನೆ ನೀಡಿದ್ದು, ಹಾಲಿ ಶೃಂಗಸಭೆಯಲ್ಲಿ ಉಭಯ ನಾಯಕರು ಕೈಗೊಂಡಿರುವ ಮೊದಲ ಪ್ರಮುಖ ನಿರ್ಧಾರ ಇದಾಗಿದೆ. ಪ್ರಮುಖವಾಗಿ ಈ ಯೋಜನೆ ಮೂಲಸೌಕರ್ಯ ಅಭಿವೃದ್ದಿಯ ಆಧಾರಿತವಾಗಿದ್ದು, ಉಭಯ ದೇಶದಳ ಅಧಿಕಾರಿಗಳು ಈ ಯೋಜನೆ ಕುರಿತಂತೆ ರೂಪುರೇಷೆ ಸಿದ್ಧಪಡಿಸಿದ್ದಾರೆ. […]

 • ಕೊಹ್ಲಿ ಮೇಲೆ ಬಿಸಿಸಿಐ ಅಧಿಕಾರಿ ಗರಂ

  News, Sports

  ಮುಂಬೈ  : ವಿರಾಟ್ ಕೊಹ್ಲಿ ಆಫ್ಘಾನಿಸ್ತಾನ ವಿರುದ್ಧ ಜೂನ್ 14ರಿಂದ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಗೈರಾಗುವ ವಿಚಾರದಲ್ಲಿ ಬಿಸಿಸಿಐನಲ್ಲಿ ಅಪಸ್ವರ ಶುರುವಾಗಿದೆ. ಐತಿಹಾಸಿಕ ಪಂದ್ಯಕ್ಕೆ ನಾಯಕನೇ ಗೈರಾದರೆ ಪ್ರವಾಸಿ ಆಫ್ಘಾನಿಸ್ತಾನಕ್ಕೆ ಅವಮಾನಿಸಿದಂತಾಗುತ್ತದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ‘ಇಂಗ್ಲೆಂಡ್‌ನಿಂದ ಬಂದು ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಭಾಗವಹಿಸಿ ಬಳಿಕ ಕೊಹ್ಲಿ ಇಂಗ್ಲೆಂಡ್‌’ಗೆ ವಾಪಸಾಗಬಹುದು. ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಲು ಕೌಂಟಿಯಲ್ಲಿ ಆಡಬೇಕಿದ್ದರೆ, ಕೊಹ್ಲಿ ಐಪಿಎಲ್ ಬಿಟ್ಟು ಈಗಲೇ ಹೊಗಬಹುದಿತ್ತಲ್ಲಾ’ ಎಂದು ಬಿಸಿಸಿಐ ಅಧಿಕಾರಿ ಪ್ರಶ್ನಿಸಿದ್ದಾರೆ. ಆದರೆ ಕೊಹ್ಲಿ ಸೇರಿ […]

 • ಬಿಜೆಪಿ ಜಾಹೀರಾತಿಗೆ ತಡೆ ನೀಡಿದ ವಾರ್ತಾ ಇಲಾಖೆ

  News, Regional, Top News

  ಬೆಂಗಳೂರು:ಕಾಂಗ್ರೆಸ್ ಆಡಳಿತಾವಧಿ ಕುರಿತ ಬಿಜೆಪಿ ಜಾಹೀರಾತು ಪ್ರಸಾರ ಮಾಡದಂತೆ ವಾರ್ತಾ ಇಲಾಖೆ ಶುಕ್ರವಾರ ತಡೆ ನೀಡಿದೆ. ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿರುವ ಬಿಜೆಪಿ ಜಾಹೀರಾತಿಗೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್ ಮುಖಂಡರು ಗುರುವಾರ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತನ್ನು ಪರಿಶೀಲಿಸಿದ ಬಳಿಕ ವಾರ್ತಾ ಇಲಾಖೆ ಬಿಜೆಪಿ ಜಾಹೀರಾತು ಪ್ರಸಾರಕ್ಕೆ ತಡೆ ನೀಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಬಿಜೆಪಿ ನೀಡಿರುವ ಜಾಹೀರಾತು ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಜೊತೆಗೆ ವೈಯಕ್ತಿಕ ತೇಜೋವಧೆ […]

Back to Top

© 2015 - 2017. All Rights Reserved.