• ಬದಾಮಿಯಿಂದ ಸಿಎಂ ಸ್ಪರ್ಧೆ ಮಾಡ್ತಾರಾ? ಈ ಕ್ಷೇತ್ರ ಸೇಫ್ ಯಾಕೆ?

  BREAKING NEWS, News, Regional, Top News

  ಬೆಂಗಳೂರು: ಈ ಬಾರಿ ಚಾಮುಂಡೇಶ್ವರಿ ಜೊತೆಗೆ ಬಾಗಲಕೋಟೆಯ ಬದಾಮಿಯಿಂದಲೂ ಸ್ಪರ್ಧಿಸಲು ಸಿಎಂ ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರು ದಿನಗಳ ಕಾಲ ಸತತ ಪ್ರಚಾರ ನಡೆಸಿದ್ದಾರೆ. ವಿಪಕ್ಷ ನಾಯಕರ ಸವಾಲು ಕ್ಷೇತ್ರದಲ್ಲಿ ತುಸು ಹೆಚ್ಚೇ ಇದ್ದಹಾಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸೋಕೆ ತಯಾರಿ ನಡೆಸಿದ್ದಾರೆ. ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಬಯಲು ಮಾಡಿದ್ದಾರೆ. ನಮ್ಮಲ್ಲಿ ಸಿಎಂ ಹೊರತುಪಡಿಸಿ ಬೇರೆ ಯಾರು 2 […]

 • ಇನ್ನು ಒಂದು ದಿನ ಕಾದು ನೋಡು: ಎನ್‍ಆರ್ ರಮೇಶ್‍ಗೆ ಬಿಎಸ್‍ವೈ ಅಭಯ

  BREAKING NEWS, News, Regional

  ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಲವು ಟಿಕೆಟ್ ವಂಚಿತ ನಾಯಕರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಹಲವು ನಾಯಕರು ಇಂದು ಸಂಜೆಯೇ ಬಿಎಸ್‍ವೈ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಗರದ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್‍ವೈ ರನ್ನು ಭೇಟಿ ಮಾಡಿದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್. ಆರ್ ರಮೇಶ್ ಬಳಿಕ ಸುದ್ದಿಗಾರರರ ಜೊತೆ ಮಾತನಾಡಿದರು. ಟಿಕೆಟ್ ಕೈ […]

 • ಗಮನಿಸಿ, ಏಪ್ರಿಲ್ 12ಕ್ಕೆ ಕರ್ನಾಟಕ ಬಂದ್ ಇಲ್ಲ

  BREAKING NEWS, News, Regional, Top News

  ಬೆಂಗಳೂರು: ಏಪ್ರಿಲ್ 12 ರಂದು ಕರೆ ನೀಡಲಾಗಿದ್ದ `ಕರ್ನಾಟಕ ಬಂದ್’ ನಿರ್ಧಾರದಿಂದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಿಂದೆ ಸರಿದಿದ್ದಾರೆ. ಬಂದ್ ಮಾಡುವುದರ ಬದಲಿಗೆ ಅಂದು ರಾಜಭವನ ಮುತ್ತಿಗೆ ಹಾಕಿ, ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ನಾವು ಎಂದು ಕಾವೇರಿ ನಿರ್ವಹಣಾ ಮಂಡಳಿಯನ್ನು ಒಪ್ಪುವುದಿಲ್ಲ. ಸುಪ್ರೀ ಕೋರ್ಟ್ ನಿರ್ವಹಣಾ ಮಂಡಳಿಯನ್ನು ರಚನೆಯನ್ನು ಪ್ರಸ್ತಾಪ ಮಾಡಿಲ್ಲ. ನಟರದ ರಜನಿಕಾಂತ್, ಕಮಲ್‍ಹಾಸನ್ ಅವರು ರಾಜಕೀಯಕ್ಕಾಗಿ ಕಾವೇರಿ […]

 • ಎಲೆಕ್ಟ್ರಿಕ್‌ ವಾಹನಗಳಿಗೆ ಅಗ್ಗದ ವಿದ್ಯುತ್‌?

  Automobile, BREAKING NEWS, Featured

  ಬೆಂಗಳೂರು: ಎಲೆಕ್ಟ್ರಿಕ್‌ ವಾಹನ ಬಳಕೆ ಉತ್ತೇಜಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಡುವೆಯೇ ಈ ಮಾದರಿಯ ವಾಹನಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸಲು ಬೆಸ್ಕಾಂ ಮುಂದಾಗಿದೆ. ವಾಣಿಜ್ಯ ಬಳಕೆಗೆ ವಿದ್ಯುತ್‌ ದರ ಪ್ರತಿ ಯೂನಿಟ್‌ಗೆ 7.50 ರೂ. ಇದೆ. ಆದರೆ, ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿ ಚಾರ್ಜ್‌ ಮಾಡಲು ಕಡಿಮೆ ದರದಲ್ಲಿ ವಿದ್ಯುತ್‌ ಒದಗಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ತೀರ್ಮಾನಿಸಿದೆ. ಈ ಸಂಬಂಧ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಲ್ಲೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಬೆಸ್ಕಾಂ […]

 • ನಿರೀಕ್ಷೆ ಹುಸಿ ಮಾಡಿದ ರಾಹುಲ್‌: ಶೋಭಾ

  BREAKING NEWS, News, Regional

  ಬೆಂಗಳೂರು: ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಹುಲ್‌ ಗಾಂಧಿ ಪ್ರವಾಸ ಮಾಡಿದಾಗ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಮಾತನಾಡದೆ, ಕೇವಲ ರಾಜಕೀಯ ಟೀಕೆಗೆ ಸೀಮಿತವಾಗಿದ್ದು ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಇರುವ ಕಾಳಜಿಗೆ ಸಾಕ್ಷಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ಭಾನುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಹುಲ್‌ಗಾಂಧಿ ಪ್ರವಾಸ ಸಂದರ್ಭದಲ್ಲಿ ಆ ಭಾಗದ ಕುಡಿಯುವ ನೀರಿನ ಸಮಸ್ಯೆ, ಶಾಶ್ವತ ನೀರಾವರಿ ಸಮಸ್ಯೆ ನಿವಾರಣೆ ಬಗ್ಗೆ ಮಾತನಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ದೂರಿದರು. ಎತ್ತಿನಹೊಳೆ ಯೋಜನೆಯಡಿ ನೀರು […]

 • ಬಿಜೆಪಿ, ಕೇಂದ್ರದ ವಿರುದ್ಧ ಮತ್ತೆ ವಾಗ್ಧಾಳಿ

  BREAKING NEWS, News, Regional

  ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿಯವರು ದೇಶದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದರೆ, ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಪಕ್ಷಗಳ ನಾಯಕರನ್ನು ನಾಯಿ, ಬೆಕ್ಕುಗಳಿಗೆ ಹೋಲಿಸುತ್ತಾರೆ. ಇಂಥವರಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕೆಂದು ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ಭಾನುವಾರ ಅರಮನೆ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಅಮಿತ್‌ ಶಾ ಅವರು ಪ್ರತಿಪಕ್ಷ ನಾಯಕರನ್ನು ನಾಯಿ, ಬೆಕ್ಕುಗಳಿಗೆ ಹೋಲಿಸಿದ್ದಾರೆ. […]

 • ಕುಚುಕು ಗೆಳೆಯನ ಪರವಾಗಿ ಪ್ರಚಾರಕ್ಕೆ ಬರ್ತಾರಂತೆ ಗಾಲಿ ಜರ್ನಾದನ ರೆಡ್ಡಿ?

  BREAKING NEWS, News, Regional

  ಬಳ್ಳಾರಿ: 2018ರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಸಂಸದ ಶ್ರೀರಾಮುಲು ಅವರನ್ನು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕೆ ಇಳಿಸುತ್ತಿದೆ. ಬಳ್ಳಾರಿ ಗ್ರಾಮೀಣ, ಕೂಡ್ಲಿಗಿ, ಸಂಡೂರು ಕ್ಷೇತ್ರದ ಆಕ್ಷಾಂಕಿಯಾಗಿದ್ದ ಶ್ರೀರಾಮುಲು ಅವರನ್ನು ಬಿಜೆಪಿ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಸೂಚಿಸಿರುವುದಕ್ಕೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಬೇರೆಯದೇ ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ನೆಲೆಯಿದ್ದು, ಕಳೆದ ಭಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಕೇವಲ ಒಂದೇ ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಪರಿಣಾಮ ಈಗ ಕೋಟೆ ನಾಡಿನಲ್ಲಿ ಬಿಜೆಪಿ […]

 • ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆಯೇ ಯುವತಿ ಆತ್ಮಹತ್ಯೆಗೆ ಯತ್ನ!

  BREAKING NEWS, Crime

  ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಕ್ನೋದರಲ್ಲಿರುವ ಮನೆ ಮುಂದೆ ಯುವತಿ ಹಾಗೂ ಆಕೆಯ ಕುಟುಂಬ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ. ಈ ಘಟನೆ ಭಾನುವಾರ ನಡೆದಿದೆ. ಬಿಜೆಪಿ ಶಾಸಕನೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿದ್ರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಕುಟುಂಬ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ. ಘಟನೆ ವಿವರ: ಕಳೆದ ವರ್ಷ ಉನ್ನಾವೋ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹಾಗೂ ಆತನ ಸಹೋದರ ಕಳೆದ […]

 • ಚುನಾವಣೆ ಹೊತ್ತಲ್ಲಿ ಬಾರ್ ಮಾಲೀಕರಿಗೆ ಶಾಕ್ ನೀಡಿದ ಚುನಾವಣಾ ಆಯೋಗ

  BREAKING NEWS, News, Regional, Top News

  ಬೆಂಗಳೂರು: ಚುನಾವಣೆಯಲ್ಲಿ ಕಿಕ್ ಏರಿಸಿಕೊಳ್ಳೋಣ ಅನ್ನೋರ ನಶೆಯಿಳಿಸುವ ರೂಲ್ಸ್ ಅನ್ನು ಚುನಾವಣಾ ಆಯೋಗ ಮಾಡಿದೆ. ಬಾರ್ ಗಳು ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳಿಗೆ ಬೆಂಡಾಗಿದೆ. ಬಾರ್ ನವರು ಪ್ರತಿ ದಿನದ ಮದ್ಯಮಾರಾಟದ ಸಂಪೂರ್ಣ ವಿವರವನ್ನು ಅಬಕಾರಿ ಇಲಾಖೆ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ. ಅಷ್ಟೇ ಅಲ್ಲದೇ ಕಳೆದ ವರ್ಷ ಇದೇ ದಿನ ಎಷ್ಟು ಎಣ್ಣೆ ಸೇಲ್ ಆಗಿತ್ತು ಅನ್ನೋ ಮಾಹಿತಿನೂ ನೀಡಬೇಕು. ಕಳೆದ ವರ್ಷಕ್ಕೆ ತಾಳೆ ಹಾಕಿ ಶೇ 10ಕ್ಕಿಂತ ಮದ್ಯವ್ಯಾಪಾರ ಹೆಚ್ಚಾದರೇ ಅಂತಹ ಬಾರ್ ಗಳಿಗೆ ನೋಟಿಸ್ ಕೊಟ್ಟು […]

 • ಬಿಜೆಪಿ ಮೊದಲ ಪಟ್ಟಿ ಬಿಡುಗಡೆ : ಅನಂತ್ ಕುಮಾರ್, ಅಶೋಕ್ ವಿರುದ್ಧ ಆಕ್ರೋಶ

  BREAKING NEWS, News, Regional

  ಬೆಂಗಳೂರು: ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಚಿಕ್ಕಪೇಟೆ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಎನ್​.ಆರ್​. ರಮೇಶ್​ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೇಟ್ ನೀಡದ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಚಿಕ್ಕಪೇಟೆ ಕ್ಷೇತ್ರಕ್ಕೆ ರಮೇಶ್​ ಅವರ ಬದಲಿಗೆ ಉದಯ್​ ಗರುಡಾಚಾರ್​ ಅವರಿಗೆ ಟಿಕೆಟ್​ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ರಮೇಶ್​ ಬೆಂಬಲಿಗರು ಜಯನಗರದಲ್ಲಿರುವ ಮಾಜಿ ಉಪ ಮುಖ್ಯಮಂತ್ರಿ ಆರ್​. ಅಶೋಕ್​ ನಿವಾಸದ […]

Back to Top

© 2015 - 2017. All Rights Reserved.