• ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ‌. ಕಾರಣ ಕೇಳಿ ತೆಲಂಗಾಣ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ನೋಟಿಸ್

  Entertainment, National, News, Top News

  ಟಾಲಿವುಡ್ ನಲ್ಲಿ ಅವಕಾಶಕ್ಕಾಗಿ ಮಹಿಳೆಯರನ್ನ ದುರ್ಬಳಕೆ ಮಾಡುತ್ತಿದ್ದಾರೆಂಬ ಆರೋಪ ಮಾಡಿ ತೆಲುಗು ಫಿಲಂ ಚೇಂಬರ್ ವಿರುದ್ದ ನಟಿ ಶ್ರೀ ರೆಡ್ಡಿ ಅರೆಬೆತ್ತಲೆ ನಡೆಸಿದ್ದನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ನಟಿ ಶ್ರೀ ರೆಡ್ಡಿ ನಟ ನಾಣಿ, ರಾಣ ದಗ್ಗುಬಾಟಿ ಸಹೋದರ ಸೇರಿ ಹಲವು ಸ್ಟಾರ್ ನಟ, ನಿರ್ದೇಶಕರ ವಿರುದ್ದ ಲೈಂಗಿಲ ಕಿರುಕುಳದ ಆರೋಪ ಮಾಡಿದ್ದರು. ಇದನ್ನ ವಿರೋಧಿಸಿ ಕೆಲವು ದಿನಗಳ ಹಿಂದೆ ತೆಲುಗು ಫಿಲ್ಮ್ ಚೆಂಬರ್ […]

 • 80 ಸೆಕೆಂಡ್ ಗಳಲ್ಲಿ ಚಿನ್ನ ಗೆದ್ದ ಸುಶೀಲ್ ಕುಮಾರ್

  International, National, News, Sports

  ಗೋಲ್ಡ್’ಕೋಸ್ಟ್(ಏ.12): ಹ್ಯಾಟ್ರಿಕ್ ಚಿನ್ನ ಗೆದ್ದ ಸುಶೀಲ್ ಕುಮಾರ್ ಭಾರತದ ಅನುಭವಿ ಕುಸ್ತಿಪಟು ಸುಶೀಲ್ ಕುಮಾರ್ 74 ಕೆ.ಜಿ ಕುಸ್ತಿ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಜೋನ್ಸ್ ಬೋಥಾರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಮೂರು ಚಿನ್ನದ ಪದಕ ಗೆದ್ದ ಮೊದಲ ಕುಸ್ತಿಪಟು ಎನ್ನುವ ಹಿರಿಮೆಗೆ ಸುಶೀಲ್ ಪಾತ್ರರಾಗಿದ್ದಾರೆ. ಫೈನಲ್’ನಲ್ಲಿ ತಾಂತ್ರಿಕ ಮೇಲುಗೈ ಮೆರೆದ ಸುಶೀಲ್ ಒಂದೇ ಒಂದು ಅಂಕ ಬಿಟ್ಟುಕೊಡದೇ ಕೇವಲ 80 ಸೆಕೆಂಡ್’ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೊದಲು ಸುಶೀಲ್ ಕುಮಾರ್ […]

 • ಸಿಎಂ ಸಿದ್ದರಾಮಯ್ಯ ವಿರುದ್ಧ ಬಾದಾಮಿ ಎಸ್ ಟಿ ಮುಖಂಡರ ಅಸಮಾಧಾನ

  BREAKING NEWS, News, Regional

  ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಸ್‌‌ಟಿ ಘಟಕದ ಮುಖಂಡರಿಂದ ಅಸಮಾಧಾನದ ಹೊಗೆ ಕಂಡು ಬಂದಿದೆ. ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಮ್ಮ ನಾಯಕರ ಜೊತೆಗೆ ಚರ್ಚೆ ಮಾಡಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ಚು ವಾಲ್ಮೀಕಿ ಜನಾಂಗದ ಮತದಾರರು ಇದ್ದರೂ ಸಹ ಮುಖಂಡರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಇದರಿಂದ ಮುಂಬರುವ ದಿನಮಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಉಂಟಾದಲ್ಲಿ ನಾವು ಜವಾಬ್ದಾರರಲ್ಲ ಎಂದು ಎಚ್ಚರಿಕೆ ನೀಡುವ ಮೂಲಕ ಅಸಮಾಧಾನ […]

 • ರಷ್ಯಾಗೆ ಟ್ರಂಪ್ ಕ್ಷಿಪಣಿ ದಾಳಿ ಬೆದರಿಕೆ

  International, News

  ವಾಷಿಂಗ್ಟನ್‌: ಸಿರಿಯಾ ಕೆಮಿಕಲ್‌ ಅಟ್ಯಾಕ್‌ ಕುರಿತು ಅಮೆರಿಕ- ರಷ್ಯಾ ವಾಕ್ಸಮರ ತೀವ್ರಗೊಂಡಿದ್ದು, “ಸಿರಿಯಾ ಮೇಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಕ್ಷಿಪಣಿಗಳ ಮಳೆಯೇ ಸುರಿಯಲಿವೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ರಷ್ಯಾಗೆ ಎಚ್ಚರಿಕೆ ಕೊಟ್ಟಿದ್ದಾರೆ. “ರಷ್ಯಾ ಸಿದ್ಧಗೊಳ್ಳಲಿ. ಏಕೆಂದರೆ ಹೊಸ ಹಾಗೂ ಸ್ಮಾರ್ಟ್‌ ಕ್ಷಿಪಣಿಗಳು ಬರುತ್ತಿವೆ. ನೀವೇನಿದ್ದರೂ ಮನುಷ್ಯರನ್ನೇ ಕೊಂದು ಮಜಾ ಮಾಡುವವರಲ್ಲವೇ’ ಎಂದು  ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಶನಿವಾರ ಸಿರಿಯಾದಲ್ಲಿ ನಡೆದಿದ್ದ ದಾಳಿಗೆ 40 ಮಂದಿ ಬಲಿಯಾದ ಬೆನ್ನಲ್ಲೇ ಟ್ರಂಪ್‌ ಈ ಎಚ್ಚರಿಕೆ ರವಾನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ […]

 • ಕೊಹ್ಲಿಗಾಗಿ ಬೆಂಗಳೂರಿಗೆ ಬಂದ ಅನುಷ್ಕಾ

  Entertainment, News, Regional, Sports

  ಬೆಂಗಳೂರು : ಐಪಿಎಲ್ ಜೋಶ್ ಜೋರಾಗುತ್ತಿದೆ. ನಾಳೆ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ಮತ್ತು ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ವಿರಾಟ್ ಪಡೆಯನ್ನು ಬೆಂಬಲಿಸಲು ಪತ್ನಿ ಅನುಷ್ಕಾ ಶರ್ಮಾ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಹಿಂದೆ ಅನುಷ್ಕಾ ಗ್ಯಾಲರಿಯಲ್ಲಿ ಕಾಣಿಸಿಕೊಂಡಾಗ ವಿರಾಟ್ ಕಳಪೆ ಪ್ರದರ್ಶನ ನೀಡಿದ್ದರು. ಆಗ ಅನೇಕರು ಅನುಷ್ಕಾ ಅವರನ್ನು ದೂರಿದ್ದರು. ಆಗ ವಿರಾಟ್ ಪತ್ನಿಯ ಬೆಂಬಲಕ್ಕೆ ನಿಂತಿದ್ದರು. ಅದನ್ನಿಲ್ಲಿ ಸ್ಮರಿಸಬಹುದು.

 • ರೋಹಿಣಿ ಸಿಂಧೂರಿ ನನ್ನ ಮಗಳ ಸಮಾನ : ಎ.ಮಂಜು

  News, Regional, Top News

  ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಂಬಂಧಿಸಿದಂತೆ ಸಚಿವ ಎ.ಮಂಜು ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಅರಕಲಗೂಡಿನ ಕಾಡನೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನನಗೆ 33 ವರ್ಷ ವಯಸ್ಸಿನ ಮಗಳಿದ್ದಾಳೆ. ಜಿಲ್ಲಾಧಿಕಾರಿಗಳಿಗೂ ( ರೋಹಿಣಿ) ಅಷ್ಟೇ ವಯಸ್ಸಿರಬಹುದು. ಅವರು ಕೂಡ ನನ್ನ ಮಗಳಿದ್ದ ಹಾಗೆ. ಅವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಜಿಲ್ಲೆಯಲ್ಲಿ ನಿಸ್ಪಕ್ಷಪಾತ ಚುನವಾಣೆ ನಡೆಯಬೇಕು. ಕಾನೂನು ಪ್ರಕಾರ ಆಗಬೇಕು ಅನ್ನೋದಷ್ಟೆ ನನ್ನ ಬಯಕೆ ಎಂದಿದ್ದಾರೆ. ಬಗರ್ ಹುಕುಂ ಕಡತಗಳ ಸಹಿ ಸಂಬಂಧ ನಾನು […]

 • ಕನ್ನಡದಲ್ಲಿ ಟ್ವೀಟ್ ಮಾಡಿದ ಬಿಜೆಪಿ ಚಾಣಕ್ಯ

  BREAKING NEWS, National, Top News

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕನ್ನಡದಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ಇಂದು ಧಾರವಾಡದಲ್ಲಿ ವರಕವಿ ದ.ರಾ ಬೇಂದ್ರೆಯವರ ಮನೆಗೆ ಭೇಟಿ ನೀಡಿದ ಬಳಿಕ ಕವಿ ಬೇಂದ್ರೆಯವರ ಮನೆಗೆ ಭೇಟಿ ನೀಡುದ್ದು ಸಕ್ಕರೆ ಸವಿದಷ್ಟು ಸಿಹಿಯಾಗಿತ್ತು,ಸಾಧನಕೇರಿಯ ನನ್ನ ಭೇಟಿ ಅವಿಸ್ಮರಣೀಯ ಅಂತಾ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ದ.ರಾ ಬೇಂದ್ರೆಯವರ “ಕುರುಡು ಕಾಂಚಾಣ ಕುಣಿಯುತಲಿತ್ತು ..ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ಸಾಲುಗಳನ್ನ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೊಂದು […]

 • ಮುಂದಿನ ಪ್ರಧಾನಿ ನಾನೇ..! ಮೋದಿಯೇ ನನ್ನ ಪ್ರತಿಸ್ಫರ್ಧಿ : ಹುಚ್ಚವೆಂಕಟ್

  News, Top News

  ಮಂಗಳೂರು : ಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ತಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೆ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಗೆ ನಿಲ್ಲುತ್ತೇನೆ. ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾಗುತ್ತೇನೆ ಎಂದು ಚಿತ್ರ ನಟ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ಮಂಗಳೂರಿನ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.ಎರಡು ದಿನಗಳಲ್ಲಿ ಚಿಹ್ನೆಯ ಕುರಿತು ನಿರ್ಧಾರವಾಗಲಿದೆ. ಮತ […]

 • ಐಪಿಎಲ್ ಹಬ್ಬ : ನಮ್ಮ ಮೆಟ್ರೋ ಸೇವಾ ಅವಧಿ ವಿಸ್ತರಣೆ

  Sports, Top News

  ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ಪಂದ್ಯಾವಳಿ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರದ ಅವಧಿಯಲ್ಲಿ ವಿಸ್ತರಣೆ ಮಾಡಲಾಗಿದೆ. ರಾತ್ರಿ 12.30 ರ ವರೆಗೂ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ನಡೆಯುವ ದಿನಗಳಂದು ರಾತ್ರಿ 12.30 ರ ವರೆಗೂ ನಮ್ಮ ಮೆಟ್ರೋ ಸಂಚಾರವಿರುತ್ತದೆ. ಜನದಟ್ಟಣೆ ನಿವಾರಿಸುವ ಉದ್ದೇಶದಿಂದ ರಿಟರ್ನ್ ಟಿಕೆಟ್ ನೀಡಲಾಗ್ತಿದೆ. ಮೊದಲ ಬಾರಿಗೆ ರಿಟರ್ನ್ ಟಿಕೆಟ್ ಪರಿಚಯಿಸಲಾಗಿದ್ದು, ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳಲ್ಲಿ ಟಿಕೆಟ್ ಲಭ್ಯವಿವೆ. ರಿಟರ್ನ್ ಟಿಕೆಟ್ ಬೆಲೆ […]

 • ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ

  Top News

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಪ್ರತಿದಿನ ಎಟಿಎಂನಿಂದ 40,000 ರೂಪಾಯಿವರೆಗೆ ನಗದು ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಿದೆ. ಎಸ್ ಬಿ ಐ ನ ಕ್ಲಾಸಿಕ್ ಡೆಬಿಟ್ ಕಾರ್ಡ್ ಬಳಸಿ ಗ್ರಾಹಕರು ಹಣ ವಿತ್ ಡ್ರಾ ಮಾಡಬಹುದು. ಕ್ಲಾಸಿಕ್ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಎಸ್ ಬಿ ಐ ವಾರ್ಷಿಕ 125 ರೂ. + ಜಿಎಸ್ಟಿ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಈ ಕಾರ್ಡನ್ನು ಬದಲಾಯಿಸಲು ನೀವು 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಕಾಲಕಾಲಕ್ಕೆ ಈ ದರಗಳಲ್ಲೂ […]

Back to Top

© 2015 - 2017. All Rights Reserved.