• ರಾಜ್ಯದಲ್ಲಿ ಇಂದಿನಿಂದ ಮೋದಿ ಸುಂಟರ ಗಾಳಿ ಆರಂಭ

  National, News, Regional, Top News

  ಚಾಮರಾಜ ನಗರ : ಇಂದಿನಿಂದ 5ದಿನಗಳ ಕಾಲ ರಾಜ್ಯದಲ್ಲಿ ಮೋದಿ ಹವಾ ಪ್ರಾರಂಭವಾಗಿದೆ.ಚಾಮರಾಜನಗರದ ಸಂತೇ ಮಾರಹಳ್ಳಿಯಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ಇಂದು ಭಾಗವಹಿಸಿ ಮಾತನಾಡಿದ್ರು.   ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಚಾಮರಾಜನಗರದ ಪ್ರಮುಖ ದೇವರುಗಳನ್ನ ಸ್ಮರಿಸಿದರು. ಚಾಮರಾಜ ಒಡೆಯರ, ಜಿಪಿ ರಾಜರತ್ನಂ, ಡಾ ರಾಜ್ ಕುಮಾರ್ ಅವರನ್ನ ನೆನಪಿಸಿಕೊ‌ಂಡರು. ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ಸಿಎಂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರದ ಸ್ಪರ್ಧೆಯ ಬಗ್ಗೆ ವ್ಯಂಗ್ಯವಾಡಿದರು. ಸಂತೇಮಾರಹಳ್ಳಿಯ ಸಮಾವೇಶದ […]

 • ನರ್ಸ್ ಜಯಲಕ್ಷ್ಮಿಗೆ ಪೋಲಿ ಹುಡುಗರ ಕಾಟವಂತೆ

  News, Regional, Top News

  ಬೆಂಗಳೂರು: ಎಂಇಪಿ ಪಕ್ಷದ ಅಭ್ಯರ್ಥಿ ಜಯಲಕ್ಷ್ಮೀ ಅವರಿಗೆ ಪೋಲಿ ಹುಡುಗರ ಕಾಟ ನೀಡುತ್ತಿದ್ದು, ಪ್ರಚಾರಕ್ಕೆ ಹೋದ್ರೆ ಜನರ ಗುಂಪು ಹಿಂಬಾಲಿಸಿ ಇಲ್ಲ ಸಲ್ಲದ ಕಾಟ ಕೊಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಜನ ಹಿಂದೆ ಬರೋದು ನೋಡಿದ್ರೆ ಭಯ ಆಗುತ್ತೆ. ಕೊಲೆ ಮಾಡೋ ಭಯ. ಇನ್ನು ಕಾರಿನಿಂದ ಏಕಾಏಕಿ ಇಳಿದು ಕೈ-ಕೈ ಕಟ್ಟಿಕೊಂಡು ನನ್ನ ನೋಡೋದು, ಹಿಂಬಾಲಿಸಿಕೊಂಡು ಬರುತ್ತಾರೆ. ಅಲ್ಲದೇ ಹಿಂದೆ ಬಿದ್ದು ಚೇಡಿಸ್ತಾರೆ ಎಂದು ಜಯಲಕ್ಷ್ಮಿ ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ಅವರಿಗೆ ದೂರು ನೀಡಿದ್ದಾರೆ.ನಾನು ಈ […]

 • ಇಂಡೋ-ಪಾಕ್ ವಾರ್ ಫೀಕ್ಸ್

  International, National, News, Sports

  ಇಗ್ಲೆಂಡ್‍ : ಮುಂದಿನ ವರ್ಷ ನಡೆಯಲಿರುವ ಸೀಮಿತ ಓವರ್‍ಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು ಎರಡು ಬಾರಿ ವಿಶ್ವಚಾಂಪಿಯನ್ಸ್ ಆಗಿರುವ ಭಾರತ ಜೂನ್ 16 ರಂದು ಸಾಂಪ್ರಾದಾಯಿಕ ವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಮೇ 30 ರಂದು ಆರಂಭಗೊಳ್ಳುವ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಓಲ್ಡ್‍ಟ್ರಫರ್ಡ್ ಹಾಗೂ ಎಡ್ಜ್‍ಬಸ್ಟನ್‍ನಲ್ಲಿ ಜುಲೈ 9 ಹಾಗೂ 11 ರಂದು ಸೆಮಫೈನಲ್ ನಡೆಯಲಿದ್ದು , ಕ್ರಿಕೆಟ್ ಲೋಕದ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್‍ನಲ್ಲಿ ಅಂತಿಮ ಕದನ ನಡೆಯಲಿದೆ. ಸುಮಾರು 46 ದಿನಗಳ ಕಾಲ […]

 • ಕರ್ನಾಟಕ ರಾಜ್ಯಪಾಲರ ಮಗನಿಗೆ ವಂಚನೆ

  News, Regional, Top News

  ರಾಜ್‌ಕೋಟ್‌: ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರ ಪುತ್ರ ಭಾವದೀಪ್‌ ವಾಲಾ ಅವರ ಸಹಿ ನಕಲು ಮಾಡಿ ಅವರ ಬ್ಯಾಂಕ್‌ ಖಾತೆಯಿಂದ 43 ಲಕ್ಷ ರೂ. ಎಗರಿಸಿ ವಂಚನೆ ನಡೆಸಿದ ಪ್ರಕರಣ ವರದಿಯಾಗಿದೆ.   ಭಾವದೀಪ್‌ ವಾಲಾ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ. ‘‘ಸೌರಾಷ್ಟ್ರ ಆಯಿಲ್‌ ಮಿಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಸಮೀರ್‌ ಶಾ, ಅವರ ಸಹೋದರ ಶ್ಯಾಮ್‌ ಮತ್ತು ವ್ಯಾಪಾರಿ ಸಹವರ್ತಿ ಪರ್ಬಾತ್‌ ಮೂವರು ಸೇರಿ ಚೆಕ್‌ ಮೇಲೆ ನನ್ನ ನಕಲಿ ಸಹಿ ಮಾಡಿ, ಬ್ಯಾಂಕ್‌ […]

 • ಸಿಲಿಕಾನ್ ಸಿಟಿಯಾಯ್ತು ಸೊಳ್ಳೆಗಳ ಊರು

  News, Regional

  ಬೆಂಗಳೂರು: ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಐಟಿ ಸಿಟಿಯಲ್ಲಿ ಸೊಳ್ಳೆಗಳ ಸಂತತಿ ಗಣನೀಯ ಪ್ರಮಾಣದಲ್ಲಿ ಏರಿದೆ. ವೈಟ್‌ಫೀಲ್ಡ್‌ನ ಸಿಟಿಜನ್‌ ಗ್ರೂಪ್‌ ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಇದಕ್ಕೆ ನಗರದ ವಿವಿಧ ಭಾಗದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಭಾಗದಲ್ಲೂ ಸೊಳ್ಳೆಗಳ ಸಂತತಿಯಲ್ಲಿ ಗಣನೀಯ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ.    ಕಳೆದ 2 ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆ, ವಿಲೇವಾರಿಯಾಗದ ಘನತ್ಯಾಜ್ಯಗಳಿಂದ ಸೊಳ್ಳೆ ಸಂತತಿ ಹೆಚ್ಚಾಗಿರುವ ಕುರಿತು ಟ್ವಿಟರ್‌ನಲ್ಲಿ ನಗರದ ಅನೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗರದ ಅನೇಕ […]

Back to Top

© 2015 - 2017. All Rights Reserved.