• ರಾಜ್ಯದಲ್ಲಿ ಕಾಂಗ್ರೆಸದ ಜೆಡಿಎಸ್ ಸಮ್ಮಿಶ್ರ ಸರ್ಕಾರ.

  BREAKING NEWS, News, Regional, Top News

  ಬೆಂಗಳೂರು : ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಹಿನ್ನೆಲೆ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಬೆಂಬಲ ಕೋರಿ ಜೆಡಿಎಸ್​ ನಾಯಕರಿಗೆ ಕಾಂಗ್ರೆಸ್​ ನಾಯಕರು ಪತ್ರ ಬರೆದಿದ್ದಾರೆ. ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆಯಾದ್ರೆ 30-30 ತಿಂಗಳ ಅಡಳಿತದಲ್ಲಿ ಕುಮಾರಸ್ವಾಮಿ ಸಿಎಂ ಆಗಿ, ಪರಮೇಶ್ವರ್​ ಡಿಸಿಎಂ ಆಗುತ್ತಾರೆ, ಬಳಿಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಿ, ಹೆಚ್​ಡಿ ರೇವಣ್ಣ ಡಿಸಿಎಂ ಆಗಿ ಅಧಿಕಾರ ನಿರ್ವಹಿಸುವುದು ಬಹುತೇಕ ಖಚಿತವಾಗಿದೆ.

 • ಚನ್ನಪಟ್ಟಣ, ರಾಮನಗರದಲ್ಲಿ ಹೆಚ್​ಡಿಕೆ ದರ್ಬಾರ್​

  News, Regional, Top News

  ರಾಮನಗರ : ನೀರಿಕ್ಷೆಯಂತೆ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಚನ್ನಪಟ್ಟಣದಲ್ಲಿ ಸಿಪಿ ಯೋಗೀಶ್ವರ್​ ಹಾಗೂ ಹೆಚ್​ ಎಂ ರೇವಣ್ಣ ವಿರುದ್ದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ರಾಮನಗರದಲ್ಲಿಯೂ ಗೆಲುವು ಸಾಧಿಸಿರುವ ಹೆಚ್​ಡಿಕೆ, ರಾಮನಗರ ಹಾಗೂ ಚನ್ನಪಟ್ಟಣ ಎರಡರಲ್ಲಿ ಯಾವ ಕ್ಷೇತ್ರವನ್ನ ಉಳಿಸಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ

 • ಸಿದ್ದರಾಮಯ್ಯ ಬಾಯಿಗೆ ಬಿದ್ದ ಬಾದಾಮಿ

  News, Regional, Top News

   ಬಾದಾಮಿ :  ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿಎಂ ಸಿದ್ದರಾಮಯ್ಯೆಗೆ ಕೊನೆಗು ಬಾದಾಮಿ ಬನಶಂಕರಿ ಕೈ ಹಿಡಿದಿದ್ದಾಳೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಜಿಟಿ ದೇವೆಗೌಡ ವಿರುದ್ದ ಹೀನಾಯವಾಗಿ ಸೋತಿರುವ ಸಿದ್ದರಾಮಯ್ಯಗೆ ಬಾದಾಮಿಯಲ್ಲಿನ ಗೆಲುವು ನೆಮ್ಮದಿ ತಂದಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿದ್ದ ಶ್ರೀರಾಮುಲು ಪರಾಜಿತರಾಗಿದ್ದಾರೆ.

 • ಚಾಮುಂಡೇಶ್ವರಿಯಲ್ಲಿ ಸಿದ್ದುಗೆ ಮುಖಭಂಗ

  News, Regional, Top News

  ಮೈಸೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಾರಿ ಮುಖಭಂಗ ಉಂಟಾಗಿದೆ. ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ಸಿದ್ದರಾಮಯ್ಯ ವಿರುದ್ದ ಭಾರಿ ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ಥೇನೆಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಇದು ತೀವ್ರ ಮುಜುಗರ ಉಂಟು ಮಾಡಿದೆ. ‘

 • ರಾಜ್ಯ ಚುನಾವಣಾ ಫಲಿತಾಂಶ ಪ್ರಕಟ

  BREAKING NEWS, News, Regional

  ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿದೆ. 104 ಸ್ಥಾನಗಳಿಸಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. 2 ನೇ ಸ್ಥಾನಗಳಿಸಿರುವ ಬಿಜೆಪಿ 77 ಸ್ಥಾನಗಳನ್ನ ಪಡೆದಿದೆ. ಜೆಡಿಎಸ್​ 39 ಸ್ಥಾನಗಳಿಸಿ ಕಿಂಗ್​ಮೇಕರ್​ ಆಗಿದೆ. . ಒಟ್ಟಾರೆ ಈ ಬಾರಿಯ ರಾಜ್ಯ ಚುನಾವಣ ಫಲಿತಾಂಶ ತೀವ್ರ ಕುತೂಹಲ ಮೂಡಿಸಸಿದ್ದು, ರಾಜ್ಯ ರಾಜಕಾರಣದ ಗದ್ದುಗೆ ಯಾರು ಏರಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ

Back to Top

© 2015 - 2017. All Rights Reserved.