ಜೆಡಿಎಸ್ ಕಾರ್ಯಕರ್ತರ ಸರಣಿ ಕೊಲೆ ವಿರೋಧಿಸಿ ಜನವರಿ 4ರಂದು ಮಂಡ್ಯ ಬಂದ್

Kannada News No Comments on ಜೆಡಿಎಸ್ ಕಾರ್ಯಕರ್ತರ ಸರಣಿ ಕೊಲೆ ವಿರೋಧಿಸಿ ಜನವರಿ 4ರಂದು ಮಂಡ್ಯ ಬಂದ್ 40

ಮಂಡ್ಯ : ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗುತ್ತಿವೆ. ಒಂದು ವಾರದಲ್ಲಿ ನಾಲ್ಕು ಜೆಡಿಎಸ್ ಕಾರ್ಯಕರ್ತರ ಕೊಲೆಗಳೇ ಇದಕ್ಕೆ ಉದಾಹರಣೆ. ಇದರಿಂದ ಮಂಡ್ಯ ಜಿಲ್ಲಾ ಜೆಡಿಎಸ್ ಜನವರಿ 4ರಂದು ಮಂಡ್ಯ ಜಿಲ್ಲೆ ಬಂದ್ ಗೆ ಕರೆಕೊಟ್ಟಿದೆ.

ಸಾಲು-ಸಾಲು ಜೆಡಿಎಸ್ ಕಾರ್ಯಕರ್ತರ ಕೊಲೆ ಖಂಡಿಸಿ ಹಾಗೂ ಮಂಡ್ಯ ಡಿವೈಎಸ್ ಪಿ ಜನಾರ್ಧನ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಸಂಸದ ಸಿ. ಎಸ್ ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಡಿಸೆಂಬರ್ 24ರಂದು ಬೆಳಗ್ಗೆ ಜೆಡಿಎಸ್ ಕಾರ್ಯಕರ್ತ ಕುಮಾರ್ ಅಲಿಯಾಸ್ ಕೇಬಲ್ ಕುಮಾರ್‍, ಡಿಸೆಂಬರ್ 25 ನಂದೀಶ್ ಮತ್ತು ಮುತ್ತುರಾಜ್, ಡಿಸೆಂಬರ್ 31ರ ರಾತ್ರಿ ಹರೀಶ್ ಅಲಿಯಾಸ್ ಗುಂಡ, ಹೀಗೆ ನಾಲ್ವರು ಜೆಡಿಎಸ್ ಕಾರ್ಯಕರ್ತರು ಒಂದೇ ವಾರದಲ್ಲಿ ಚಿಕ್ಕ ಪುಟ್ಟ ಗಲಾಟೆಗಳಲ್ಲಿ ಕೊಲೆಯಾಗಿದ್ದಾರೆ. ಈ ಕೊಲೆಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡಗಳು ಇದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜು ನೇತೃತ್ವದಲ್ಲಿ ಮಂಡ್ಯ ಜಿಲ್ಲೆ ಬಂದ್ ಗೆ ಕರೆ ನೀಡಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.