ವೈದ್ಯರ ನಿರ್ಲಕ್ಷ್ಯ; ಕೋಮಾಗೆ ಜಾರಿದ ಮೈಸೂರಿನ ಯುವಕ

Kannada News No Comments on ವೈದ್ಯರ ನಿರ್ಲಕ್ಷ್ಯ; ಕೋಮಾಗೆ ಜಾರಿದ ಮೈಸೂರಿನ ಯುವಕ 23

ಮೈಸೂರು: ಜೀವ ಉಳಿಸೋ ಡಾಕ್ಟರ್ ತಪ್ಪು ಮಾಡಿದ್ರೆ ಹೇಗೆ ಪ್ರಾಣಕ್ಕೆ ಸಂಚಕಾರ ಆಗುತ್ತೆ ಅನ್ನೋದಕ್ಕೆ ಮೈಸೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ.

ಕಿಡ್ನಿ ಆಪರೇಷನ್‍ಗೆ ಮೊದಲು ಮಿಷನ್ ಆಸ್ಪತ್ರೆ ಡಾಕ್ಟರ್ ಕೊಟ್ಟ ಅರವಳಿಕೆ ಇಂಜೆಕ್ಷನ್‍ನಿಂದ ಗಟ್ಟಿಮುಟ್ಟಾಗಿದ್ದ ಯುವಕ ಇದೀಗ ಜೀವಚ್ಛವವಾಗಿದ್ದಾರೆ.ಚಾಮರಾನಗರದ ಕೆಲಸೂರಿನ ಮಂಜುಸ್ವಾಮಿ ಅನ್ನೋ ಯುವಕ ಕಿಡ್ನಿ ಸಮಸ್ಯೆ ಅಂತ ಮೈಸೂರಿನ ಮಿಷನ್ ಆಸ್ಪತ್ರೆಗೆ ಬಂದಿದ್ರು. ಆದ್ರೆ ವೈದ್ಯರ ಎಡವಟ್ಟಿನಿಂದ ಜೀವಂತ ಶವವಾಗಿದ್ದಾರೆ. ಸದ್ಯ ಈ ಯುವಕನ ಸ್ಥಿತಿ ನೋಡಿದ್ರೆ ಎಂಥವರ ಕರುಳು ಚುರುಕ್ ಅನ್ನುತ್ತೆ.

22 ವರ್ಷದ ಮಂಜುಸ್ವಾಮಿಗೆ ಚೆಕಪ್ ಮಾಡಿದ ಮಿಷನ್ ಆಸ್ಪತ್ರೆ ಡಾಕ್ಟರ್ ಸೋಮಶೇಖರ್, ಆಪರೇಷನ್ ಅಗತ್ಯ ಅಂತ ಹೇಳಿದ್ರು. ಆಪರೇಷನ್‍ಗೆ ಮೊದಲು ಅವರೇ ಕೊಟ್ಟ ಅರವಳಿಕೆ ಇಂಜೆಕ್ಷನ್‍ನಿಂದಾಗಿ ಮಂಜುಸ್ವಾಮಿ ಕೋಮ ಸ್ಥಿತಿ ತಲುಪಿದ್ದಾರೆ.ಈಗ ಮಂಜುಸ್ವಾಮಿ ಸಹಜ ಸ್ಥಿತಿಗೆ ಬರೋದೇ ಕಷ್ಟ ಅಂತಾ ವೈದ್ಯರೇ ಹೇಳ್ತಿದ್ದಾರೆ. ಹೀಗಾಗಿ ಮಂಜುಸ್ವಾಮಿ ಕುಟುಂಬಸ್ಥರು ಮಂಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.