ಮೈಸೂರು ಜೂ ಪಕ್ಷಿಗಳಲ್ಲಿ ಮಾರಕ ಹಕ್ಕಿ ಜ್ವರ! ಪ್ರವಾಸಿಗರಿಗೆ ಮೃಗಾಲಯ ಒಂದು ತಿಂಗಳುಬಂದ್

BREAKING NEWS, Kannada News No Comments on ಮೈಸೂರು ಜೂ ಪಕ್ಷಿಗಳಲ್ಲಿ ಮಾರಕ ಹಕ್ಕಿ ಜ್ವರ! ಪ್ರವಾಸಿಗರಿಗೆ ಮೃಗಾಲಯ ಒಂದು ತಿಂಗಳುಬಂದ್ 265

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪಕ್ಷಿಗಳಲ್ಲಿ ಮಾರಕ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಮೃಗಾಲಯವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಮೃಗಾಲಯದಲ್ಲಿ ಪಕ್ಷಿಗಳು ಸತತ ಸಾವಿಗೀಡಾದ ಹಿನ್ನೆಲೆಯಲ್ಲಿ ಹಕ್ಕಿ ಜ್ವರ ಸೋಂಕು ತಗುಲಿದ್ದು, ಅದು ಪ್ರವಾಸಿಗರು ಹಾಗೂ ಇತರ ಪ್ರಾಣಿಗಳಿಗೂ ಹರಡದಿರಲಿ ಎಂಬ ಉದ್ದೇಶದಿಂದ ಫೆಬ್ರವರಿ 2ರ ತನಕ ಮುಚ್ಚಲು ಮೃಗಾಲಯದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಡಿಸೆಂಬರ್ 28ರಂದು ಮೃಗಾಲಯದ ಆವರಣದಲ್ಲಿರುವ ಮೂರನೇ ಸಂಖ್ಯೆಯ ಕೊಳದಲ್ಲಿ ಪೆಲಿಕಾನ್ ಸೇರಿ 4 ಪಕ್ಷಿಗಳು ಸಾವಿಗೀಡಾಗಿತ್ತು. ತಕ್ಷಣ ಅದರ ಸ್ಯಾಂಪಲ್ನ್ನುಭೂಪಾಲ್ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಯಿತು.

ಡಿಸೆಂಬರ್ 31ರಂದು ಅಲ್ಲಿಂದ ನಮಗೆ ಮಾಹಿತಿ ಬಂದಿದ್ದು, ಇಲ್ಲಿನ ಪಕ್ಷಿಗಳು ಎಚ್5ಎನ್8 ಎಂಬ ಹಕ್ಕಿ ಜ್ವರವಿರುವುದು ಧೃಡಪಟ್ಟಿದೆ. ಆದ್ದರಿಂದ ಹಕ್ಕಿ ಜ್ವರ ವ್ಯಾಪಿಸದಂತೆ ಮೃಗಾಲಯದ ಎಲ್ಲಾ ಕಡೆಗಳಲ್ಲಿ ವ್ಯಾಕ್ಸಿನೇಷನ್ ಸಿಂಪಡಣೆ ಕಾರ್ಯವನ್ನು ಆರಂಭಿಸಿದ್ದು, ಹಕ್ಕಿ ಜ್ವರ ನಿಯಂತ್ರಣಕ್ಕೆತರಲು ಕ್ರಮ ಕೈಗೊಂಡಿದ್ದೇವೆ. ಭೂಪಾಲ್ಲ್ಯಾಬ್ ತಜ್ನರ ಸಲಹೆ ಮೇರೆಗೆ 30 ದಿನಗಳ ಕಾಲ ಮೃಗಾಲಯವನ್ನು ಮುಚ್ಚಲಾಗುತ್ತಿದೆ. ಒಟ್ಟು 830 ಪಕ್ಷಿಗಳಿದ್ದು, 10 ದಿನಕ್ಕೊಮ್ಮೆ ಸ್ಯಾಂಪಲ್ಗಳನ್ನು ಕಳುಹಿಸಿಕೊಟ್ಟು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕು ಕಡಿಮೆಯಾದ ಬಗ್ಗೆ ವರದಿ ಬರುತ್ತಿದ್ದಂತೆ ಮೃಗಾಲಯವನ್ನು ತೆರೆಯಲಾಗುವುದು ಅಂತಾ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ತಿಳಿಸಿದ್ದಾರೆ.

ಈಗಾಗಲೇ ಮೃಗಾಲಯದ ಸಿಬ್ಬಂದಿಆವರಣದ ಎಲ್ಲಾ ಕಡೆ ಹಕ್ಕಿ ಜ್ವರ ನಿರೋಧಕ ಔಷಧಿಯನ್ನು ಸಿಂಪಡಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಮೃಗಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಮುಖಕ್ಕೆ ಮಾಸ್ಕ್ ಧರಿಸಿ ಕೆಲಸ ಮಾಡುತ್ತಿದ್ದು, ಹಕ್ಕಿ ಜ್ವರ ನಿಯಂತ್ರಣಕ್ಕೆ ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಂದು ಭಾಗದ ಸಿಬ್ಬಂದಿ ಪ್ರವೇಶ ದ್ವಾರದಿಂದ, ಇನ್ನೊಂದು ಭಾಗದ ಸಿಬ್ಬಂದಿ ನಿರ್ಗಮನ ದ್ವಾರದಿಂದ ಬಂದುಹೋಗುವ ವ್ಯವಸ್ಥೆ ಮಾಡಿ, ಹಕ್ಕಿ ಜ್ವರ ಉಲ್ಭಣಗೊಳ್ಳದಂತೆ ಎಚ್ಚರ ವಹಿಸಲಾಗಿದೆ. ಆದರೆ ಮೃಗಾಲಯವನ್ನು ಒಂದು ತಿಂಗಳ ಕಾಲ ಪ್ರವಾಸಿಗರಿಗೆ ಬಂದ್ಮಾ ಡುವ ಬಗ್ಗೆ ಆಡಳಿತ ಮಂಡಳಿಯ ಅನುಮತಿ ಪಡೆದಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಹೇಳಿದ್ದಾರೆ. ಇದು ಮೃಗಾಲಯದಲ್ಲಿ ಅಧಿಕಾರಿಗಳು ಅಧ್ಯಕ್ಷರ ಮಧ್ಯೆ ಸಮನ್ವಯತೆ ಇಲ್ಲವೆಂಬುದನ್ನು ತೋರಿಸುತ್ತದೆ.

ಒಟ್ಟಾರೆ ಕಳೆದ ಕೆಲವು ದಿನಗಳಿಂದ ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಮೈಸೂರು ಮೃಗಾಲಯದಲ್ಲಿ ಈಗ ಹಕ್ಕಿ ಜ್ವರ ಕಾಣಿಸಿಕೊಂಡು 30 ದಿನ ಪ್ರವಾಸಿಗರನ್ನು ನಿರ್ಬಂಧಿಸುವ ತೀರ್ಮಾನ ತೆಗೆದುಕೊಂಡಿರುವುದು ಲಕ್ಷಾಂತರ ಪ್ರವಾಸಿಗರಿಗೆ ನಿರಾಶೆ ಉಂಟು ಮಾಡಿದೆ. ಹಕ್ಕಿ ಜ್ವರ ಹರಡದಂತೆ ಕಾಲಕಾಲಕ್ಕೆ ಮುನ್ನೆಚ್ಚರಿಕೆ ವಹಿಸುವಲ್ಲಿ ಮೃಗಾಲಯದ ಅಧಿಕಾರಿಗಳು ಎಡವಿದ್ದಾರಾ ಅನ್ನುವ ಅನುಮಾನಗಳಂತು ಉಳಿದುಬಿಟ್ಟಿದೆ.

-ಜೆ. ಪುಷ್ಪಲತಾ

Related Articles

Leave a comment

Back to Top

© 2015 - 2017. All Rights Reserved.