ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕ್‌ ಮಾಡಿದರೆ ಶೇ 5ರಷ್ಟು ರಿಯಾಯತಿ!

BREAKING NEWS, Kannada News No Comments on ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕ್‌ ಮಾಡಿದರೆ ಶೇ 5ರಷ್ಟು ರಿಯಾಯತಿ! 23

ಕೇಂದ್ರ ಸರ್ಕಾರದ ನಗದು ರಹಿತ ವಹಿವಾಟಿಗೆ ತೈಲ ಕಂಪನಿಗಳು ಸಾಥ್‌ ನೀಡಿವೆ. ಇನ್ಮುಂದೆ ಎಲ್‌ಪಿಜಿ ಸಿಲಿಂಡರ್‌ಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಶೇ.5 ರಷ್ಟು ರಿಯಾಯಿತಿ ನೀಡುವುದಾಗಿ ತೈಲ ಕಂಪೆನಿಗಳು ಘೋಷಿಸಿವೆ.

ಸಿಲಿಂಡರ್‌ಗಾಗಿ ಬುಕ್ ಮಾಡುವ ಗ್ರಾಹಕರು ನೆಟ್‌ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿದಾಗ ಅವರಿಗೆ ಶೇ.5 ರಷ್ಟು ರಿಯಾಯಿತಿ ದೊರೆಯಲಿದೆ ಎಂದಿರುವ ತೈಲ ಕಂಪೆನಿಗಳು, ನಿವ್ವಳ ಮೊತ್ತದಲ್ಲಿ ಶೇ 5  ರಷ್ಟು ರಿಯಾಯಿತಿ ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದೆ.

ದೇಶದಲ್ಲಿ ನೋಟ್‌ ಬ್ಯಾನ್‌ ಆದ ಬಳಿಕ ಕೇಂದ್ರ ಸರಕಾರದ ನಗದುರಹಿತ ಹಣದ ವಹಿವಾಟು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ತೈಲ ಕಂಪೆನಿಗಳು ಅಡುಗೆ ಅನಿಲ ಬಳಸುವ ಗ್ರಾಹಕರಿಗೆ ಶೇ.5 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿವೆ ಎನ್ನಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.