ಒಂದೇ ಕುಟುಂಬದ ಐವರು ಆತ್ಮಹತ್ಯೆ?

BREAKING NEWS, Kannada News No Comments on ಒಂದೇ ಕುಟುಂಬದ ಐವರು ಆತ್ಮಹತ್ಯೆ? 46

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಧಮ೯ಸ್ಥಳ ಠಾಣೆ ವ್ಯಾಪ್ತಿಯ ಕೊಕ್ಕಡದ ಆಲಡ್ಕ ಎಂಬಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಆಲಡ್ಕದ ಬಾಬು ಗೌಡ ಎಂಬವರ ಕುಟುಂಬದಲ್ಲಿ ಈ ಘಟನೆ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಎಂಡೋಸಲ್ಫಾನ್ ಪೀಡಿತ ವ್ಯಕ್ತಿಯೂ ಇದರಲ್ಲಿ ಇದ್ದಾರೆ.
ಈಗಾಗಲೇ ನಾಲ್ವರ ಶವ ಬಾವಿನಲ್ಲಿ ಪತ್ತೆಯಾಗಿದೆ.ಇವರಲ್ಲಿ ಸದಾನಂದ
ಎಂಬವರು ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ. ಮನೆಗೆ ಬೀಗ ಹಾಕಿರುವುದು ಬೆಳಕಿಗೆ ಬಂದಿದೆ.

ಕುಟುಂಬದ ಹಿರಿಯರಾದ ಬಾಬುಗೌಡ, ಪತ್ನಿ ಗಂಗಮ್ಮ, ಮೂವರು ಮಕ್ಕಳಾದ ದಯಾನಂದ, ನಿತ್ಯಾನಂದ, ಸದಾನಂದ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾದವರು.

ಈ ಪೈಕಿ ದಯಾನಂದ ಅವರ ಬಗ್ಗೆ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. ಅವರು ಕೂಡ ಬಾವಿಯಲ್ಲಿ ಶವವಾಗಿದ್ದಾರೆಯೇ ಎಂದು ಶೋಧಿಸಲಾಗುತ್ತಿದೆ
ಧರ್ಮಸ್ಥಳ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.