ಸ್ಪಷ್ಟನೆಯ ಹೆಸರಲ್ಲಿ ಮತ್ತೊಮ್ಮೆ ತಗಾದೆ ತೆಗೆದ ಕೇರಳದ ಮುಜರಾಯಿ ಸಚಿವ

BREAKING NEWS, Kannada News, National, News 1 Comment on ಸ್ಪಷ್ಟನೆಯ ಹೆಸರಲ್ಲಿ ಮತ್ತೊಮ್ಮೆ ತಗಾದೆ ತೆಗೆದ ಕೇರಳದ ಮುಜರಾಯಿ ಸಚಿವ 181
ತಿರುವನಂತಪುರಂ : ಇಲ್ಲಿನ ದೇವಸ್ಥಾನದ ಕಾರ್ಯಕ್ರಮದಲ್ಲಿ ಶೃಂಗೇರಿ ಸ್ವಾಮೀಜಿಗಳಿಗೆ ಅವಮಾನ ಮಾಡಿದ ಘಟನೆ ಬಗ್ಗೆ, ಕೇರಳದ ಮುಜರಾಯಿ (ದೇವಸ್ವಂ) ಸಚಿವ ಕಡಗಂಪಳ್ಳಿ ಸುರೇಂದ್ರನ್ ಮತ್ತೆ ತಗಾದೆ ತೆಗೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ಪೋಸ್ಟ್ ಹಾಕಿರುವ ಸುರೇಂದ್ರನ್, ಎರಡು-ಮೂರು ಜನ ಕೂರುವಂತಹ ದೊಡ್ಡ ಆಸನ ಸ್ವಾಮೀಜಿಗಳಿಗೆ ಏಕೆ ಎಂದು ಪ್ರಶ್ನಿಸಿದ್ದಾರೆ.
ವೇದಿಕೆಯಲ್ಲಿ ಸ್ವಾಮೀಜಿಗಳಿಗೆ ಆಗಲಿ, ಯಾರಿಗೇ ಆಗಲಿ ಅಷ್ಟು ದೊಡ್ಡ ಆಸನ ಅನಗತ್ಯ. ಹಾಗಾಗಿ ನಾನು ಕಾಂಗ್ರೆಸ್ ಶಾಸಕ ಶಿವಕುಮಾರ್ ಜೊತೆ ಸೇರಿ ಅದನ್ನು ತೆರವು ಮಾಡಿದ್ದೇನೆ. ಇದು ನಮ್ಮ ಸರಕಾರದ ನೀತಿಯೂ ಆಗಿದೆ ಎಂದಿದ್ದಾರೆ.

ಅಲ್ಲದೇ, ಈ ಘಟನೆಯನ್ನು ಕಾಂಗ್ರೇಸ್ ಶಾಸಕ ವಿ.ಟಿ ಬಲರಾಂ ಕೂಡಾ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಫೇಸ್ಬುಕ್’ನಲ್ಲಿ ಬರೆದುಕೊಂಡಿರುವ ಬಲರಾಂ, ಸನ್ಯಾಸಿಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶೃಂಗೇರಿ ಸ್ವಾಮೀಜಿಗಳ ಆದಿಯಾಗಿ ಎಲ್ಲ ಸ್ವಾಮೀಜಿಗಳ ಕೆಲಸವನ್ನ ತಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.

ಒಟ್ಟಿನಲ್ಲಿ, ಯಾವುದೇ ರಾಜಕೀಯದಲ್ಲಿ ತಲೆಹಾಕದ ಶೃಂಗೇರಿ ಸ್ವಾಮೀಜಿಗಳ ಮೇಲೆ ಕೇರಳದಲ್ಲಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷಗಳು ಮುಗಿ ಬಿದ್ದಿರುವುದು ಮಾತ್ರ ಇಡೀ ದೇಶದ ಗಮನವನ್ನು ಸೆಳೆದಿದೆ. ಮಾತ್ರವಲ್ಲ, ದೇಶಾದ್ಯಂತ ಈ ಬೆಳವಣಿಗೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Related Articles

1 Comment

  1. Santhu June 14, 2017 at 3:30 pm

    E bolimaklige tale sari illa antha ansutthe. Vinasha kaale vipareetha buddhi antha helluwa hage yaw political party gu support madadhe iro matadh bagge kettadagi mathadthare andre iwra vuddhara yawattu aagodilla bidi..

Leave a comment

Back to Top

© 2015 - 2017. All Rights Reserved.