ಬಿದ್ದು ಪೆಟ್ಟಾದರೂ ಗಾಯ ಲೆಕ್ಕಿಸದೇ ಎಂದಿನಂತೆ ಪೂಜಾ ಕೈಕಂರ್ಯದಲ್ಲಿ ಭಾಗಿಯಾದ ಪೇಜಾವರ ಶ್ರೀ

Kannada News, News, Regional No Comments on ಬಿದ್ದು ಪೆಟ್ಟಾದರೂ ಗಾಯ ಲೆಕ್ಕಿಸದೇ ಎಂದಿನಂತೆ ಪೂಜಾ ಕೈಕಂರ್ಯದಲ್ಲಿ ಭಾಗಿಯಾದ ಪೇಜಾವರ ಶ್ರೀ 18
ಉಡುಪಿ : ಉಡುಪಿಯ ಪರ್ಯಾಯ ಪೀಠಾರೋಹಣದಲ್ಲಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಾಲು‌ಜಾರಿ‌ಬಿದ್ದು ಗಾಯಗೊಂಡಿದ್ದಾರೆ. ನಿನ್ನೆ ಮುಂಜಾನೆ ಪೂಜೆಯ ವೇಳೆಯಲ್ಲಿ ಸ್ವಾಮೀಜಿಗಳು ಕಾಲುಜಾರಿ ಬಿದ್ದಿದ್ದಾರೆ. ಈ ವೇಳೆ ಶ್ರೀಗಳ ಭುಜಕ್ಕೆ ಸಣ್ಣ ಗಾಯವಾಗಿದ್ದು, ತಕ್ಷಣ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ.
ಆದರೆ, ಈ ವಯಸ್ಸಿನಲ್ಲೂ ಗಾಯವನ್ನು ಲೆಕ್ಕಿಸದ ಶ್ರೀಗಳು, ಎಂದಿನಂತೆ ನಿರಂತರ ಚಟುವಟಿಕೆಯಿಂದಿದ್ದಾರೆ. ಅಷ್ಟೇ ಅಲ್ಲದೇ ಲಕ್ಷ ತುಳಸಿ ‌ಅರ್ಚನೆಯಲ್ಲಿ ಕೂಡ‌ ಭಾಗಿಯಾಗಿದ್ದಾರೆ. ಪಾಠ, ಪ್ರವಚನ, ಪೂಜೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಸ್ವಾಮೀಜಿ ಆರೋಗ್ಯದಿಂದಿದ್ದಾರೆ ಎಂದು ಸ್ವಾಮಿಜಿ ಆಪ್ತರು ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.