ಸಹಾಯ ಕೇಳಿಬಂದ ಉಡುಪಿ ಮೂಲದ ಅಪ್ರಾಪ್ತೆ ಮೇಲೆ ಬಸ್ ಚಾಲಕ-ನಿರ್ವಾಹಕರಿಂದ ಸಾಮೂಹಿಕ ಅತ್ಯಾಚಾರ

Crime No Comments on ಸಹಾಯ ಕೇಳಿಬಂದ ಉಡುಪಿ ಮೂಲದ ಅಪ್ರಾಪ್ತೆ ಮೇಲೆ ಬಸ್ ಚಾಲಕ-ನಿರ್ವಾಹಕರಿಂದ ಸಾಮೂಹಿಕ ಅತ್ಯಾಚಾರ 28
ಹಾವೇರಿ : ಸಹಾಯ ಕೇಳಿಕೊಂಡು ಬಂದ ಅಪ್ರಾಪ್ತೆಗೆ ಸಹಾಯ ಮಾಡುವುದಾಗಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಉಡುಪಿ ಮೂಲದ ಅಪ್ರಾಪ್ತೆ ತನ್ನ ಪ್ರಿಯಕರ ಹಾವೇರಿಯ ಹಿರೇಕೆರೂರು ಮೂಲದ ಯುವಕನನ್ನು ಹುಡುಕಿಕೊಂಡು ಬಂದಿದ್ದಳು.
ಆದರೆ ಪ್ರಿಯಕರ ಸಿಗದ ಕಾರಣ ತಡರಾತ್ರಿ ಮರಳಿ ಉಡುಪಿಗೆ ತೆರಳಲು ರಾಣೇಬೆನ್ನೂರಿಗೆ ಬಂದಿದ್ದಳು. ಈ ವೇಳೆ ತಾನು ಬಂದಿದ್ದ ಬಸ್ಸಿನ ಕಂಡಕ್ಟರ್, ಡ್ರೈವರ್ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ, ಹಿರೇಕೆರೂರು ಡಿಪೋದ ಕಂಡಕ್ಟರ್ ವೈ.ಸಿ ಕಟ್ಟೆಕಾರ, ಡ್ರೈವರ್ ವಿ.ಆರ್ ಹಿರೇಮಠ ಹಾಗೂ ರಾಣೆಬೆನ್ನೂರು ಡಿಪೋದ ಡ್ರೈವರ್ ಕಂ ಕಂಡಕ್ಟರ್ ರಾಘವೇಂದ್ರ ಬಡಿಗೇರ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಜೂನ್ 5ರಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ನಲ್ಲಿ ಕೃತ್ಯ ನಡೆದಿದೆ. ಮಾರನೇ ದಿನ ಸುಧಾರಿಸಿಕೊಂಡು ಉಡುಪಿಗೆ ಬಂದಿರುವ ಅಪ್ರಾಪ್ತೆ, ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರನ್ನು ಆಧರಿಸಿ ಮೂವರು ಕಾಮುಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕೆಎ47-ಎಫ್449 ಸಂಖ್ಯೆಯ ಬಸ್ ವಶಕ್ಕೆ ಪಡೆದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.