ಮೇಯರ್ ದಾಳಿಗೆ ಹೆದರಿ ಅರೆಬೆತ್ತಲಾಗಿ ಓಡಿದ ಗ್ರಾಹಕರು

BREAKING NEWS, Kannada News, Regional No Comments on ಮೇಯರ್ ದಾಳಿಗೆ ಹೆದರಿ ಅರೆಬೆತ್ತಲಾಗಿ ಓಡಿದ ಗ್ರಾಹಕರು 3
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಮತ್ತೊಮ್ಮೆ ತಮ್ಮ ಖದರ್ ತೋರಿಸಿದ್ದಾರೆ. ಸ್ಪಾ, ಯುನಿ ಸೆಕ್ಸ್ ಸಲೂನ್, ಆರ್ಯುವೇದಿಕ್ ಸೆಂಟರ್, ಸ್ಕಿಲ್ ಗೇಮ್ ಸೆಂಟರ್‍ಗಳ  ಹೆಸರಲ್ಲಿ ಅನಾಚಾರ ಮಾಡುತ್ತಿದ್ದವರ ಬಣ್ಣವನ್ನು ಬಯಲು ಮಾಡಿದ್ದಾರೆ.
ಮಜಾ ಅಂದರೆ, ಮೇಯರ್ ದಾಳಿ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ, ಅರೆಬೆತ್ತಲಾಗಿದ್ದ ಕೆಲ ಗ್ರಾಹಕರು ತಮ್ಮ ಕೈಗೆ ಸಿಕ್ಕ ಬಟ್ಟೆಯಿಂದ ಮಾನ ಮುಚ್ಚಿಕೊಂಡು ಓಟ ಕಿತ್ತಿದ್ದಾರೆ.
ಮಂಗಳೂರು ಹುಡುಗಿಯರನ್ನು ನಾನು ಇರೋ ತನಕ ದಂಧೆಗೆ ಇಳಿಸಲಾರೆ. ಇದು ಮುಂಬೈಯಲ್ಲ, ಮಂಗಳೂರು ಅಂತಾ ಮೇಯರ್ ಕವಿತಾ ಸನಿಲ್ ಅಕ್ರಮ ದಂಧೆಕೋರರ ವಿರುದ್ಧ ಗುಡುಗಿದ್ದಾರೆ. ಅಕ್ರಮಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗಕೊಡಲ್ಲ ಎಂದು ತಿಳಿಸಿದ್ದಾರೆ.

 

Related Articles

Leave a comment

© 2015 - 2017. All Rights Reserved.

Back to Top