ನಟಿ ರಮ್ಯಾ ಜೊತೆ ಕೆಲಸ ಮಾಡಲು ಇಲ್ಲಿದೆ ನೋಡಿ ಅವಕಾಶ…!!

BREAKING NEWS, Kannada News, Regional No Comments on ನಟಿ ರಮ್ಯಾ ಜೊತೆ ಕೆಲಸ ಮಾಡಲು ಇಲ್ಲಿದೆ ನೋಡಿ ಅವಕಾಶ…!! 89
ನವದೆಹಲಿ : ನಟಿ, ರಾಜಕಾರಣಿ ರಮ್ಯಾ ಜೊತೆ ನಿಮಗೆ ಕೆಲಸ ಮಾಡಲು ಮನಸ್ಸಿದೆಯೇ?? ಹಾಗಾದರೆ ಇಲ್ಲಿದೆ ನೋಡಿ ಸದವಕಾಶ..!! ಹೌದು, ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ಘಟಕಕ್ಕೆ ಅಧ್ಯಕ್ಷೆಯಾಗಿರುವ ರಮ್ಯಾ, ಮೋದಿ ಸರ್ಕಾರದ ವಿರುದ್ಧ ‘ಡಿಜಿಟಲ್ ಯುದ್ಧ’ ಸಾರಲು ನಿರ್ಧರಿಸಿದ್ದಾರೆ. ಅದಕ್ಕೆಂದೇ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕವು 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ.
ಉದ್ಯೋಗಾವಕಾಶಕ್ಕೆ ಸಂಬಂಧಿಸಿದಂತೆ ಲಿಂಕ್ಡ್ ಇನ್ ಆನ್‌ಲೈನ್ ತಾಣದಲ್ಲಿ ವಿವಿಧ ಹುದ್ದೆಗಳಿಗೆ ಕಾಂಗ್ರೆಸ್ ಅರ್ಜಿ ಕರೆದಿದೆ. ವಿಶ್ಲೇಷಣಾ ವ್ಯವಸ್ಥಾಪಕ, ಡಿಜಿಟಲ್ ಮೀಡಿಯಾ ಪ್ಲ್ಯಾನರ್, ಡಾಟಾ ಅನಲಿಸ್ಟ್, ಎನಿಮೇಟರ್, ವಿಡಿಯೋ ಎಡಿಟರ್, ಕ್ಯಾರಿಕೇಚರ್ ಚಿತ್ರಕಾರ, ಅಕೌಂಟ್ ಡೈರೆಕ್ಟರ್ ಸೇರಿದಂತೆ 25 ಹುದ್ದೆಗಳ ನೇಮಕಗಳು ಇದರಲ್ಲಿ ಸೇರಿವೆ.
ಇದೇ ವೇಳೆ ಕನ್ನಡ, ತಮಿಳು, ಕನ್ನಡ ಹಾಗೂ ಗುಜರಾತಿ ಲೇಖನಗಳು ಹಾಗೂ ಭಾಷಣಗಳನ್ನು ತರ್ಜುಮೆ ಮಾಡುವವರಿಗೂ ಅರ್ಜಿ ಆಹ್ವಾನಿಸಲಾಗಿದೆ.
ಈ ವಿಷಯದ ಬಗ್ಗೆ ಖಚಿತಪಡಿಸಿರುವ ರಮ್ಯಾ, ಹೌದು. ನಮ್ಮ ತಂಡವನ್ನು ವಿಸ್ತರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.