ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಡಲು ಇಂದು ರಮಾನಾಥ ರೈ ನೇತೃತ್ವದಲ್ಲಿ ಶಾಂತಿ ಸಭೆ : ಸಭೆಗೆ ಬಿಜೆಪಿ ಬಹಿಷ್ಕಾರ

BREAKING NEWS, Kannada News, Regional No Comments on ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಡಲು ಇಂದು ರಮಾನಾಥ ರೈ ನೇತೃತ್ವದಲ್ಲಿ ಶಾಂತಿ ಸಭೆ : ಸಭೆಗೆ ಬಿಜೆಪಿ ಬಹಿಷ್ಕಾರ 4
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ುಂಟಾಗಿರುವ ಕೋಮು ದ್ವೇಷ ಕಳೆದ 3-4 ದಿನಗಳಿಂದ ಶಾಂತವಾಗಿದೆ. ಆದರೆ ರಾಜಕೀಯ ಸಂಘರ್ಷ ಮಾತ್ರ ಇನ್ನೂ ನಿಂತಿಲ್ಲ. ವಿದೇಶ ಪ್ರವಾಸದಲ್ಲಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ವಾಪಾಸ್ ಬಂದಿದ್ದು, ರಾಜ್ಯ ಸರ್ಕಾರದ ವಿರುದ್ದ ಮತ್ತೆ ಹರಿಹಾಯ್ದಿದ್ದಾರೆ.
ಮತ್ತೊಂದೆಡೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸರಣಿ ಸಭೆ ನಡೆಸಿದ್ದಾರೆ. ಇವೆಲ್ಲವುಗಳ ನಡುವೆ ಸಚಿವ ರಮಾನಾಥ ರೈ ಶರತ್ ಮಡಿವಾಳ ಮನೆಗೆ ಭೇಟಿ ನೀಡಿದ್ದಾರೆ.
ಅಲ್ಲದೇ, ಇಂದು ನಡೆಯುವ ಶಾಂತಿ ಸಭೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿರುವ ಸಂಸದ ಕಟೀಲ್, ಹಿಂದೂ ಮುಖಂಡರನ್ನು ಬಂಧಿಸಿದರೆ ಮುಂದಾಗುವ ಘಟನೆಗಳಿಗೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇವೆಲ್ಲವುಗಳ ನಡುವೆ, ಇಂದು ಬಿಜೆಪಿ ಬೃಹತ್ ಪ್ರತಿಭಟನೆಗೆ ಕೂಡಾ ಸಿದ್ದತೆ ನಡೆಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮಂಗಳೂರಿಗೆ ಆಗಮಿಸಿದ್ದಾರೆ.
ಇನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್. ಕೆ. ದತ್ತಾ ಕೂಡಾ ನಾಳೆ ಮಂಗಳೂರಿಗೆ ಭೇಟಿ ನೀಡಲಿದ್ದು, ಜಿಲ್ಲೆಯ ಸ್ಥಿತಿಗತಿ ಅವಲೋಕಿಸಲಿದ್ದಾರೆ.

Related Articles

Leave a comment

© 2015 - 2017. All Rights Reserved.

Back to Top