ಕಾನೂನು ವಿವಿ ಅಂತರ್ ಕಾಲೇಜು ಬ್ಯಾಡ್ಮಿಟನ್ ಟೂರ್ನಿಗೆ ಚಾಲನೆ

BREAKING NEWS, Kannada News, Sports No Comments on ಕಾನೂನು ವಿವಿ ಅಂತರ್ ಕಾಲೇಜು ಬ್ಯಾಡ್ಮಿಟನ್ ಟೂರ್ನಿಗೆ ಚಾಲನೆ 12

ಮೈಸೂರು: ಜೆ.ಎಸ್.ಎಸ್.ಕಾನೂನು ಕಾಲೇಜು ವತಿಯಿಂದ ಕರ್ನಾಟಕ ಕಾನೂನು ವಿವಿ ಅಂತರ್ ಕಾಲೇಜು ಬ್ಯಾಡ್ಮಿಟನ್ ಟೂರ್ನಿ ಆಯೋಜನೆಗೊಂಡಿತ್ತು.

ಮೈಸೂರು ವಿವಿ ಯ ಮಾನಸಗಂಗೋತ್ರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ನಿರ್ದೇಶಕರು ದೈಹಿಕ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ಕಾನೂನು ವಿವಿ, ಹುಬ್ಬಳ್ಳಿಯ ಖಾಲಿದ್ ಖಾನ್ ಅವರು ಉದ್ಘಾಟಿಸಿದರು.

ಉದ್ಘಾಟನೆಯ ನಂತರ ಮಾತನಾಡಿ ಕ್ರೀಡಾಪಟುಗಳಿಗೆ ಫಿಟ್’ನೆಸ್ ಎಂಬುದು ಬಹಳ ಅಗತ್ಯ ಈಗಾಗಿ ಫಿಟ್’ನೆಸ್ ಕಾಯ್ದುಕೊಳ್ಳಿ. ಪ್ರತಿದಿನ ಅಭ್ಯಾಸ ಮಾಡಿ ಮುಂದೆ ಉತ್ತಮ ಫಲಿತಾಂಶ ಪಡೆಯುತ್ತೀರ. ಈ ದಿನ ಮೈಸೂರು ವಿಶ್ವವಿದ್ಯಾಲಯದ ನೂತನವಾದಂತಹ ಒಳಾಂಗಣ ಕ್ರೀಡಾಂಗಣದಲ್ಲಿ ಆಟವಾಡುತ್ತಿದ್ದೀರ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉತ್ತಮ ಆಟವಾಡಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿ.ಎಂ.ಎಸ್ ಕಾನೂನು ಕಾಲೇಜಿನ ದೈಹಿಕ ಶಿಕ್ಷಕರಾದ ಶಿವರಾಮ ರೆಡ್ಡಿ, ಕೃಷ್ಣೇಗೌಡ, ಜಗದೀಶ್, ಸುರೇಶ್ ಕುಮಾರ್ ಅವರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.