ಸಾಂಪ್ರದಾಯಿಕ, ಯಶಸ್ವಿ ದಸರೆ ನಡೆಸಿ: ಲಕ್ಷ್ಮೀನಾರಾಯಣ್

Kannada News, Regional, Top News No Comments on ಸಾಂಪ್ರದಾಯಿಕ, ಯಶಸ್ವಿ ದಸರೆ ನಡೆಸಿ: ಲಕ್ಷ್ಮೀನಾರಾಯಣ್ 19

ಮೈಸೂರು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಅವರು ಮೈಸೂರು ಮುಕುಟ ದಸರೆಯನ್ನು ಸಾಂಪ್ರದಾಯಿಕ ಮತ್ತು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಪರಾಮರ್ಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಲಕ್ಷ್ಮೀನಾರಾಯಣ್ ರವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು, ನಿಗಧಿಪಡಿಸಿರುವ ಕಾರ್ಯಕ್ರಮಗಳ ಮಾಹಿತಿ ಪqದುಕೊಂಡು ಯಾವುದೇ ಅಡಚಣೆಗಳಾಗದಂತೆ ದಸರೆ ಆಯೋಜಿಸಲು ಜಿಲ್ಲಾಧಿಕಾರಿ ಮತ್ತು ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಅವರಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳು ದಸರಾ ಮಹೋತ್ಸವಕ್ಕೆ ಸಂಬಂಧಿಸಿದ ಉಪಸಮಿತಿಗಳು ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಕಾರ್ಯಕ್ರಮಗಳಿಗೆ ಅಚಿತಿಮ ರೂಪಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ದಸರೆಗೆ ರಾಜ್ಯ ಸರ್ಕಾರ ರೂ. 15 ಕೋಟಿ ಮೀಸಲಿಟ್ಟಿದ್ದು, ಮೊದಲ ಬಾಗವಾಗಿ ರೂ. 10 ಕೋಟಿ ಬಿಡುಗಡೆಯಾಗಿದೆ, ಹಾಗೇಯೆ ಚಾಮರಾಜನಗರಕ್ಕೆ ರೂ. 1 ಕೋಟಿ ಹಣವನ್ನು ನೀಡುತ್ತಿದ್ದು, ರೂ 50 ಲಕ್ಷವನ್ನು ಮಂಡ್ಯಕ್ಕೆ ನೀಡಲಾಗುತ್ತಿದೆ. ರಾಜ್ಯಮಟ್ಟದ ಪ್ರಚಾರ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆಯು ನಿರ್ವಹಿಸುತ್ತಿದ್ದು ಸ್ಥಳೀಯ ಪ್ರಚಾರವನ್ನು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಜಿಲ್ಲಾಡಳಿತ ಮಾಡುತಿದೆ ಎಂದು ತಿಳಿಸಿದರು.

ಈ ಬಾರಿ ಕ್ರೀಡಾಕೂಟವನ್ನು ಉದ್ಘಾಟಿಸಲು ಕರ್ನಾಟಕದವರೇ ಆಗಿರುವ ಅಂತರರಾಷ್ಟ್ರೀಯ ಮಹಿಳಾ ಕ್ರಿಕೇಟ್ ತಾರೆಗಳಾದ ವೇದ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರನ್ನು ಮತ್ತು ಕರ್ನಾಟಕದ ಚೆಸ್ ಗ್ರ್ಯಾಂಡ್ ಮಾಸ್ಟರ್ ತೇಜಕುಮಾರ್ ಅವರನ್ನು ಆಹ್ವಾನಿಸುತ್ತಿರುವುದಾಗಿ ಹೇಳಿದರು.

ಇನ್ನುಳಿದಂತೆ ಲೋಕೋಪಯೋಗಿ ಇಲಾಖೆಯು ನಗರದಲ್ಲಿ ತುರ್ತು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು ದಸರೆ ವೇಳೆಗೆ ಸಜ್ಜುಗೊಳ್ಳಲಿದೆ ಎಂದು ತಿಳಿಸಿದರು, ದೀಪಾಲಂಕಾರ ಉಪಸಮಿತಿಯು ಕಾರ್ಯ ಆರಂಬಿಸಿದ್ದು ಪ್ರಗತಿಯಲ್ಲಿದೆ. ದಸರಾ ಚಲನ ಚಿತ್ರೋತ್ಸವವನ್ನು ನೂತನವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದರು. ಉಸ್ತುವಾರಿ ಕಾರ್ಯದರ್ಶಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರ ಅಕಾಡೆಮಿಯನ್ನು ಬಳಸಿಕೊಳ್ಳುವಂತೆ ಸೂಚಿಸಿದರಲ್ಲದೇ ಹೊಸದಾಗಿ ಉರ್ದು ಕವಿಸಮ್ಮೇಳನ ಹಾಗೂ ಸಂವಿಧಾನ ಆಶಯಗಳನ್ನು ಧ್ಯೇಯವಾಗಿಟ್ಟುಕೊಂಡು ನಡೆಸಲಾಗುತ್ತಿರುವ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಪೂರಕ ಸಲಹೆಗಳನ್ನು ನೀಡಿದರು.

ಜಿಲ್ಲಾ ಪಂಚಾಯತ್ ಸಿ.ಇ.ಒ. ಪಿ. ಶಿವಶಂಕರ್, ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್, ವಿವಿಧ ಇಲಾಖೆಗಳ ಉಪ ನಿರ್ದೇಶಕರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a comment

Back to Top

© 2015 - 2017. All Rights Reserved.