5 ಜಿ ಸೇವೆ ನೀಡಲಿದೆ ಬಿಎಸ್‌ಎನ್‌ಎಲ್..!

Automobile, Kannada News, National No Comments on 5 ಜಿ ಸೇವೆ ನೀಡಲಿದೆ ಬಿಎಸ್‌ಎನ್‌ಎಲ್..! 98

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 5ಜಿ ತಂತ್ರಜ್ಞಾನವನ್ನು ನೀಡಲು ಮುಂದಾಗಿದೆ.

ಪ್ರಾಯೋಗಿಕವಾಗಿ ಈ ವರ್ಷದ ಅಂತ್ಯಕ್ಕೆ ಸೇವೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಎಂ.ಡಿ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಇದಕ್ಕಾಗಿ ಲಾರ್ಸೆನ್, ಎಚ್‍ಪಿ ಮತ್ತು ನೋಕಿಯಾ ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚೆ ಮಾಡಲಾಗಿದ್ದು, ಬಿಎಸ್‍ಎನ್‍ಎಲ್ ನ ಸೇವೆಗೆ ಕೋರಿಯಂಟ್ ನೆಟ್ವರ್ಕ್ ಡಿಸೈನ್ ಸಹಕಾರ ನೀಡಲಿದೆ. ಇದರಲ್ಲಿ ವಾಣಿಜ್ಯ ಉದ್ದೇಶ ಇಲ್ಲ. ಆದರೆ, ಇದು ಜ್ಞಾನ ಹಂಚಿಕೆ ಒಡಂಬಡಿಕೆಯಾಗಿದೆ ಎಂದರು.

3ಜಿ , 4ಜಿ ತರಾಂಗಂತರಕ್ಕಿಂತ ಹೆಚ್ಚು ವೇಗದ 5ಜಿ. 2018 ರ ಮಾರ್ಚ್ ವೇಳೆಗೆ ಪರೀಕ್ಷಾರ್ಥವಾಗಿ 5 ಜಿ ಪರಿಚಯವಾಗಲಿದೆ ಎಂದು ಈ ವೇಳೆ ತಿಳಿಸಿದರು.

Related Articles

Leave a comment

Back to Top

© 2015 - 2017. All Rights Reserved.