ಮಿಷನ್ 2025 ರಾಜ್ಯ ಸರ್ಕಾರದ ಒಂದು ಕನಸು: ಹೆಚ್.ಸಿ ಮಹದೇವಪ್ಪ

Kannada News, Regional, Technology No Comments on ಮಿಷನ್ 2025 ರಾಜ್ಯ ಸರ್ಕಾರದ ಒಂದು ಕನಸು: ಹೆಚ್.ಸಿ ಮಹದೇವಪ್ಪ 105

ಮೈಸೂರು: ಕರ್ನಾಟಕ 2025ಕ್ಕೆ ಹೇಗಿರಬೇಕು ಎಂಬ ಕುರಿತು ಮುನ್ನೋಟ ರೂಪಿಸಲು ರಾಜ್ಯ ಸರ್ಕಾರ ಸ್ವರೂಪ ದರ್ಶನ 2025 ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ 4 ವರ್ಷಗಳ ಆಡಳಿತಾವಧಿಯಲ್ಲಿ ಅನೇಕ ಪ್ರಮುಖ ಯೋಜನೆಗಳನ್ನು ಜಾರಿ ಮಾಡಿದೆ. ಅಂತೆಯೇ 2025ಕ್ಕೆ ರಾಜ್ಯ ಯಾವ ರೀತಿ ಇರಬೇಕು ಎಂಬ ಕುರಿತು ಈಗಿನಿಂದಲೇ ಯೋಜನೆ ರೂಪಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ಕ್ಕೆ ರಾಜ್ಯ ಹೇಗಿರಬೇಕು ಎಂಬ ಬಗ್ಗೆ ಮುನ್ನೋಟ ರೂಪಿಸಲು ಸೂಚಿಸಿದ್ದಾರೆ. ಈ ಸ್ವರೂಪ ದರ್ಶನ ರಾಜ್ಯ ಸರ್ಕಾರದ ಒಂದು ಕನಸು. ಅದನ್ನು ನನಸು ಮಾಡಲು ಎಲ್ಲಾ ವಲಯಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂದರು.

ಅಭಿವೃದ್ಧಿಗೆ ಪೂರಕವಾದ ನಿರ್ದಿಷ್ಟ ವಲಯಗಳನ್ನು ಗುರ್ತಿಸಿ ಅವುಗಳನ್ನು ಅಭಿವೃದ್ಧಿಪಡಿಸಬೇಕು. ಈಗಾಗಲೇ ನಗರ ಮೂಲ ಸೌಕರ್ಯ ಸ್ಮಾರ್ಟ್ ಸಿಟಿ, ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಅಲೈಡ್ ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮಾಹಿತಿ ತಂತ್ರಜ್ಞಾನ, ಆಡಳಿತ ಕಾನೂನು ಮತ್ತು ನ್ಯಾಯ ಎಂಬ 5 ವಲಯಗಳನ್ನು ಗುರ್ತಿಸಲಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ರೇಣುಕಾ ಚಿದಂಬರಂ, ಜಿಲ್ಲಾಧಿಕಾರಿಗಳಾದ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.