ವಾಟ್ಸಾಪ್’ನಿಂದ ಹೋಸ ಫೀಚರ್: ಏನಿರಲಿದೆ ಗೊತ್ತಾ ಇದ್ರಲ್ಲಿ..!

International, Kannada News, Technology No Comments on ವಾಟ್ಸಾಪ್’ನಿಂದ ಹೋಸ ಫೀಚರ್: ಏನಿರಲಿದೆ ಗೊತ್ತಾ ಇದ್ರಲ್ಲಿ..! 42

ವಾಟ್ಸಾಪ್ ಜನರ ಜೀವನವನ್ನೇ ಬದಲಾಯಿಸಿದೆ. ಪ್ರತಿಯೊಬ್ಬರ ಕೆಲಸ ಕಾರ್ಯಗಳೂ ಈಗ ವಾಟ್ಸಾಪ್ ಮೂಲಕವೇ ನಡೆಯುತ್ತವೆ. ಇದಕ್ಕೆ ತಕ್ಕಂತೆ ವಾಟ್ಸಾಪ್ ಕೂಡಾ ಕಾಲ ಕಾಲಕ್ಕೆ ನೂತನ ಫೀಚರ್ಸ್’ಗಳನ್ನು ಪರಿಚಯಿಸುತ್ತಿದೆ. ಸದ್ಯ ಕಂಪೆನಿ ನೂತನ ಫೀಚರ್ ಒಂದನ್ನು ಪರಿಚಯಿಸಿದ್ದು, ಬಳಕೆದಾರರಿಗೆ ತಮ್ಮ ಕಾಂಟಾಕ್ಟ್ ನಂಬರ್’ಗಳಿಗೆ ಲೈವ್ ಲೊಕೇಷನ್ ಶೇರ್ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಿದೆ. ಈ ಫೀಚರ್ ಮುಂದಿನ ದಿನಗಳಲ್ಲಿ ಆಂಡ್ರಾಯ್ಟ್ ಹಾಗೂ ಐಫೋನ್’ಗಳಲ್ಲಿ ಅಪ್’ಡೇಟ್ ಆಗಲಿದೆ.

ಈ ಮೊದಲೂ ನೀವು ವಾಟ್ಸಾಪ್’ನಲ್ಲಿ ನೀವಿರುವ ಸ್ಥಳದ ಲೊಕೇಷನ್ ಕಳುಹಿಸುವ ಸೌಲಭ್ಯವಿತ್ತು. ಆದರೆ ಅದು ಲೈವ್ ಅಪ್ಡೇಟ್ ಆಗಿರಲಿಲ್ಲ. ಆದರೆ ಪರಿಚಯಿಸಲಿರುವ ಫೀಚರ್ಸ್’ನಲ್ಲಿ ಲೈವ್ ಲೊಕೇಷನ್ ಕಳುಹಿಸಬಹುದಾಗಿದ್ದು, ಇದು ನಿರಂತರವಾಗಿ ನೀವಿರುವ ಲೊಕೇಷನ್’ನ ಮಾಹಿತಿ ನಿಮ್ಮ ಗೆಳೆಯರಿಗೆ ತಲುಪಿಸಲಿದೆ.

ಇನ್ನು ಒಂದು ಬಾರಿ ಲೊಕೇಷನ್ ಶೇರ್ ಮಾಡಿದರೆ ಪ್ರತಿ ಬಾರಿಯೂ ಇದು ನೀವುರುವ ಸ್ಥಳದ ಮಾಹಿತಿಯನ್ನು ಗೆಳೆಯರಿಗೆ ರವಾನಿಸುತ್ತದೆ ಎಂಬ ಚಿಂತೆ ಬೇಡ. ಯಾಕೆಂದರೆ ಈ ಫೀಚರ್ ಕೆಲವೇ ಸಮಯ ಕಾರ್ಯ ನಿರ್ವಹಿಸುತ್ತದೆ, ಇದಾದ ಬಳಿಕ ಲೈವ್ ಲೊಕೇಷನ್ ಕಳುಹಿಸಲು ಮತ್ತೊಮ್ಮೆ ನೀವು ಶೇರ್ ಮಾಡಬೇಕಾಗುತ್ತದೆ. ಸಿಕ್ಕ ಮಾಹಿತಿ ಅನ್ವಯ ದು ಕೇವಲ ಕಾಂಟಾಕ್ಟ್’ಗಳಿಗಷ್ಟೇ ಅನ್ವಯವುಗುವುದಿಲ್ಲ, ಬದಲಾಗಿ ನೀವಿಚ್ಛಿಸುವ ಗ್ರೂಪ್’ಗಳಿಗೂ ಲೈವ್ ಲೊಕೇಷನ್ ಕಳುಹಿಸಬಹುದು ಎಂದು ತಿಳಿದು ಬಂದಿದೆ.

ಹೀಗೆ ಕಾರ್ಯ ನಿರ್ವಹಿಸಲಿದೆ:

  • ಲೈವ್ ಲೊಕೇಷನ್ ಶೇರ್ ಮಾಡಲು ಮೊದಲು ವಾಟ್ಸಾಪ್ ಚಾಟ್’ಗೆ ತೆರಳಿ ಅಟ್ಯಾಚ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.
  • ಇಲ್ಲಿ ಲೊಕೇಷನ್ ಶೇರ್ ಮಾಡುವ ಕುರಿತಾಗಿ ಸಮಯದ ಅವಧಿಯನ್ನು ನಿಗದಿಪಡಿಸಬೇಕು
  • ಈ ಅವಧಿಯ ಲಿಸ್ಟ್’ನಲ್ಲಿ 15 ನಿಮಿಷ, 1 ಗಂಟೆ, 8 ಗಂಟೆ ಹೀಗೆ ಮೂರು ಆಯ್ಕೆಗಳಿರುತ್ತವೆ.
  • ಅವಧಿಯನ್ನು ಆಯ್ಕೆ ಮಾಡಿ ಶೇರ್ ಮಾಡಬೇಕು.

ಸದ್ಯ  ನೂತನ ಫೀಚರ್ ವಾಟ್ಸಾಪ್’ನ ನೂತನ ಅಪ್ಡೇಟ್’ನೊಂದಿಗೆ ನೀಡಲಾಗುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.