ಈಜೀಪುರ ಕಟ್ಟಡ ಕುಸಿತ ಪ್ರಕರಣ: ಬದುಕುಳಿದಿದ್ದ ಸಂಜನಾ ಸಾವು

Crime, Kannada News, Regional, Top News No Comments on ಈಜೀಪುರ ಕಟ್ಟಡ ಕುಸಿತ ಪ್ರಕರಣ: ಬದುಕುಳಿದಿದ್ದ ಸಂಜನಾ ಸಾವು 18

ಬೆಂಗಳೂರು: ಈಜೀಪುರದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ ಬದುಕುಳಿದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 3 ವರ್ಷದ ಮಗು ಸಂಜನಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

ಈಜಿಪುರದಲ್ಲಿ 3 ದಿನಗಳ ಹಿಂದೆ ಸಿಲಿಂಡರ್ ಸ್ಫೋಟಗೊಂಡು 3 ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ಮೃತಪಟ್ಟಿದ್ದರು. ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳಡಿ ಮಗು ಸಿಲುಕಿತ್ತು. ದೇಹದ ಶೇ. 60ರಷ್ಟು ಭಾಗ ಸುಟ್ಟಿದ್ದರು ಜೀವ ಉಳಿದಿತ್ತು. ತೀವ್ರ ಗಾಯಗೊಂಡ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀರ್ವ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

Related Articles

Leave a comment

Back to Top

© 2015 - 2017. All Rights Reserved.