ಚಾಮರಾಜನಗರದಿಂದ ಸಿಎಂ ರಾಜ್ಯ ಪ್ರವಾಸ

Kannada News, Regional, Top News No Comments on ಚಾಮರಾಜನಗರದಿಂದ ಸಿಎಂ ರಾಜ್ಯ ಪ್ರವಾಸ 25

ಚಾಮರಾಜನಗರ: 2018 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಡಿಸೆಂಬರ್’ನಲ್ಲಿ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದು ಚಾಮರಾಜನಗರದಿಂದ ಈ ಪ್ರವಾಸ ಆರಂಭವಾಗಲಿದೆ.

ಡಿ.15 ರಿಂದ ಜನವರಿ 15ರ ವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲು ಸಿಎಂ ನಿರ್ಧರಿಸಿದ್ದು, ಒಂದು ತಿಂಗಳ ಅವಧಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವುದು ಅವರ ಉದ್ದೇಶ. ಚಾಮರಾಜನಗರದಲ್ಲಿ ಪ್ರಾರಂಭಗೊಳ್ಳುವ ಪ್ರವಾಸ ಬೀದರ್’ನಲ್ಲಿ ಮುಕ್ತಾಯವಾಗಲಿದೆ.

ಸಿಎಂ ರಾಜ್ಯ ಪ್ರವಾಸದ ವೇಳೆ ಪ್ರತಿ ದಿನ 6-8 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿ ಅಧಿವೇಶನದ ಅಂತ್ಯಗೊಳ್ಳುವ ವೇಳೆಗೆ ಈ ಪ್ರವಾಸದ ವೇಳಾಪಟ್ಟಿ ತಯಾರಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Related Articles

Leave a comment

Back to Top

© 2015 - 2017. All Rights Reserved.