ಮೃಗಾಲಯಕ್ಕೇ ನುಗ್ಗಿದ ಚಿರತೆ: ಮರವೇರಿದ ಚಿರತೆ ಹಿಡಿಯಲು ಕಾರ್ಯಾಚರಣೆ

Mysore Dasara 2015, Regional, Top News No Comments on ಮೃಗಾಲಯಕ್ಕೇ ನುಗ್ಗಿದ ಚಿರತೆ: ಮರವೇರಿದ ಚಿರತೆ ಹಿಡಿಯಲು ಕಾರ್ಯಾಚರಣೆ 25

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೊರಗಿನಿಂದ ಬಂದ ಚಿರತೆಯೊಂದು ಮರವೇರಿ ಕುಳಿತು ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ.

ಗುರುವಾರ ಬೆಳಿಗ್ಗೆ ಮೃಗಾಲಯದ ಸಿಬ್ಬಂದಿಯೋರ್ವರು ಮೃಗಾಲಯ ಸುತ್ತ ತಿರುಗುತ್ತಿದ್ದಾಗ ಚಿರತೆ ಮರವೇರಿ ಮಲಗಿರುವುದು ಕಂಡು ಬಂದಿದೆ. ಕೂಡಲೇ ಅವರು ಮೇಲ್ವಿಚಾರಕರಿಗೆ ತಿಳಿಸಿದ್ದು ಅವರು ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಮೈಸೂರಿನ ಕಾರಂಜಿಕೆರೆಯ ದ್ವಾರದಿಂದ ಚಿರತೆ ಮೃಗಾಲಯದೊಳಗೆ ಬಂದಿರಬೇಕೆಂದು ಶಂಕಿಸಲಾಗಿದೆ.

ಇನ್ನು ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ಮುಗಿಯುವವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಏರಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.