ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ ನೋಡಿದ್ದೀರ..? ಅದರ ಬೆಲೆ ಕೇಳಿದ್ರೆ ದಂಗಾಗ್ತೀರ..!

Entertainment, International, Kannada News No Comments on ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ ನೋಡಿದ್ದೀರ..? ಅದರ ಬೆಲೆ ಕೇಳಿದ್ರೆ ದಂಗಾಗ್ತೀರ..! 58

ಲಂಡನ್: ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿಯೊಂದು ಈಗ ಭಾರಿ ಸದ್ದು ಮಾಡುತ್ತಿದೆ. ಇಂಗ್ಲೆಂಡಿನ ಡಿಸೈನರ್ ಆದ ಡೆಬ್ಬಿ ವಿಂಗ್ಹಾಮ್ ನಿಂದ ಚಪ್ಪಲಿ ವಿನ್ಯಾಸಗೊಂಡಿದೆ.

ವಿಂಗ್ಹಾಮ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಡ್ರೆಸ್ ವಿನ್ಯಾಸಗೊಳಿಸಿದ್ದರು. 64 ಮಿಲಿಯನ್ ಡಾಲರ್‍ನ ಕೇಕ್ ಹಾಗೂ 15.45 ಮಿಲಿಯನ್ ಡಾಲರ್‍ನ ಡ್ರೆಸ್ ವಿನ್ಯಾಸಗೊಳಿಸಿದ್ದರು. ಸೆಲೆಬ್ರಿಟಿಗಳಿಗಾಗಿ ದುಬಾರಿ ಉತ್ಪನ್ನಗಳನ್ನ ತಯಾರಿಸೋದು ಈಕೆಯ ಹೆಗ್ಗಳಿಕೆ.

ಇದೀಗ ವಿಂಗ್ಹಾಮ್ ತಯಾರಿಸಿರುವ ಕಾಸ್ಟ್ಲಿ ಚಪ್ಪಲಿಯ ಬೆಲೆ ಬರೋಬ್ಬರಿ 15.1 ಮಿಲಿಯನ್ ಡಾಲರ್. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 97.8 ಕೋಟಿ ರೂಪಾಯಿ. ಇದನ್ನ ಹುಟ್ಟುಹಬ್ಬದ ಉಡುಗೊರೆಗಾಗಿ ಗ್ರಾಹಕರೊಬ್ಬರು ತಯಾರು ಮಾಡಿಸಿದ್ದಾರೆ.

ಅಂಥದ್ದೇನಪ್ಪಾ ಈ ಚಪ್ಪಲಿಯ ವಿಶೇಷತೆ ಅಂತೀರ..? ಇದು ಸಾಮಾನ್ಯ ಚಪ್ಪಲಿಯಲ್ಲ. ಇದರಲ್ಲಿ ಜಗತ್ತಿನ ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರ ಹಾಗೂ ನೀಲಿ ವಜ್ರಗಳನ್ನ ಹಾಕಲಾಗಿದೆ. ಪ್ರತ್ಯೇಕವಾಗಿ ಈ ವಜ್ರಗಳ ಬೆಲೆಯೇ ಸುಮಾರು 84 ಕೋಟಿ ರೂ. ಆಗುತ್ತದೆ. ಇದರ ಜೊತೆಗೆ 3 ಕ್ಯಾರೆಟ್‍ನ ಬಿಳಿ ವಜ್ರ ಹಾಕಲಾಗಿದೆ. ಕೇಕ್ ಐಸಿಂಗ್‍ನಂತೆ ಮಾಡಲಾಗಿರುವ ಡಿಸೈನ್‍ನಲ್ಲಿ 1000 ಪಾಂಯ್ಟರ್ ವಜ್ರಗಳಿವೆ.

ಚಪ್ಪಲಿಯ ಝಿಪ್ ಮತ್ತು ಕೆಳಭಾಗವನ್ನ ಚಿನ್ನದಿಂದ ವಿನ್ಯಾಸ ಮಾಡಲಾಗಿದೆ. ಪ್ರತಿಯೊಂದು ದುಬಾರಿ ವಜ್ರವನ್ನೂ ಪ್ಲಾಟಿನಂನಿಂದ ಕೂರಿಸಲಾಗಿದೆ. ಚಪ್ಪಲಿಯ ಹಿಮ್ಮಡಿಯನ್ನ ಲೆದರ್‍ನಿಂದ ಮಾಡಲಾಗಿದ್ದು, 24 ಕ್ಯಾರೆಟ್ ಚಿನ್ನದ ಪೇಂಟ್‍ನಿಂದ ಪೇಂಟ್ ಮಾಡಲಾಗಿದೆ. ಇದನ್ನ 18 ಕ್ಯಾರೆಟ್‍ನ ಚಿನ್ನದ ನೂಲಿನಲ್ಲಿ ಹೊಲಿಯಲಾಗಿದೆ. ಚಪ್ಪಲಿಯ ಒಳಭಾಗದಲ್ಲೂ ಚಿನ್ನದ ನೂಲಿನಿಂದ ಅಲಂಕಾರ ಮಾಡಲಾಗಿದೆ.

ಇನ್ನು ತಾನು ತಯಾರಿಸಿದ ಅತ್ಯಂತ ದುಬಾರಿ ವಸ್ತುಗಳಲ್ಲಿ ಈ ಚಪ್ಪಲಿಯೇ ಕೊನೆಯದ್ದಾಗಿರುತ್ತದೆ ಎಂದು ವಿಂಗ್ಹಾಮ್ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.