ಕೌಶಲ್ಯ ಅಭಿವೃದ್ಧಿ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ; ದೇಶದ ಅಭಿವೃದ್ಧಿಗೆ ದಾರಿ: ಮೋದಿ

BREAKING NEWS, News, Regional, Top News No Comments on ಕೌಶಲ್ಯ ಅಭಿವೃದ್ಧಿ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ; ದೇಶದ ಅಭಿವೃದ್ಧಿಗೆ ದಾರಿ: ಮೋದಿ 104

ಉಜಿರೆ: “ಕೌಶಲ್ಯ ಅಭಿವೃದ್ಧಿ ಕೇವಲ ಹೊಟ್ಟೆ ಹೊರೆಯುವುದಕ್ಕೋಸ್ಕರ ಅಲ್ಲ ಅದು ದೇಶದ ಅಭಿವೃದ್ಧಿಯ ದಾರಿ. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಇಂತಹ ಕಾರ್ಯಗಳು ಈಗಾಗಲೇ ನಡೆಯುತ್ತಿವೆ. ತೀರ್ಥ ಕ್ಷೇತ್ರಗಳು, ಪುಣ್ಯ ಕ್ಷೇತ್ರಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಕುರಿತು ಇಂದಿಗೂ ಹೆಚ್ಚಿನ ಚರ್ಚೆಗಳಾಗಿಲ್ಲ. ಎಂಬಿಎ ಎಂಜಿನಿಯರಿಂಗ್ ಹಾಗೂ ಕಾಮರ್ಸ್ ಕಾಲೇಜುಗಳ ರ್ಯಾಂಕಿಂಗ್ ಗಳನ್ನು ನಾವೀಗಾಗಲೇ ಕಾಣುತ್ತಿದ್ದೇವೆ. ಸಾಮಾಜಿಕ ಕಲ್ಯಾಣಕ್ಕಾಗಿ ಒಂದು ಸಂಸ್ಥೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ಧರ್ಮಸ್ಥಳ ಮಾಡಿ ತೋರಿಸುತ್ತಾ ಬಂದಿದೆ. ಹೊಸ ಅವಕಾಶಗಳಿಗೆ ದೇಶದ ಯುವಜನತೆಯನ್ನು ಆಕರ್ಷಿಸುವ ಅನಿವಾರ್ಯಯತೆ ಬಂದಿದೆ. ಸ್ವಸಹಾಯ ಸಂಘಗಳಿಗೆ ರೂಪೇ ಕಾರ್ಡುಗಳನ್ನು ವಿತರಿಸುವುದು ಒಂದು ಉತ್ತಮ ಅವಕಾಶ,” ಎಂದು ಮೋದಿ ಹೇಳಿದರು.

“ನಮ್ಮ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಸಂಸತ್ತಿನಲ್ಲಿ ಸಾಕಷ್ಟು ತಿಳಿದುಕೊಂಡವರು ಜ್ಞಾನಿಗಳ ಎನಿಸಿಕೊಂಡವರು ಅಪಹಾಸ್ಯ ಮಾಡಿದರು. ಅದೆಷ್ಟೋ ಜನರ ಬಳಿ ಇಂದಿಗೂ ಮೊಬೈಲ್ ಫೋನ್ ಇಲ್ಲ. ಅವರಿಗೆ ಡಿಜಿಟಲ್ ಎಂದರೆ ಏನೆಂದೇ ಗೊತ್ತಿಲ್ಲ ಅಂತಹ ಸಂದರ್ಭದಲ್ಲಿ ಡಿಜಿಟಲ್ ಇಂಡಿಯಾ ಕಲ್ಪನೆ ಕೇವಲ ಮಾತಿಗೆ ಮಾತ್ರ ಸೀಮಿತ ಎಂದು ಅಪಹಾಸ್ಯ ಮಾಡಿದರು. ಯಾವುದನ್ನೂ ಅಸಾಧ್ಯ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು ಅಂತಹದ್ದನ್ನು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸಾಧ್ಯ ಮಾಡಿ ತೋರಿಸಿದ್ದಾರೆ. ಆದರೆ ನಮ್ಮ ದೇಶದ ಜನತೆ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಕ್ಯಾಶ್ಲೆಸ್ ವ್ಯವಹಾರಗಳನ್ನು ನಿಜ ಮಾಡಿ ತೋರಿಸಿ ಬಿಟ್ಟಿದ್ದಾರೆ,” ಎಂದು ಪ್ರಧಾನಿ ಮುಕ್ತ ಕಂಠದಿಂದ ಶ್ಲಾಘಿಸಿದರು.

“ಭೂಮಿ ನಮಗೆ ಆಹಾರ ಮರಗಳು ನಿಮಗೆ ಆಮ್ಲಜನಕವನ್ನು ಒದಗಿಸುತ್ತವೆ. ಹಾಗಿರುವಾಗ ಆ ಮರಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಾವು ಕೇವಲ ಹಕ್ಕುಗಳ ಕುರಿತು ಮಾತನಾಡುವುದಲ್ಲ ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ಕುರಿತು ಚಿಂತಿಸಬೇಕು. ಇಲ್ಲವಾದಾಗ ಪ್ರಕೃತಿಯಲ್ಲಿ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಸಂಶೋಧನೆಗಳು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಅತಿಯಾಗಿ ಕಂಡುಬರಲಿದೆ ಎಂದು ಹೇಳುತ್ತವೆ. ನಮ್ಮ ಪೂರ್ವಜರು ನಮಗೋಸ್ಕರ ನೀರನ್ನು ಉಳಿಸಿ ಹೋಗಿದ್ದಾರೆ ಅದೇ ರೀತಿ ಮುಂದಿನ ತಲೆಮಾರುಗಳಿಗೆ ನದಿಗಳನ್ನು ಕೆರೆ ಕೊಳ್ಳಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮುಂದಿದೆ. ಇಂತಹ ಕಾರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ವಹಿಸಿಕೊಂಡಿದೆ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಆರಂಭಗೊಳ್ಳುವ ಆಂದೋಲನಗಳು ಯಶಸ್ವಿಯಾಗಿಯೇ ಆಗುತ್ತವೆ ಎಂಬ ಭರವಸೆ ನಮ್ಮಲ್ಲಿದೆ,” ಎಂದರು.

“ಇಂದು ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ನಾವೆಲ್ಲರೂ ಒಂದು ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ಕೃಷಿಯಲ್ಲಿ ಇಂದು ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಶೇ ಐವತ್ತರಷ್ಟು ಕಡಿಮೆ ಮಾಡಬೇಕು. ಆಗ ಆರ್ಥಿಕತೆ ಹಾಗೂ ಭೂಮಿಯ ಫಲವತ್ತತೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ನಮ್ಮ ರೈತರು ಹನಿ ನೀರಾವರಿಯ ಅನುಷ್ಠಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಕೊಂಡು ಹನಿ ಹನಿ ನೀರನ್ನು ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.

Related Articles

Leave a comment

Back to Top

© 2015 - 2017. All Rights Reserved.