ನ್ಯೂಯಾರ್ಕ್‍ನಲ್ಲಿ ಐಸಿಸ್ ಉಗ್ರನ ಆಟ್ಟಹಾಸ: 8 ಬಲಿ – 12 ಮಂದಿಗೆ ಗಾಯ

BREAKING NEWS, International, Kannada News No Comments on ನ್ಯೂಯಾರ್ಕ್‍ನಲ್ಲಿ ಐಸಿಸ್ ಉಗ್ರನ ಆಟ್ಟಹಾಸ: 8 ಬಲಿ – 12 ಮಂದಿಗೆ ಗಾಯ 9

ನ್ಯೂಯಾರ್ಕ್: ಪಾದಚಾರಿ ಮಾರ್ಗದಲ್ಲಿ ಏಕಾಏಕಿ ಉಗ್ರನೊಬ್ಬ ಪಿಕಪ್ ಹರಿಸಿದ ಪರಿಣಾಮ 8 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 12 ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿರುವ ಘಟನೆ ನಡೆದಿದೆ.

ನ್ಯೂಯಾರ್ಕ್‍ನ ವಿಶ್ವ ವ್ಯಾಪಾರ ಕೇಂದ್ರದ ಬಳಿ ಈ ಘಟನೆ ನಡೆದಿದ್ದು, ಅಧಿಕಾರಿಗಳಿಗೆ ದಾಳಿ ನಡೆದ ಸ್ಥಳದಲ್ಲಿ ಇಂಗ್ಲೀಷ್‍ನಲ್ಲಿ ಬರೆದಿರುವ ಒಂದು ನೋಟ್ ಸಿಕ್ಕಿದೆ. ಅದರ ಆಧಾರದ ಮೇಲೆ ಐಸಿಸ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ ಈ ದಾಳಿಯನ್ನು ನಡೆಸಿದ್ದಾನೆ ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ. ಮೂಲಗಳ ಪ್ರಕಾರ, ದಾಳಿಕೋರನನ್ನು 29 ವರ್ಷದ ಸೈಫಲೋಲೋ ಹಬಿಬುಲ್ಲೇವಿಕ್ ಸೈಪೋವ್ ಎಂದು ಗುರುತಿಸಲಾಗಿದೆ. ಈತ ಏಷ್ಯಾದ ಕೇಂದ್ರ ರಾಷ್ಟ್ರವಾದ ಉಜ್ಬೇಕಿಸ್ತಾನ್‍ನ ಪ್ರಜೆಯಾಗಿದ್ದು, 2010ರಲ್ಲಿ ಅಮೆರಿಕಕ್ಕೆ ಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಿಕಪ್ ಬಾಡಿಗೆ ಪಡೆದುಕೊಂಡು ಮನಸೋ ಇಚ್ಛೆ ವಾಹನವನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಮೊದಲು ನಿಂತಿದ್ದ ಒಂದು ಶಾಲಾ ಬಸ್‍ಗೆ ಡಿಕ್ಕಿ ಹೊಡೆದು ನಂತರ ಬೈಕ್ ಮತ್ತು ಸೈಕಲ್ ಪಾದಚಾರಿ ಸವಾರರ ಮೇಲೆ ಏಕಾಏಕಿ ಹರಿಸಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ 6 ಮಂದಿಯನ್ನು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಸುಮಾರು 12 ಕ್ಕೂ ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.