ಪೊಲೀಸರ ವಿರೋಧದ ನಡುವೆಯೂ ಬಿಜೆಪಿ ನವಕರ್ನಾಟಕ ನಿರ್ಮಾಣ ಯಾತ್ರಗೆ ಬೈಕ್’ಗಳಲ್ಲಿ ಹೊರಟ ಕಾರ್ಯಕರ್ತರು

Kannada News, Regional No Comments on ಪೊಲೀಸರ ವಿರೋಧದ ನಡುವೆಯೂ ಬಿಜೆಪಿ ನವಕರ್ನಾಟಕ ನಿರ್ಮಾಣ ಯಾತ್ರಗೆ ಬೈಕ್’ಗಳಲ್ಲಿ ಹೊರಟ ಕಾರ್ಯಕರ್ತರು 28

ಮೈಸೂರು: ಇಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ಬಿಜೆಪಿಯ ನವಕರ್ನಾಟಕ ನಿರ್ಮಾಣ ಯಾತ್ರಗೆ ಮೈಸೂರಿನಿಂದಲೂ ಸಹ ಬಿಜೆಪಿ ಕಾರ್ಯಕರ್ತರು ತೆರಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಡಾ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ 75ದಿನಗಳ ಕಾಲ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದ್ದು ಈ ಯಾತ್ರೆಯ ಉದ್ಘಾಟನಾ ಸಮಾರಂಭವನ್ನು ಇಂದು ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತಪ್ರದರ್ಶನ ಮೈದಾನದಲ್ಲಿ ನಡೆಯುತಿದೆ. ಈ ಸಮಾರಂಭಕ್ಕೆ ಕೃಷ್ಣ ರಾಜ ಕ್ಷೇತ್ರ ಬಿಜೆಪಿ ವತಿಯಿಂದ ಮಾಜಿ ಸಚಿವ ಎಸ್ ಎ ರಾಮದಾಸ್ ರವರ ನೇತೃತ್ವದಲ್ಲಿ ಸುಮಾರು 500ಕ್ಕೂ ಹೆಚ್ಚು ಬೈಕ್ ಗಳಲ್ಲಿ ಸಾವಿರಾರು ಕಾರ್ಯಕರ್ತರನ್ನು ಒಳಗೊಂಡ ಯಾತ್ರೆಯೂ ವಿದ್ಯಾಶಂಕರ ಕಲ್ಯಾಣ ಮಂಟಪದ ಆವರಣದಿಂದ ಬೆಂಗಳೂರಿಗೆ ತೆರಳಿತು.

ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಅವರನ್ನು ತಡೆಯಲು ಮುಂದಾದರೂ ಅದನ್ನು ಲೆಕ್ಕಿಸದೆ ಬೆಂಗಳೂರಿನ ಸಮಾರಂಭಕ್ಕೆ ತೆರಳಿದರು.

ಈ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಸ್ ಎ ರಾಮದಾಸ್ ರವರೊಂದಿಗೆ  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ,ಬಿಜೆಪಿ ರಾಜ್ಯ ಕಾರ್ಯದರ್ಶಿ ಮಲ್ಲಪ್ಪಗೌಡ, ಬಿಜೆಪಿ ನಗರಾಧ್ಯಕ್ಷ ಡಾ ಮಂಜುನಾಥ್ ಹಾಗೂ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು. 

Related Articles

Leave a comment

Back to Top

© 2015 - 2017. All Rights Reserved.