ನಾಪತ್ತೆಯಾಗಿದ್ದ ನವವಿವಾಹಿತೆ ಶವವಾಗಿ ಪತ್ತೆ: ವಿಷಯ ತಿಳಿದ ಮಾವ ಆತ್ಮಹತ್ಯೆ

Crime, Kannada News, Regional, Top News No Comments on ನಾಪತ್ತೆಯಾಗಿದ್ದ ನವವಿವಾಹಿತೆ ಶವವಾಗಿ ಪತ್ತೆ: ವಿಷಯ ತಿಳಿದ ಮಾವ ಆತ್ಮಹತ್ಯೆ 70

ಮೈಸೂರು: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ನವವಿವಾಹಿತೆ ಇಂದು ಶವವಾಗಿ ಪತ್ತೆಯಾಗಿದ್ದು, ಸೊಸೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾವ ಕೂಡ ಆತ್ಮಹತ್ಯೆಗೆ ಶರಣಾಗಿವಂತಹ ಘಟನೆ ಮೈಸೂರಿನಲ್ಲಿ ನಡೆದಿದೆ.

24 ವರ್ಷದ ರುಕ್ಮಿಣಿ ಎಂಬಾಕೆಯೆ ಮೃತ ದುರ್ದೈವಿ. ಸೊಸೆ ಸಾವಿನಿಂದ ಮನನೊಂದ ಮಾವ ರಮೇಶ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 27ರಂದು ರುಕ್ಮಿಣಿ ಗಂಡ ಪುನೀತ್ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಮೂರು ತಿಂಗಳು ಹಿಂದಷ್ಟೆ ರುಕ್ಮಿಣಿ ಅವರನ್ನು ಶಾದನಹಳ್ಳಿಯ ಪುನೀತ್‍ಗೆ ಮದುವೆ ಮಾಡಿಕೊಡಲಾಗಿತ್ತು. ಇಂದು ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊರೂರಿನ ವರುಣಾ ನಾಲೆಯಲ್ಲಿ ರುಕ್ಮಿಣಿ ಅವರ ಶವ ಪತ್ತೆಯಾಗಿದೆ.

ಮಗ ಪುನೀತ್ ವರ್ತನೆಗೆ ಬೇಸತ್ತು ಸೊಸೆ ಮನೆ ಬಿಟ್ಟು ಹೋಗಿ ಈಗ ಶವವಾಗಿ ಪತ್ತೆಯಾಗಿದ್ದಾಳೆ. ಇದಕ್ಕೆ ಮನನೊಂದ ಮಾವ ರಮೇಶ್ ಕೂಡ ಶ್ರೀರಂಗಪಟ್ಟಣದ ಪಾಲಹಳ್ಳಿಯ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.