ವಿಶ್ವವಿದ್ಯಾನಿಲಯಗಲ್ಲಿ ರಾಜಕೀಯ, ಕೋಮುವಾದಕ್ಕೆ ಆಸ್ಪದ ನೀಡಬಾರದು: ಡಾ. ಎಚ್.ಸಿ ಮಹದೇವಪ್ಪ

BREAKING NEWS, Kannada News, Regional, Top News No Comments on ವಿಶ್ವವಿದ್ಯಾನಿಲಯಗಲ್ಲಿ ರಾಜಕೀಯ, ಕೋಮುವಾದಕ್ಕೆ ಆಸ್ಪದ ನೀಡಬಾರದು: ಡಾ. ಎಚ್.ಸಿ ಮಹದೇವಪ್ಪ 42

ಮೈಸೂರು: ವಿಶ್ವವಿದ್ಯಾನಿಲಯಗಲ್ಲಿ ರಾಜಕೀಯ ಮತ್ತು ಕೋಮುವಾದಕ್ಕೆ ಆಸ್ಪದ ನೀಡದೆ ದೇಶಕ್ಕೆ ಮಾದರಿಯಾಗುವಂತೆ ಬೆಳೆಯಬೇಕು ಹಾಗೂ ಸಂವಿಧಾನದ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಡಾ. ಎಚ್.ಸಿ ಮಹದೇವಪ್ಪ ಅವರು ಹೇಳಿದರು.

ನಗರದ ಮೈಸೂರು ವಿವಿ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ ಆಯೋಜಿಸಿದ್ದ ಕರ್ನಾಟಕದಲ್ಲಿ ಅಭಿವೃದ್ಧಿ ಆಡಳಿತ: ಒಂದು ವಿಶ್ಲೇಷಣೆ ವಿಷಯದ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಪತಿ, ರಾಷ್ಟ್ರಕವಿಗಳನ್ನು ಈ ವಿವಿ ನೀಡಿದೆ. ಇಲ್ಲಿ ಅನೇಕ ಸಾಮಾಜಿಕ, ಸೈದ್ಧಾಂತಿಕ, ಚಲನಾಶೀಲನ ಸಮಾಜದ ಸ್ಥಾಪನೆ, ಅಭಿವೃದ್ಧಿ ಮತ್ತು ಪ್ರಜಾಸತ್ತತೆ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿಗಳಾದ ಪ್ರೊ ದಯಾನಂದ ಮಾನೆ, ಡಾ ಕೆ ರಾಮೇಶ್ವರಪ್ಪ, ನಂಜುಂಡಯ್ಯ, ರಮೇಶ್, ಡಿ. ಆನಂದ್, ಮಹಮ್ಮದ್ ಸಲಾಮ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Related Articles

Leave a comment

Back to Top

© 2015 - 2017. All Rights Reserved.