ಆಪಾದನೆಗಳು ಸಾಬೀತಾಗದ ಹಿನ್ನಲೆ: ಯತೀಂದ್ರ ಸಿದ್ದರಾಮಯ್ಯರಿಗೆ ಕ್ಲೀನ್ ಚಿಟ್

Kannada News, Regional, Top News No Comments on ಆಪಾದನೆಗಳು ಸಾಬೀತಾಗದ ಹಿನ್ನಲೆ: ಯತೀಂದ್ರ ಸಿದ್ದರಾಮಯ್ಯರಿಗೆ ಕ್ಲೀನ್ ಚಿಟ್ 14

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ವಿರುದ್ಧ ದಾಖಲಾಗಿದ್ದ ದೂರಿನ ವಿಚಾರಣೆಯನ್ನು ಎಸಿಬಿ ತೆರವುಗೊಳಿಸಿದ್ದು, ದೂರಿನಲ್ಲಿ ಮಾಡಲಾಗಿರುವ ಆಪಾದನೆಗಳು ವಿಚಾರಣೆ ವೇಳೆ ಸಾಬೀತುಗೊಳ್ಳದ ಕಾರಣ ಕ್ಲೀನ್ ಚಿಟ್ ದೊರೆತಿದೆ.

ಏನಿದು ಪ್ರಕರಣ?

23.05.2016 ರಂದು ಸಿದ್ದರಾಮಯ್ಯನವರ ಪುತ್ರ ಯತೀಂದ್ರ `ಅವರು ನಡೆಸಿರುವ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ತ ಸುರಕ್ಷಾ ಯೋಜನೆ ಅಡಿಯಲ್ಲಿ ಡಯಾಗ್ನೋಸ್ಟಿಕ್ ಸರ್ವೀಸಸ್ ಅನ್ನು ಪ್ರಾರಂಭಿಸಿಲು ಟೆಂಡರ್‍ನ್ನು ನಿಯಮಬಾಹಿರವಾಗಿ ನೀಡಿರುತ್ತಾರೆಂದು ಆಪಾದಿಸಿ, ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರನ್ ಸಲ್ಲಿಸಿದ್ದ ದೂರನ್ನು ಎಸಿಬಿ ಗೆ ನೀಡಿದ್ದರು.

ಅರ್ಜಿಯ ವಿಚಾರಣೆಯಲ್ಲಿ ಭಾಸ್ಕರನ್ ಮಾಡಿರುವ ಆಪಾದನೆಗಳು ಸಾಬೀತಾಗದ ಕಾರಣ ಅವರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಗೊಳಿಸಲಾಗದೆ ಎಂದು ಎಸಿಬಿ ತಿಳಿಸಿದೆ.

ಇನ್ನು ಕ್ಲೀನ್ ಚಿಟ್ ನೀಡಿರುವುದಕ್ಕೆ ಪ್ರತಿಕ್ರಿಯೇಸಿರುವ ಭಾಸ್ಕರನ್ ಎಸಿಬಿ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಹೇಳಿಕೆಯನ್ನು ಪಡೆಯದೆ ಎಸಿಬಿ ಪ್ರಕರಣ ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.