ಫೋಬ್ಸ್ ಪಟ್ಟಿಯಲ್ಲಿ ಭಾರತದ ಐವರು ಮಹಿಳೆಯರಿಗೆ ಸ್ಥಾನ

International, Kannada News, National, Top News No Comments on ಫೋಬ್ಸ್ ಪಟ್ಟಿಯಲ್ಲಿ ಭಾರತದ ಐವರು ಮಹಿಳೆಯರಿಗೆ ಸ್ಥಾನ 7

ವಾಷಿಂಗ್ಟನ್: 2017ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಫೋಬ್ಸ್ ನಿಯತಕಾಲಿಕಯ ವಿಶ್ವದ ನೂರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಈ ಬಾರಿ ಭಾತರದ ಐವರು ಸ್ಥಾನ ಪಡೆದುಕೊಂಡಿದ್ದಾರೆ.

ನಟಿ ಪ್ರಿಯಾಂಕ ಚೋಪ್ರಾ, ಐಸಿಐಸಿಐ ಬ್ಯಾಂಕ್‌ನ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಾ ಕೊಚ್ಚರ್, ಕಿರಣ್ ಮಜುಮ್‌ದಾರ್ ಷಾ, ಎಚ್‌ಸಿಎಲ್ ಕಾರ್ಪೋರೇಷನ್ ಸಿಇಒ ರೋಶಿಣಿ ನದಾರ್ ಮಲ್ಹೋತ್ರಾ 57, ಹಿಂದೂಸ್ತಾನ್ ಟೈಮ್ಸ್ ಸಂಸ್ಥೆಯ ಮುಖ್ಯಸ್ಥೆ ಶೋಭಾನಾ ಭಾರ್ತಿಯ ಸ್ಥಾನ ಪಡೆದುಕೊಂಡಿದ್ದಾರೆ.                          

ಪ್ರಿಯಾಂಕ ಅವರು 97 ನೇ ಸ್ಥಾನ ಪಡೆದುಕೊಂಡಿದ್ದು, ಜರ್ಮನಿಯ ಚಾನ್ಸಲರ್ ಎಂಜೆಲಾ ಮಾರ್ಕೆಲ್ ಅವರು ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ಹಾಗೂ ಫೇಸ್‌ಬುಕ್, ಬಿಲ್ ಹಾಗೂ ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಮೆಲಿಂದಾ ಗೇಟ್ಸ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಫೇಸ್‌ಬುಕ್, ಬಿಲ್ ಹಾಗೂ ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಶೆರಿಲ್ ಸ್ಯಾಂಡ್‌ಬರ್ಗ್ 4ನೇ, ಜನರಲ್ ಮೋಟಾರ್ಸ್ ಕಂಪೆನಿಯ ಮೇರಿ ಟಿ ಬರ್ರಾ ಅವರು 5ನೇಯವರಾಗಿದ್ದಾರೆ.

ಐಸಿಐಸಿಐ ಬ್ಯಾಂಕ್‌ನ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಾ ಕೊಚ್ಚರ್ 32, ಔಷಧ ತಯಾರಿಕಾ ಕಂಪೆನಿ ಬಯೊಕಾನ್‌ನ ಸಂಸ್ಥಾಪಕಿ ಕಿರಣ್ ಮಜುಮ್‌ದಾರ್ ಷಾ 71, ಎಚ್‌ಸಿಎಲ್ ಕಾರ್ಪೋರೇಷನ್ ಸಿಇಒ ರೋಶಿಣಿ ನದಾರ್ ಮಲ್ಹೋತ್ರಾ 57, ಹಿಂದೂಸ್ತಾನ್ ಟೈಮ್ಸ್ ಸಂಸ್ಥೆಯ ಮುಖ್ಯಸ್ಥೆ ಶೋಭಾನಾ ಭಾಟೀಯ 92ನೇ ಸ್ಥಾನದಲ್ಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.