ಕನ್ನಡ ರಾಜೋತ್ಸವ ಆಚರಣೆಯಲ್ಲಿದ್ದ ಕನ್ನಡಿಗರಿಗೆ ಈಗ ಗೂಗಲ್ ಕೊಡುಗೆ: ಏನದು ಗೊತ್ತಾ..!

Featured, Kannada News, National, Regional, Top News No Comments on ಕನ್ನಡ ರಾಜೋತ್ಸವ ಆಚರಣೆಯಲ್ಲಿದ್ದ ಕನ್ನಡಿಗರಿಗೆ ಈಗ ಗೂಗಲ್ ಕೊಡುಗೆ: ಏನದು ಗೊತ್ತಾ..! 55

ವಿಶೇಷ: ಜಗತ್ತಿನ ಅತೀ ದೊಡ್ಡ ಸರ್ಚ್ ಎಂಜಿನ್ ಗೂಗಲ್ ನಕ್ಷೆಯಲ್ಲಿ ಸ್ಥಳಗಳ ಹೆಸರು ಇನ್ನು ಮುಂದೆ ಕನ್ನಡದಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೆ ಇಂಗ್ಲಿಷ್ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಸ್ಥಳಗಳ ಹೆಸರುಗಳು ಕಾಣಿಸಿಕೊಳ್ಳುತ್ತವೆ.

ಹೌದು, ಗೂಗಲ್ ನಕ್ಷೆಯಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಸ್ಥಳಗಳ ಹೆಸರು ಕನ್ನಡದಲ್ಲೇ ಕಾಣಿಸಿಕೊಳ್ಳಲಿದೆ. ಗೂಗಲ್ ನಕ್ಷೆಯಲ್ಲಿ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕನ್ನಡ ಗೂಗಲ್ ನಕ್ಷೆಯಲ್ಲಿ ಕಾಣಿಸಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಮೆಚ್ಚುಗೆಯನ್ನ ಸೂಚಿಸಿದ್ದು, ಗೂಗಲ್ ಸಂಸ್ಥೆಗೆ ಕನ್ನಡಿಗರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಭಾರತದಲ್ಲಿ ಹಲವು ಪ್ರಾದೇಶಿಕ ಭಾಷೆಗಳಿದ್ದು, ಇದರಲ್ಲಿ ಕೆಲವು ಭಾಷೆಗಳಿಗಷ್ಟೇ ಗೂಗಲ್ ಸಂಸ್ಥೆ ಅವಕಾಶವನ್ನು ನೀಡಿದೆ. ಕನ್ನಡ ರಾಜೋತ್ಸವ ಆಚರಣೆಯಲ್ಲಿದ್ದ ಕನ್ನಡಿಗರಿಗೆ ಈಗ ಗೂಗಲ್ ಕೊಡುಗೆಯಾಗಿ ನಕ್ಷೆಯಲ್ಲಿ ಕನ್ನಡವನ್ನು ಸೇರಿಸಿದೆ.

ಕನ್ನಡ ಭಾಷೆಯನ್ನು ಗೂಗಲ್ ನಕ್ಷೆಯಲ್ಲಿ ಅಳವಡಿಸಿರುವುದು ಅತ್ಯಗತ್ಯ. 7 ಕೋಟಿ ಕನ್ನಡಿಗರಿಗೂ ಇಂಗ್ಲಿಷ್ ಅರ್ಥವಾಗುವುದಿಲ್ಲ. ಗೂಗಲ್ ಕ್ರಮ ಅತ್ಯುತ್ತಮವಾಗಿದೆ ಎಂದು ಹಲವಾರು ತಮ್ಮ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ದೇಶದ ರಾಜಧಾನಿ ನವದೆಹಲಿಯಲ್ಲಿ ಹಿಂದಿ ಹಾಗೂ ಇಂಗ್ಲಿಷ್ ದ್ವಿಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತೆಲುಗು ಭಾಷೆಯಲ್ಲಿ, ತಮಿಳು ನಾಡು ಹಾಗೂ ಕೇರಳದಲ್ಲಿ ಕ್ರಮವಾಗಿ ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.