ಅಮೆರಿಕಾದಲ್ಲಿ ಮತ್ತೆ ಗುಂಡಿನ ದಾಳಿ: 27 ಮಂದಿ ಸಾವು

Crime, International, Kannada News No Comments on ಅಮೆರಿಕಾದಲ್ಲಿ ಮತ್ತೆ ಗುಂಡಿನ ದಾಳಿ: 27 ಮಂದಿ ಸಾವು 17

ಟಾಕ್ಸ್’ಸ್: ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು ಮೊರೆತ್ತಿದ್ದು, ಸೌತ್ ಟಾಕ್ಸ್’ಸ್’ನ ಚರ್ಚ್’ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಾರ್ವಜನಿಕರ ಮೇಲೆ ಅಪರಿಚಿತನೊಬ್ಬ ದಾಳಿ ನಡೆಸಿ 27 ಮಂದಿಯನ್ನು ಹತ್ಯೆಗೈದಿದ್ದಾನೆ.

ಸಥರ್’ಲ್ಯಾಂಡ್’ನ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ದಾಳಿ ನಡೆದಿದ್ದು, ಪ್ರಾರ್ಥನೆ ಸಲ್ಲಿಸುವ ವೇಳೆ ಕಪ್ಪು ವಸ್ತ್ರ ಧರಿಸಿದ್ದ ಅಪರಿಚಿತನೊಬ್ಬ ಈ ದಾಳಿ ನಡೆಸಿದ್ದಾನೆ. ಈ ವೇಳೆ 27 ಮಂದಿ ಸ್ಥಳದಲ್ಲೇ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಕೋರನನ್ನು ರಕ್ಷಣಾ ಸಿಬ್ಬಂದಿ ಹತ್ಯೆಗೈದಿದ್ದಾರೆ.

ಗುಂಡಿನ ದಾಳಿ ನಡೆಸಿದ ಅಪರಿಚಿತನ ಹೆಸರು ಡೇವಿಡ್ ಪಿ ಕೆಲ್ಲಿ ಎಂದು ಗುರುತಿಸಿರುವ ರಕ್ಷಣಾ ಸಿಬ್ಬಂದಿ 2010ರ ವರೆಗೆ ವಾಯುಸೇನೆಯ ಲಾಜಿಸ್ಟಿಕ್ಸ್ ವಿಭಾಗದಲ್ಲಿ ನೌಕರನಾಗಿ, ಕೆಲವು ಕಾಲ ನ್ಯೂ ಮೆಕ್ಸಿಕೊದಲ್ಲಿ ನೆಲೆಸಿದ್ದ ಎಂದು ತಿಳಿಸಿದ್ದಾರೆ. ಟಾಕ್ಸ್’ಸ್ನ ಇತಿಹಾಸದಲ್ಲಿ ಇದೊಂದು ಭೀಕರ ದಾಳಿ ಎಂದು ಅಲ್ಲಿನ ಗೌವರ್ನ’ರ್ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ 11.20ರ ಸುಮಾರಿನಲ್ಲಿ ಬ್ಯಾಪ್ಟಿ’ಸ್ಟ್ ಚರ್ಚ್’ ಆಗಮಿಸಿದ ಈತ ಎಆರ್-15 ಸೆಮಿಯಾಟೊಮಾಟಿಕ್ ಗನ್’ನಿಂದ ಏಕಾಏಕಿ ದಾಳಿ ನಡೆಸಿದ್ದಾನೆ.

Related Articles

Leave a comment

Back to Top

© 2015 - 2017. All Rights Reserved.