ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯ ಕಮಾನು ಜೋಡಣಾ ಕಾರ್ಯ ಪೂರ್ಣ

Kannada News, National, Top News No Comments on ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯ ಕಮಾನು ಜೋಡಣಾ ಕಾರ್ಯ ಪೂರ್ಣ 14

ಕೌರಿ: ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯ ಮುಖ್ಯ ಕಮಾನು ಜೋಡಣಾ ಕಾರ್ಯ ಸೋಮವಾರ ಪೂರ್ಣಗೊಂಡಿದೆ. ಜಮ್ಮು- ಕಾಶ್ಮೀರದ ರಿಯಾಸಿ ಜಿಲ್ಲೆಯ ಚೀನಾಬ್​ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಬೃಹತ್ ಸೇತುವೆ ಇದು.

ಉಧಮ್​ಪುರ್​, ಶ್ರೀನಗರ, ಬಾರಾಮುಲ್ಲಾ ರೈಲ್ವೆ ಯೋಜನೆಯ ಭಾಗವಾಗಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಸೇತುವೆಯ ಮುಖ್ಯಭಾಗವಾದ ಕಮಾನಿನ ಜೋಡಣೆ ಕಾರ್ಯವನ್ನು ಎರಡೂ ಕಡೆಗಳಿಂದಲೂ ಪ್ರಾರಂಭಿಸಲಾಗಿತ್ತು. ಈಗ ಕಮಾನಿನ ಜೋಡಣೆ ಕಾರ್ಯ ಪೂರ್ಣಗೊಂಡಿದೆ ಎಂದು ರೈಲ್ವೆ ಮಂಡಳಿಯ ಸದಸ್ಯ ಎಂ.ಕೆ. ಗುಪ್ತಾ ತಿಳಿಸಿದ್ದಾರೆ. ಮುಖ್ಯ ಕಮಾನಿನ ಜೋಡಣೆ ಕಾರ್ಯ ಪೂರ್ಣಗೊಂಡಿರುವುದರಿಂದ ಸೇತುವೆಯ ಎರಡೂ ಬದಿಗೆ ಭಾರವಾದ ವಸ್ತುಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಒಟ್ಟು 1250 ಕೋಟಿ ರೂ. ವೆಚ್ಚದಲ್ಲಿ 1.3 ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಕೊಂಕಣ ರೈಲ್ವೆಯ ಜತೆಗೆ ಕೈಜೋಡಿಸಿ AFCONS ಕಂಪನಿ ಸೇತುವೆ ನಿರ್ಮಿಸುತ್ತಿದೆ.

2019ರ ಮೇ ವೇಳೆಗೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಗುಪ್ತಾ ಮಾಹಿತಿ ನೀಡಿದ್ದಾರೆ. ಈ ಸೇತುವೆ ನೆಲಮಟ್ಟದಿಂದ 359 ಮೀ. ಎತ್ತರವಿದೆ. ಐತಿಹಾಸಿಕ ಐಫಲ್​ ಟವರ್​ಗಿಂತಲೂ 35 ಮೀಟರ್​ ಹೆಚ್ಚು ಎತ್ತರದಲ್ಲಿರುವುದು ವಿಶೇಷ. ಈ ಸೇತುವೆ ಕಾತ್ರಾ ಮತ್ತು ಬನಿಹಾಲ್​ ನಡುವೆ ಅತ್ಯಂತ ಪ್ರಮುಖ ಕೊಂಡಿಯಾಗಲಿದೆ.

Related Articles

Leave a comment

Back to Top

© 2015 - 2017. All Rights Reserved.