ಟ್ರಕ್ ಹರಿದು 9 ವಿದ್ಯಾರ್ಥಿಗಳು ದಾರುಣ ಸಾವು

Crime, Kannada News, National, Top News No Comments on ಟ್ರಕ್ ಹರಿದು 9 ವಿದ್ಯಾರ್ಥಿಗಳು ದಾರುಣ ಸಾವು 21

ಚಂಡೀಗಢ: ರಸ್ತೆ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಟ್ರಕ್ ಹರಿದು 9 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್‍ನ ಬತಿಂಡಾ ಜಿಲ್ಲೆಯಲ್ಲಿ ನಡೆದಿದೆ. ಇನ್ನು ಅಪಘಾತದ ವೇಳೆ 7ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರಗೆ ಸೇರಿಸಲಾಗಿದೆ.

ದಟ್ಟವಾದ ಮಂಜು ಕವಿದಿದ್ದ ಹಿನ್ನಲೆ ಟ್ರಕ್‍ನ ಚಾಲಕನಿಗೆ ರಸ್ತೆ ಬದಿಯಲ್ಲಿ ನಿಂತಿದ್ದ 16 ವಿದ್ಯಾರ್ಥಿಗಳು ಕಾಣಲಿಲ್ಲ. ಇದರಿಂದಾಗಿ ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹರಿಸಿದ್ದಾನೆ. ಪರಿಣಾಮ 9 ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಪಘಾತಕ್ಕೂ ಮುನ್ನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಹಾಗೂ ಮಿನಿ ಬಸ್ ನಡುವೆ ದಟ್ಟ ಮಂಜಿನ ಕಾರಣದಿಂದ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿತ್ತು. ಇದರಿಂದ ಬೇರೊಂದು ಬಸ್‍ಗೆ ಹೋಗಲು ಬಸ್‍ನಿಂದ ಕೆಳಗಿದ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಹಿಂದೆಯಿಂದ ಬಂದ ಟ್ರಕ್ ವಿದ್ಯಾರ್ಥಿಗಳ ಮೇಲೆ ಹರಿದಿದೆ.

Related Articles

Leave a comment

Back to Top

© 2015 - 2017. All Rights Reserved.