ಆಟೋ ಡ್ರೈವರ್ ಮಗ ಈಗ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಪ್ರತಿಭೆ

Kannada News, Regional, Sports No Comments on ಆಟೋ ಡ್ರೈವರ್ ಮಗ ಈಗ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಪ್ರತಿಭೆ 34

ಭಟ್ಕಳ: ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಟ್ಕಳದ ಪ್ರತಿಭೆ ನಾಗೇಂದ್ರ ಅಣ್ಣಪ್ಪ ನಾಯ್ಕ ಉತ್ತಮ ಸಾಧನೆ ತೋರಿ ಎರಡು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಅಕ್ಟೋಬರ್ 2017 ರಂದು ಕೇರಳದ ತಿರುವನಂತಪುರಂ ನಲ್ಲಿ ಜರುಗಿದ ರಾಷ್ಟೀಯ ಮಟ್ಟದ ಜ್ಯೂನಿಯರ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಹೊಸ ದಾಖಲೆಯೊಂದಿಗೆ ಮೊದಲ ಸ್ಥಾನ ಗಳಿಸಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ.

ನಾಗೇಂದ್ರ, ಭಟ್ಕಳದ ಬೆಳ್ಕೆ ನಿವಾಸಿಗಳಾದ ಶ್ರೀ ಅಣ್ಣಪ್ಪ ನಾಯ್ಕ ಹಾಗೂ ಶಾಂತಿ ನಾಯ್ಕ ದಂಪತಿಯ ಪುತ್ರರಾಗಿದ್ದಾರೆ. ಅವರ ತಂದೆ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಇವರದು ಕೃಷಿಕ ಕುಟುಂಬವಾಗಿದೆ. ನಾಗೇಂದ್ರರವರು  ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.

ಈಗ ಅವರು ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆಯುವ ಶಾಲಾ ಮಟ್ಟದ ರಾಷ್ಠೀಯ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿದ್ದು, ಅವರು ಅಲ್ಲಿಯೂ ಕೂಡ ಉತ್ತಮ ಸಾಧನೆಗೈದು, ಹೊಸ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಲಿ ಎಂದು ಶಾಲೆಯ ಮುಖ್ಯಸ್ಥರು ಹಾಗೂ ಪೋಷಕರು  ಹಾರೈಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.