ಪೊಲೀಸ್ ಪೇದೆ ಮೇಲೆ ಹಲ್ಲೆಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

Crime, Kannada News, Regional, Top News No Comments on ಪೊಲೀಸ್ ಪೇದೆ ಮೇಲೆ ಹಲ್ಲೆಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ 9

ಮಂಗಳೂರು: ವಿಚಾರಣೆಗೆಂದು ಜೈಲಿನಿಂದ ಕೋರ್ಟಿಗೆ ಕರೆತಂದಿದ್ದ ಕೈದಿಯೊಬ್ಬ ಪೊಲೀಸ್ ಪೇದೆ ಮೇಲೆ ಹಲ್ಲೆಮಾಡಿ ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿಯಾಗಿದ್ದ ನುಮಾನ್ ಎಂಬ ಆರೋಪಿ ತಪ್ಪಿಸಿಕೊಳ್ಳಲು ಉತ್ನಸಿದ್ದಾನೆ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜೈಲಿನಲ್ಲಿದ್ದ ನುಮಾನ್ ನನ್ನು ಕುರಿಯಾಕೋಸ್ ಎಂಬ ಮೀಸಲು ಪಡೆಯ ಪೇದೆ ಕೋರ್ಟ್ ಗೆ ಹಾಜರುಪಡಿಸಲು ಕರೆದುಕೊಂಡು ಬಂದಿದ್ದರು. ಕೋರ್ಟ್ ನಲ್ಲಿ ವಿಚಾರಣೆ ಮುಗಿದ ನಂತರ ಜೈಲಿಗೆ ಹಿಂದಿರುಗುವ ಸಮಯದಲ್ಲಿ ಆರೋಪಿ ತನಗೆ ಹಾಕಿದ್ದ ಕೈ ಕೋಳಗಳಿಂದಲೇ ಪೇದೆಯ ಕುತ್ತಿಗೆ ಬಿಗಿದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ಸಮಯದಲ್ಲಿ ಪೊಲೀಸ್ ಹಾಗೂ ಪೇದೆಯ ನಡುವಿನ ಜಟಾಪಟಿ ಏರ್ಪಟ್ಟಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸ್ ಪೇದೆಯ ಸಹಾಯಕ್ಕೆ ಆಗಮಿಸಿದ್ದಾರೆ. ಬಳಿಕ ಪೊಲೀಸರು ಕೈದಿಯನ್ನು ಜೀಪಿನ ಮೂಲಕ ಜೈಲಿಗೆ ಕರೆದ್ಯೊಯ್ದಿದ್ದು, ಘಟನೆ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಕೈದಿ ನುಮಾನ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.