ಒಂದೇ ಪಂದ್ಯದಲ್ಲಿ 10 ವಿಕೆಟ್ ಕಿತ್ತ ಈ ಭೂಪ

Kannada News, Sports No Comments on ಒಂದೇ ಪಂದ್ಯದಲ್ಲಿ 10 ವಿಕೆಟ್ ಕಿತ್ತ ಈ ಭೂಪ 12

ಜೈಪುರ: ರಾಜಸ್ಥಾನ ದೇಶೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಯುವ ಬೌಲರ್ ಒಬ್ಬ ಒಂದು ರನ್ ನೀಡದೆ ಇನ್ನಿಂಗ್ಸ್ ಎಲ್ಲಾ ಹತ್ತು ವಿಕೆಟ್‍ಗಳನ್ನು ಪಡೆದಿರುವ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.

ಜೈಪುರದ ಆಕಾಶ್ ಚೌಧರಿ(15) ಈ ವಿಶೇಷ ಸಾಧನೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ತಾತನ ನೆನಪಿಗಾಗಿ ಆಯೋಜಿಸಿದ್ದ ಭಾವೇಶ್ ಸಿಂಗ್ ಸ್ಮಾರಕ ಟೂರ್ನಿಯಲ್ಲಿ ಆಕಾಶ್ ಅಪರೂಪದ ಸಾಧನೆ ಮಾಡಿದ್ದಾರೆ.

ದೀಕ್ಷಾ ಕ್ರಿಕೆಟ್ ಆಕಾಡೆಮಿ ತಂಡದ ಎಡಗೈ ವೇಗದ ಬೌಲರ್ ಆಗಿರುವ ಆಕಾಶ್ ತಮ್ಮ ಎದುರಾಳಿ ಪರ್ಲ್ ಅಕಾಡೆಮಿ ತಂಡ ಎಲ್ಲಾ ವಿಕೆಟ್‍ಗಳನ್ನು ಉಳಿಸಿದ್ದಾರೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪರ್ಲ್ ಅಕಾಡೆಮಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ನಿಗಧಿತ 20 ಓವರ್‍ಗಳಲ್ಲಿ ದೀಕ್ಷಾ ತಂಡವನ್ನು 156 ರನ್‍ಗಳಿಗೆ ಕಟ್ಟಿ ಹಾಕಲು ಸಫಲವಾಯಿತು.

ದೀಕ್ಷಾ ತಂಡದ ಬೃಹತ್ ಮೊತ್ತವನ್ನು ಬೆನ್ನತ್ತಿದ ಪರ್ಲ್ ಅಕಾಡೆಮಿ ತಂಡ 36 ರನ್ ಗಳಿಸಿದ ಸಂದರ್ಭದಲ್ಲಿ ಆಕಾಶ್ ಚೌಧರಿ ಬೌಲಿಂಗ್‍ನಲ್ಲಿ ಸರ್ವ ಪತನವಾಯಿತು. ಆಕಾಶ್ ಮೊದಲ ಓವರ್‍ನಲ್ಲಿ ಎರಡು ವಿಕೆಟ್ ಉಳಿಸಿದರೆ, ಎರಡು ಮತ್ತು ಮೂರನೇ ಓವರ್‍ನಲ್ಲಿ ತಲಾ ಎರಡು ವಿಕೆಟ್ ಪಡೆದರು. ಕೊನೆಯ ಓವರ್‍ನಲ್ಲಿ ಹ್ಯಾಟ್ರಿಕ್ ಒಳಗೊಂಡಂತೆ ನಾಲ್ಕು ವಿಕೆಟ್ ಕಬಳಿಸಿದರು. ಆಕಾಶ್ ತಮ್ಮ ನಾಲ್ಕು ಓವರ್ ಗಳಲ್ಲಿ ಒಂದು ರನ್ ಅನ್ನು ಎದುರುರಾಳಿ ತಂಡಕ್ಕೆ ಬಿಟ್ಟುಕೊಡದಿರುವುದು ಗಮನರ್ಹ ಸಂಗತಿಯಾಗಿದೆ.

Related Articles

Leave a comment

Back to Top

© 2015 - 2017. All Rights Reserved.