ಟಿಪ್ಪು ಸರಳ ಜೀವಿ: ಗೀತಾ ಮೋಹನ್ ಕುಮಾರಿ

BREAKING NEWS, Kannada News, Regional, Top News No Comments on ಟಿಪ್ಪು ಸರಳ ಜೀವಿ: ಗೀತಾ ಮೋಹನ್ ಕುಮಾರಿ 42

ಚಾಮರಾಜನಗರ: ಟಿಪ್ಪು ರಾಷ್ಟ್ರ ಪ್ರೇಮಿಯ ಜೊತೆ ಸರಳ ಜೀವಿ ಎಂದು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಹೇಳಿದರು.

ನಗರದ ಜಿಲ್ಲಾಡಳಿತಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮವನ್ನ ಅವರು ಉದ್ಘಾಟಿಸಿ ಮಾತನಾಡಿದರು. ಟಿಪ್ಪು ರೇಷ್ಮೆ , ಶಿಕ್ಷಣ, ಕೃಷಿಗೆ ಹೆಚ್ಚು ಒತ್ತು ಕೊಟ್ಟ ಹೋರಾಟಗಾರ ಎಂದರು. ಪರಮ ದರ್ಮ ಸಹಿಷ್ಣುವಾದ ಟಿಪ್ಪು ನಂಜನಗೂಡು, ಶ್ರೀರಂಗಪಟ್ಟಣ ಮೇಲುಕೊಟೆಗೆ ಭೂಮಿ ದಾನ ಮಾಡಿರುವುದು ಇತಿಹಾಸದಲ್ಲಿ ದಾಖಲೆ ಸಿಗುತ್ತದೆ.

ಶೃಂಗೇರಿಗೆ ಮರಾಠರು ದಾಳಿ ಇಟ್ಟಾಗ ಅದಕ್ಕೆ ನೆರವು ನೀಡಿರುವುದು ವ್ಯವಹಾರದಲ್ಲಿರುವ ದಾಖಲೆ ಇದೆ. ಎಂದರು. 1784 ರಲ್ಲಿ ರೈತರಿಗಾಗಿ ವಾಣಿಜ್ಯ ನಿಗಮ ಸ್ಥಾಪಿಸಿದ ಕೀರ್ತಿ ಟಿಪ್ಪುಗೆ ಸಲ್ಲಬೇಕು ಎಂದರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಹಜರತ್ ಟಿಪ್ಪು ಸುಲ್ತಾನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ನಗರಸಭೆಯ ಅಧ್ಯಕ್ಷರಾದ ಶೋಭ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾದಿಕಾರಿ ರಾಮು, ಪೊಲೀಸ್ ವರೀಷ್ಟಾದಿಕಾರಿ ದರ್ಮೇಂದ್ರ ಕುಮಾರ್ ಮೀನಾ, ಸಿಇಓ ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಇದಕ್ಕೂ ಮೊದಲು ವೇದಿಕೆಯಲ್ಲಿ ಬೆಂಗಳೂರಿನ ಜನಾಬ್ ಜಿಕ್ರುಲ್ಲಾ ಷಾ ದರ್ವೇಷ್ ಹಾಗೂ ಸೈಯದ್ ಕಲಾಂವ್ಹಿದಾ ಷಾ ಸೂಫಿ ತಂಡದವರಿಂದ ಕವಾಲಿ ಕಾರ್ಯಕ್ರಮ ನಡೆಸಿಕೊಟ್ಟರು.

Related Articles

Leave a comment

Back to Top

© 2015 - 2017. All Rights Reserved.