ಮುಸ್ಲಿಮರನ್ನು ಓಲೈಸಲು, ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುತ್ತಿಲ್ಲ: ಹೆಚ್.ಸಿ ಮಹದೇವಪ್ಪ

BREAKING NEWS, Kannada News, Regional, Top News No Comments on ಮುಸ್ಲಿಮರನ್ನು ಓಲೈಸಲು, ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುತ್ತಿಲ್ಲ: ಹೆಚ್.ಸಿ ಮಹದೇವಪ್ಪ 33

ಮೈಸೂರು: ಮುಸ್ಲಿಮರನ್ನು ಓಲೈಸಲು ಹಾಗೂ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಸಿ ಮಹದೇವಪ್ಪ ಅವರು ಹೇಳಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಟಿಪ್ಪು ಜಯಂತೋತ್ಸವ ಸಮಿತಿ ವತಿಯಿಂದ ನಡೆದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್‍ರವರ 268 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಟಿಪ್ಪು ಸುಲ್ತಾನ್ ಇಬ್ಬರು ಸಹ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ಹಾಗೂ ಹೊಸಹಾತು ನೀತಿ ವಿರುದ್ಧ ಹೋರಾಡಿ ಸೋಲಿಸಿದ ಏಕೈಕ ದೊರೆ. ಯಾವುದೇ ಧರ್ಮ ಮೇಲಲ್ಲ ಕೀಳಲ್ಲ. ಧರ್ಮದ ಪ್ರಮುಖ ನೀತಿಯೇ ದಯೆ. ಅವರ ಧರ್ಮ ಅವರಿಗೆ ಇವರ ಧರ್ಮ ಇವರಿಗೆ. ಎಲ್ಲರೂ ಸಮಾನರು, ಸಹೋದರರು ಎಂಬ ಸಿದ್ಧಾಂತವನ್ನಿಟ್ಟುಕೊಂಡು ರಾಜ್ಯವನ್ನು ಮುನ್ನಡೆಸಿದವರು ಟಿಪ್ಪು ಸುಲ್ತಾನ್ ಅವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಲ್ ಇಂಡಿಯನ್ನ ಮಿಲ್ಲಿ ಕೌನ್ಸಿಲ್ ಅಧ್ಯಕ್ಷರಾದ ಮೌಲಾನ ಜಕಾವುಲ್ಲಾ, ಶಾಸಕರಾದ ವಾಸು ಎಂ.ಕೆ ಸೋಮಶೇಖರ್, ಬೆಂಗಳೂರಿನ ವಿ.ವಿ. ಪುರಂ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ|| ಬೂದನೂರು ಪುಟ್ಟಸ್ವಾಮಿ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಜೆ. ರವಿಕುಮಾರ್, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾಧಿಕಾರಿಗಳಾದ ಡಿ. ರಂದೀಪ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.