ಸಿಎಂ‌ ಚಿಂತೆ‌ ಹೆಚ್ಚಿಸಿದೆಯೇ ಚಾಮುಂಡೇಶ್ವರಿ ಚುನಾವಣೆ..? ಕುಮಾರ ಪರ್ವದ ಜಿಟಿಡಿ‌ ಬಲ ಪ್ರದರ್ಶನಕ್ಕೆ ಹೆದರಿದ್ರ ಸಿದ್ದರಾಮಯ್ಯ..!

BREAKING NEWS, Kannada News, Regional No Comments on ಸಿಎಂ‌ ಚಿಂತೆ‌ ಹೆಚ್ಚಿಸಿದೆಯೇ ಚಾಮುಂಡೇಶ್ವರಿ ಚುನಾವಣೆ..? ಕುಮಾರ ಪರ್ವದ ಜಿಟಿಡಿ‌ ಬಲ ಪ್ರದರ್ಶನಕ್ಕೆ ಹೆದರಿದ್ರ ಸಿದ್ದರಾಮಯ್ಯ..! 523

ಬೆಂಗಳೂರು: ರಾಜ್ಯ ರಾಜಕರಣದಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳು ಒಂದೊಂದಾಗಿ ರಾಜ್ಯದ್ಯಾಂತ ರ್ಯಾಲಿ ಪ್ರಚಾರಕ್ಕೆ ದುಮ್ಮುಕುತ್ತಿವೆ. ಆದರೆ ಇನ್ನು ಏನು ಮಾಡದೆ ಸುಮ್ಮನಿರುವ ಕಾಂಗ್ರೆಸ್ ಗೆ ಎಡ ಪಕ್ಷಗಳ ಯ್ರಾಲಿಯ ಬಿಸಿ ತಲೆನೋವಾಗಿ ಪರಿಣಮಿಸಿದೆ.

ಆದರೆ ಬಿಜೆಪಿಯವರ ಕರ್ನಾಟಕ ಪರಿವರ್ತನಾ ಸಮಾವೇಶಕ್ಕಿಂತ ಜೆಡಿಎಸ್‌ನವರ ‘ಕುಮಾರಪರ್ವ’ ಯಾತ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿದ್ದೆಗೆಡಿಸಿದೆ ಎಂದರೆ ಸುಳ್ಳಲ್ಲ. ಏಕೆಂದರೆ ತಮ್ಮ ತವರು ಜಿಲ್ಲೆಯಿಂದ ಆರಂಭಗೊಂಡ ಜೆಡಿಎಸ್ ಯಾತ್ರೆಯ ಇಂಚಿಂಚು ಮಾಹಿತಿಯನ್ನೂ ಸಿಎಂ ಗುಪ್ತಚರ ಇಲಾಖೆಯಿಂದ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ.

ಮೊನ್ನ ಮೊನ್ನೆಯಷ್ಟೇ ‘ಈ ವಿಕಾಸಯಾತ್ರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಮಾವೇಶದ ಮೂಲಕ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದರು. ಈ ವೇಳೆ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರು. ಬೈಕ್ ಗಳ ಮೂಲಕ ಸಾವಿರಾರು ಜನ ವಿಕಾಸಯಾತ್ರೆ ಬಸ್ ನ ಜೊತೆ ಜೊತೆಗೆ ಬಂದು ಜೆಡಿಎಸ್ ನ ಬೃಹತ್ ಸಮಾವೇಶಕ್ಕೆ ಬಲ ತುಂಬಿದ್ದರು. ಈ ಬಗ್ಗೆ ಗುಪ್ತಚರ ಇಲಾಖೆಯಿಂದ ಸಿಎಂ ಅವರು ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

2018ರಲ್ಲಿ ನಡೆಯು ಚುನಾವಣೆಯಲ್ಲಿ ಜೆಡಿಎಸ್ ಗೆ ದೊಡ್ಡ ಪೆಟ್ಟು ನೀಡುತ್ತೇನೆಂಬ ಹುಮ್ಮಸ್ಸಿನಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಸಮಾವೇಶದ ಬಗ್ಗೆ ಇಂಚಿಂಚೂ ಮಾಹಿತಿ ಪಡೆದುಕೊಂಡಿದ್ದಾರಂತೆ. 

ಸಮಾವೇಶಕ್ಕೆ ಎಷ್ಟು ಬಸ್ ಬಂದಿದ್ದವು..? ಎಷ್ಟು ಬೈಕ್ ಬಂದಿದ್ದವು. ? ಯಾವ ಯಾವ ಸ್ತಯಳೀಯ ನಾಯಕರುಗಳು ಇದ್ದರು..? ಜನರನ್ನು ಕರೆತರುವ ಜವಾಬ್ದಾರಿ ಯಾರಿಗೆ ನೀಡಿದ್ದರು..? ಈ ಎಲ್ಲ ವಿಚಾರಗಳ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಈ‌ ಮೊದಲು ತಿಳಿದು‌ ಬಂದ ಮಾಹಿತಿಗಳ ಪ್ರಕಾರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಏರ್ಪಡಲಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯೋಚಿಸುವಂತೆ ಮಾಡಿದೆ. ಮಾಜಿ ಆಪ್ತರಾದ ವಿ ಶ್ರೀನಿವಾಸ ಪ್ರಸಾದ್ ಹಾಗೂ ಹೆಚ್ ವಿಶ್ವನಾಥ್ ಈಗಾಗಲೇ ಸಿಎಂ‌ ವಿರುದ್ಧ ತೊಡೆ ತಟ್ಟಿ ಸಿದ್ಧರಾಗಿದ್ದು, ಪ್ರಸಾದ್ ಬಿಜೆಪಿಯಲ್ಲಿದ್ದೂ ಜಿ ಟಿ ದೇವೇಗೌಡರಿಗೆ ಪರೋಕ್ಷ ಬೆಂಬಲ ನೀಡುವ ಸಾಧ್ಯತೆಯ ಕುರಿತು ಮಾತುಗಳು‌ ಕೇಳಿಬರುತ್ತಿವೆ. ಜಿ ಟಿ‌ ದೇವೇಗೌಡರೆದುರು ಸೋತು‌ ರಾಜಕೀಯ ಭವಿಷ್ಯ ಕೊನೆಗೊಳಿಸುವುದಕ್ಕಿಂತ, ಚಾಮುಂಡೇಶ್ವರಿ ಕ್ಷೇತ್ರದೊಡನೆ ಕಡಿಮೆ ಸ್ಪರ್ಧೆ ಏರ್ಪಡುವ ಕ್ಷೇತ್ರದಲ್ಲೂ ಸ್ಪರ್ಧಿಸಲು ಸಿಎಂ ಚಿಂತಿಸಿದ್ದಾರೆ ಎನ್ನಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.