ಟಿಪ್ಪು ಜಯಂತಿಗೆ ಶುಭ ಕೋರಿದ ಬಿಜೆಪಿ ಶಾಸಕ: ಪಕ್ಷದ ಇಬ್ಬಗೆಯ ನೀತಿಗೆ ಸ್ಥಳಿಯರ ಆಕ್ರೋಶ

BREAKING NEWS, Kannada News, Regional, Top News No Comments on ಟಿಪ್ಪು ಜಯಂತಿಗೆ ಶುಭ ಕೋರಿದ ಬಿಜೆಪಿ ಶಾಸಕ: ಪಕ್ಷದ ಇಬ್ಬಗೆಯ ನೀತಿಗೆ ಸ್ಥಳಿಯರ ಆಕ್ರೋಶ 13

ಬೆಂಗಳೂರು: ಟಿಪ್ಪು ಜಯಂತಿ ಹಿನ್ನೆಲೆ ಬಿಜೆಪಿ ನಾಯಕರು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇಲ್ಲೊಬ್ಬ ಬಿಜೆಪಿ ಶಾಸಕ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದಾರೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ , ಟಿಪ್ಪು ಜಯಂತಿಗೆ ಶುಭ ಕೋರಿದ ಫ್ಲೆಕ್ಸ್’ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಟಿಪ್ಪು ಜಯಂತಿ ಶುಭ ಕೋರಿದ ಸತೀಶ್ ರೆಡ್ಡಿ ಭಾವಚಿತ್ರ ಒಳಗೊಂಡ ಫ್ಲೆಕ್ಸ್​ಗಳು ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ರಸ್ತೆಗಳಲ್ಲಿ ರಾರಾಜಿಸುತ್ತಿದೆ. ಬಿಜೆಪಿ ದ್ವಿಮುಖ ನೀತಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೇಸಿರುವ ಸತೀಶ್ ರೆಡ್ಡಿ ನನಗೆ ಗೊತ್ತಿಲ್ಲದೇ, ನನ್ನ ಗಮನಕ್ಕೆ ಬಾರದೇ ಯಾರೋ ಫ್ಲೆಕ್ಸ್ ಹಾಕಿದ್ದಾರೆ. ನನ್ನ ಪಕ್ಷ ನಿರ್ಧಾರ ನನ್ನ ನಿರ್ಧಾರ. ಬಿಜೆಪಿ ಟಿಪ್ಪು ಜಯಂತಿ ವಿರೋಧಿಸಿದೆ, ನಾನು ಕೂಡಾ ವಿರೋಧಿಸುತ್ತೇನೆ. ಅದನ್ನು ತೆರವು ಮಾಡಿಸಲು ಪೊಲೀಸರಿಗೆ ಹೇಳಿದ್ದೇನೆ, ಎಂದು ಸ್ಪಷ್ಟನೆ ನೀಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.