ಮಾಜಿ ಕ್ರಿಕೆಟರ್ ಎ.ಜಿ ಮಿಲ್ಕಾಸಿಂಗ್ ನಿಧನ

Kannada News, Sports No Comments on ಮಾಜಿ ಕ್ರಿಕೆಟರ್ ಎ.ಜಿ ಮಿಲ್ಕಾಸಿಂಗ್ ನಿಧನ 20

ಚೆನ್ನೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಎ.ಜಿ ಮಿಲ್ಕಾಸಿಂಗ್ (75) ನಿನ್ನೆ ನಿಧನರಾಗಿದ್ದಾರೆ. ಹೃದಯಾಘಾತದಿಂದ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಅವರ ಕುಟುಂಬಿಕರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.

1960ರ ದಶಕದಲ್ಲಿ ಟೀಂ ಇಂಡಿಯಾದಲ್ಲಿ ನಾಲ್ಕು ಟೆಸ್ಟ್ ಮ್ಯಾಚ್‌ಗಳನ್ನು ಮಿಲ್ಕಾ ಸಿಂಗ್ ಆಡಿದ್ದಾರೆ. ಅವರ ಸೋದರ ಸಂಬಂಧಿ ಕೃಪಾಲ್ ಸಿಂಗ್ ಸಹ 14 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸೋದರ ಸಂಬಂಧಿಗಳಿಬ್ಬರೂ ಜತೆಯಾಗಿ 1961-62ರಲ್ಲಿ ಇಂಗ್ಲೆಂಡ್ ಮೇಲೆ ಒಂದು ಟೆಸ್ಟ್ ಮ್ಯಾಚ್ ಆಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.