ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಕೆ

Kannada News, Regional, Top News No Comments on ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಕೆ 31

ಮೈಸೂರು: 62 ನೇ ಕನ್ನಡ ರಾಜ್ಯೋತ್ಸವ ದ ಸವಿನೆನಪಿನಲ್ಲಿ ಅರಸು ಜಾಗ್ರತಿ ಅಕಾಡೆಮಿ ಮತ್ತು ಅರಸು ಪತ್ರಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧನೆ ಸಾಧಕರಿಗೆ “ಧ್ವನಿ ಕೊಟ್ಟ ಧಣಿ” ಕನ್ನಡ ಹೋರಾಟಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಯ್ತು.

ಕರ್ನಾಟಕ ಸೇನಾಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸಮಾಜ ಕಲ್ಯಾಣಕ್ಕಾಗಿ ಪ್ರಭಾ ಅರಸ್, ವೈಜ್ಞಾನಿಕ ವಾಸ್ತು ಸತೀಶ್ ಚೌಹಾನ್, ಖ್ಯಾತ ಅಂಕಣಕಾರರು ಲಕ್ಷ್ಮೀ ಕಾಂತರಾಜೇಅರಸ್, ದಲಿತ ಮುಖಂಡರಾದ ಎಡತೊರೆ ನಿಂಗರಾಜು, ಸುಗಮ ಸಂಗೀತದ ಸುಮಾಅರಸ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯ್ತು.

ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಹೆಚ್ ಕಾಂತರಾಜ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಹೆಚ್.ಎ ವೆಂಕಟೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಧ್ಯಾ ಸುರಕ್ಷ ಟ್ರಸ್ಟ್ ನ ಅಧ್ಯಕ್ಷರು ನಟರಾಜ್ ಜೋಯ್ಸ್, ವೈ ಎನ್. ಸಿದ್ದೇಗೌಡ, ಹಾಗೂ ಅರಸು ಜಾಗ್ರತಿ ಅಕಾಡೆಮಿಯ ಗೌರವಾಧ್ಯಕ್ಷ ಡಾ. ಎಂಜಿಆರ್ ಅರಸ್ ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.