ಕರ್ನಾಟಕ-ದೆಹಲಿ ರಣಜಿ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯ

Kannada News, Sports No Comments on ಕರ್ನಾಟಕ-ದೆಹಲಿ ರಣಜಿ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯ 14

ಆಲೂರು: ಕರ್ನಾಟಕ ಹಾಗೂ ದೆಹಲಿ ನಡುವಿನ ರಣಜಿ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯ ಕಂಡಿದೆ. ಸತತ ಮೂರು ಗೆಲುವು ಕಂಡಿದ್ದ ವಿನಯ್ ಕುಮಾರ್ ಪಡೆಗೆ ಪ್ರಸಕ್ತ ಸಾಲಿನ ಮೊದಲ ಡ್ರಾ ಇದು.

ಮೊದಲ ಇನಿಂಗ್ಸ್’ನಲ್ಲಿ ಮಯಾಂಕ್ ಅಗರ್’ವಾಲ್(176) ಹಾಗೂ ಸ್ಟುವರ್ಟ್ ಬಿನ್ನಿ(118) ಆಕರ್ಷಕ ಶತಕಗಳ ನೆರವಿನಿಂದ 649ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಡೆಲ್ಲಿ, ಅನುಭವಿ ಆಟಗಾರ ಗೌತಮ್ ಗಂಭೀರ್(144) ಸಮಯೋಚಿತ ಶತಕದ ನೆರವಿನಿಂದ  301 ರನ್ ಬಾರಿಸಿ ಸರ್ವಪತನ ಕಂಡಿತು. ದ್ವಿತಿಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ 3 ವಿಕೆಟ್ ಕಳೆದುಕೊಂಡು 235 ರನ್ ಬಾರಿಸಿತು. ರಣಜಿ ಟ್ರೋಫಿಯಲ್ಲಿ ಪದೇಪದೇ ವಿಫಲವಾಗುತ್ತಿದ್ದ ಕೆ.ಎಲ್ ರಾಹುಲ್ 92 ರನ್ ಬಾರಿಸಿದರೆ, ಸಮರ್ಥ್ 47 ರನ್ ಬಾರಿಸಿ ಔಟ್ ಆದರು.

‘ಎ’ ಗುಂಪಿನಲ್ಲಿ 3 ಗೆಲುವು 1 ಡ್ರಾನೊಂದಿಗೆ 23 ಅಂಕ ಕಲೆಹಾಕಿರುವ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, 2 ಗೆಲುವು 2 ಡ್ರಾನೊಂದಿಗೆ 17 ಅಂಕ ಸಂಪಾದಿಸಿರುವ ದೆಹಲಿ 2ನೇ ಸ್ಥಾನದಲ್ಲಿ ಭದ್ರವಾಗಿದೆ.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ : 649-10 & 235-3

ದೆಹಲಿ : 301-10

Related Articles

Leave a comment

Back to Top

© 2015 - 2017. All Rights Reserved.