ಚಾಮರಾಜ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ;‌ ರಂಗಪ್ಪ ಬದಲಿಗೆ ಹರೀಶ್ ಗೌಡಗೆ ಟಿಕೆಟ್ ಗೆ ಮನವಿ

BREAKING NEWS, Kannada News, Regional, Top News No Comments on ಚಾಮರಾಜ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ;‌ ರಂಗಪ್ಪ ಬದಲಿಗೆ ಹರೀಶ್ ಗೌಡಗೆ ಟಿಕೆಟ್ ಗೆ ಮನವಿ 842

ಮೈಸೂರು: ಮೈಸೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಚಾಮರಾಜ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚಾಮರಾಜ ಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ. ಕೆ ಎಸ್ ರಂಗಪ್ಪನವರ ಬದಲಿಗೆ ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಗಳು‌ ಆರಂಭವಾಗಿವೆ.

ಕ್ಷೇತ್ರದ ಕಾರ್ಯಕರ್ತರು ಮೈಸೂರು ಜೆಡಿಎಸ್ ಪ್ರಭಾವಿ ಮುಖಂಡರಾದ ಜಿ‌ ಟಿ ದೇವೇಗೌಡ ಸೇರಿದಂತೆ ವಿವಿಧ ನಾಯಕರಿಗೆ ಈಗಾಗಲೇ 10 ವರ್ಷಗಳಿಗೂ ಹೆಚ್ಚು ಕಾಲ ಪಕ್ಷ‌ ಸಂಘಟನೆಗೆ ದುಡಿದಿರುವ ಹರೀಶ್ ಗೌಡರಿಗೆ ಪಕ್ಷದ ಟಿಕೆಟ್ ಕೊಡಿಸಬೇಕು ಎಂಬುದಾಗಿ ಒತ್ತಾಯಿಸತೊಡಗಿದ್ದಾರೆ. ಮುಖಂಡರುಗಳು ಕಾರ್ಯಕರ್ತರೊಡನೆ ಮಾತುಕತೆಗೆ ತೊಡಗಿದ್ದಾರೆ ಎನ್ನಲಾಗಿದೆ. ಹರೀಶ್ ಗೌಡರಿಗೆ ಟಿಕೆಟ್ ಕೊಡದಿದ್ದರೆ ತಾವ್ಯಾರೂ ಪಕ್ಷಕ್ಕೆ ಕೆಲಸ ಮಾಡುವುದಿಲ್ಲ ಎಂಬುದಾಗಿ ಕಾರ್ಯಕರ್ತರು ಹೇಳಿದ್ದಾರೆ ಎನ್ನಲಾಗಿದೆ.

ಪಕ್ಷಕ್ಕೆ ನಿಷ್ಠೆಯಿಂದ ದುಡಿದೂ‌ ಟಿಕೆಟ್ ದೊರಕದಿದ್ದರೆ ಚಾಮರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹರೀಶ್ ಗೌಡರು ಆಪ್ತರೊಡನೆ ಹೇಳಿಕೊಂಡಿದ್ದಾರೆ ಎಂಬುದಾಗಿ ಬಲ್ಲ ಮೂಲಗಳು ‘ನ್ಯೂಸ್ ನಿರಂತರ’ ಕ್ಕೆ ಮಾಹಿತಿ‌ ನೀಡಿವೆ.

Related Articles

Leave a comment

Back to Top

© 2015 - 2017. All Rights Reserved.